ಮರಡಿಸಿದ್ದೆÃಶ್ವರ ದೇವಾಲಯದ ನೂತನ ಕಟ್ಟಡ ಉದ್ಘಾಟನೆ

0
57

ವಿಜಯಪುರ : ತಾಲೂಕಿನ ಶಿವಣಗಿ ಗ್ರಾಮದಲ್ಲಿ ಶ್ರಿÃ ಹಾಲ ಮರಡಿಸಿದ್ದೆÃಶ್ವರ ದೇವಾಲಯದ ನೂತನ ಕಟ್ಟಡ ಉದ್ಘಾಟನೆ ಹಾಗೂ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮ ಇದೇ ದಿ.೧೧ ರಿಂದ ೧೫ ರವರೆಗೆ ಜರುಗಲಿದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ದಿನಾಂಕ ೧೧ ರಂದು ಸಂಜೆ ಧರ್ಮದೇವರ ಪಲ್ಲಕ್ಕಿಗಳ ಆಗಮನವಾಗಲಿದೆ. ದಿನಾಂಕ ೧೨ ರಂದು ಬೆಳಿಗ್ಗೆ ೬ ಕ್ಕೆ ಸಾಮೂಹಿಕ ಜಪಯಜ್ಞ ನೆರವೇರಲಿದೆ. ಅದೇ ದಿನ ಬೆಳಿಗ್ಗೆ೮ ಕ್ಕೆ ವಾಸ್ತುಶಾಂತಿ, ಹೋಮ-ಹವನ, ಪ್ರಾಣ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ ೮ ರಿಂದ ೨೫ ದೇವರುಗಳ ಪಲ್ಲಕ್ಕಿ ಉತ್ಸವ ಸಕಲ ವಾದ್ಯವೈಭವಗಳೊಂದಿಗೆ ನೆರವೇರಲಿದೆ.

ಮಧ್ಯಾಹ್ನ ೨ ಗಂಟೆಗೆ ಧರ್ಮಸಭೆ ಆರಂಭವಾಗಲಿದೆ. ಕಾಗಿನೆಲೆ ಗುರುಪೀಠದ ಶ್ರಿÃ ನಿರಂಜನಾನಂದಪುರಿ ಮಹಾಸ್ವಾಮಿಗಳು, ತಿಂಥಣಿ ಕನಕಗುರುಪೀಠದ ಶ್ರಿÃ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು, ಶ್ರಿÃ ಈಶ್ವರಾನಂದಪುರಿ ಮಹಾಸ್ವಾಮಿಗಳು, ಶ್ರಿÃ ಮುರುಘರಾಜೇಂದ್ರ ಮಹಾಸ್ವಾಮಿಗಳು, ಶ್ರಿÃ ಬಸವರಾಜ ದೇವರು ಸೇರಿದಂತೆ ಹಲವಾರು ಮಠಾಧೀಶರು, ಮಹಾಸ್ವಾಮೀಜಿಗಳು ಸಾನಿಧ್ಯ ವಹಿಸುವರು.
ದಿನಾಂಕ ೧೩ ರಂದು ದೇವಾಲಯದ ಉದ್ಘಾಟನಾ ಸಮಾರಂಭ ವಿದ್ಯುಕ್ತವಾಗಿ ನೆರವೇರಲಿದೆ. ಬೆಳಿಗ್ಗೆ ೮ ಕ್ಕೆ ಶ್ರಿÃ ಹಾಲಮರಡಿ ಸಿದ್ದೆÃಶ್ವರ ದೇವರಿಗೆ ಮಹಾ ಅಭಿಷೇಕ ನೆರವೇರಲಿದೆ. ನಂತರ ಬೆಳಿಗ್ಗೆ ೧೦ ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ದೇವಾಲಯದ ಉದ್ಘಾಟನೆ ನೆರವೇರಿಸುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಮಾರಂಭ ಉದ್ಘಾಟಿಸುವರು. ತಿಂಥಣಿ ಕನಕಗುರುಪೀಠದ ಶ್ರಿÃ ಸಿದ್ಧರಾಮಾನಂದಪುರಿ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು. ಗೃಹ ಸಚಿವ ಎಂ.ಬಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ಆರೋಗ್ಯ ಸಚಿವ ಶಿವಾನಂದ ಪಾಟೀಲ, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ, ಕೇಂದ್ರ ಸಚಿವ ರಮೇಶ ಜಿಗಜಿಣಗಿ ಸೇರಿದಂತೆ ಹಲವಾರು ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಶ್ರಿÃ ಮರಡಿ ಸಿದ್ದೆÃಶ್ವರ ದೇವಾಲಯದ ಸೇವಾ ಸಮಿತಿ ಅಧ್ಯಕ್ಷ ಸಿದ್ಧಪ್ಪ ಕಕ್ಕಳಮೇಲಿ ಅಧ್ಯಕ್ಷತೆ ವಹಿಸುವರು.

ದಿನಾಂಕ ೧೪ ರಂದು ಬೆಳಿಗ್ಗೆ ೮ ಕ್ಕೆ ಮಾಯಮ್ಮನ ಹಬ್ಬ, ಮಧ್ಯಾಹ್ನ ಸನ್ಮಾನ ಸಮಾರಂಭ, ಅದೇ ದಿನ ರಾತ್ರಿ ೯ ಕ್ಕೆ ಶಿವಣಗಿಯ ಕಲಾವಿದರಿಂದ ಡೊಳ್ಳಿನ ಪದಗಳ ಗಾಯನ ಜರುಗಲಿದೆ. ದಿನಾಂಕ ೧೫ ರಂದು ಎಲ್ಲ ದೇವರುಗಳನ್ನು ಬೀಳ್ಕೊÃಡುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜರುಗಲಿದೆ ಎಂದು ದೇವಾಲಯ ಉತ್ಸವ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

loading...