ವ್ಯಾಪಾರ ಮಾತುಕತೆ ಮುಂದುವರಿಸಲು ಅಮೆರಿಕ-ಚೀನಾ ಒಪ್ಪಿಗೆ

0
3

ಮಾಸ್ಕೊ=ಅಮೆರಿಕ ಹಾಗೂ ಚೀನಾ ತಮ್ಮ ವ್ಯಾಪಾರ ಸಂಬಂಧ ಕುರಿತು ಮಾತುಕತೆ ನಡೆಸಲು ಒಪ್ಪಿಗೆ ಸೂಚಿಸಿವೆ ಎಂದು ಶ್ವೇತಭವನ ಹೇಳಿಕೆ ನೀಡಿದೆ.
ಅಮೆರಿಕ ವ್ಯಾಪಾರ ಪ್ರತಿನಿಧಿ ರಾಬರ್ಟ್ ಲೈಟಿಜರ್ ಹಾಗೂ ಚೀನಾದ ಉಪಾಧ್ಯಕ್ಷ ಅವರ ನೇತೃತ್ವದಲ್ಲಿ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಇಂದು ಸಂಜೆ ರಾಯಭಾರಿ ಲೈಟಿಜರ್ ಹಾಗೂ ಕಾರ್ಯದರ್ಶಿ ಮನ್ಚಿನ್, ಚೀನಾದೊಂದಿಗಿನ ವ್ಯಾಪಾರ ಮಾತುಕತೆಯನ್ನು ಮುಂದುವರಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ. ರಾಯಭಾರಿಗಳು ಹಾಗೂ ಕಾರ್ಯದರ್ಶಿಗಳು ಚೀನಾದ ಉಪಾಧ್ಯಕ್ಷ ಲಿ ಹೀ ಅವರ ಜೊತೆ ಔತಣಕೂಟದಲ್ಲಿ ಭಾಗಿಯಾಗಿ ಚರ್ಚೆ ಮುಂದುವರಿಸಲು ಒಪ್ಪಿಗೆ ಸೂಚಿಸಿದ್ದಾರೆ” ಎಂದು ಗುರುವಾರ ಜಾರಿಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಕಳೆದ ಜೂನ್ ತಿಂಗಳಲ್ಲಿ ವ್ಯಾಪಾರ ಕೊರತೆಯನ್ನು ಸರಿದೂಗಿಸಲು ಚೀನಾ ಸರಕುಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧರಿಸಿದ ನಂತರ ಉಭಯ ದೇಶಗಳ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರಿತ್ತು. ಇದಾದ ನಂತರ ಅಮೆರಿಕ ಹಾಗೂ ಚೀನಾ ವ್ಯಾಪಾರ ವೃದ್ಧಿ ಕುರಿತು ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ.

loading...