ಶರಣರ ಪ್ರವಚನ ಸಂಪನ್ನ

0
60

ಹಾನಗಲ್ಲ: ತಾಲೂಕಿನ ವಳಗೇರಿ ಗ್ರಾಮದಲ್ಲಿ ನಡೆದ ೫ ದಿನಗಳ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವು ಸಂಪನ್ನಗೊಂಡಿತು. ಪ್ರತಿದಿನ ಒಬ್ಬ ಮಠಾಧೀಶರು ಪ್ರವಚನ ನಡೆಸಿಕೊಟ್ಟಿದ್ದು ಇಲ್ಲಿನ ವಿಶೇಷತೆಯಾಗಿತ್ತು.
ಪ್ರವಚನದ ಮೊದಲ ದಿನದಂದು ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು ಶರಣರ ಪ್ರವಚನ ಹೇಳಿಕೊಡುವ ಮೂಲಕ ಚಾಲನೆ ನೀಡಿದರು. ಬಳಿಕ ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರವಚನ ನೀಡಿದರು.
ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ಮಹಿಳೆಯರ ಕುಂಭೋತ್ಸವ, ಬಸವೇಶ್ವರ ಭಾವಚಿತ್ರ ಮತ್ತು ಎತ್ತುಗಳನ್ನು ಸಿಂಗರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಎಂ.ಆರ್.ಪಾಟೀಲ, ಎಸ್.ಜಿ.ಹಿರೇಮಠ, ಜಿ.ಎಸ್.ಹೊಸಗೌಡ್ರ, ನಿಶಿಮ್ಮಪ್ಪ ವಾಲ್ಮಿÃಕಿ, ನಿಂಗಪ್ಪ ವಾಲ್ಮಿÃಕಿ, ವಿ.ಸಿ.ಅಂಗಡಿ, ಯಲ್ಲಪ್ಪ ಪೂಜಾರ, ಎಂ.ವಿ.ಹಳಕೊಪ್ಪರಗಿ, ಮೌಲಾಸಾಬ್ ವರ್ದಿ, ರುದ್ರಪ್ಪ ಮೆಳ್ಳಳ್ಳಿ, ಗದಿಗೆಪ್ಪ ಮಲಗುಂದ ಇದ್ದರು.

loading...