ಯುವ ಪ್ರತಿಭೆಗಳಿಗೆ ಸ್ಟುಡಿಯೋ ಸೂಕ್ತ ವೇದಿಕೆ: ಸಿದ್ದರಾಮೇಶ್ವರ ಸ್ವಾಮೀಜಿ

0
56

 

ಯಲಬುರ್ಗಾ: ಎಲೆ ಮರೆ ಕಾಯಿಯಂತಿರುವ ಯುವ ಪ್ರತಿಭೆಗಳಿಗೆ ಪುಟ್ಟರಾಜ ಕರೋಕೆ ಸ್ಟುಡಿಯೋ ಸೂಕ್ತ ವೇದಿಕೆ ಕಲ್ಪಿಸಿದ್ದು ಶ್ಲಾಘನೀಯ ಕಾರ್ಯ ಎಂದು ಸಂಸ್ಥಾನ ಹಿರೇಮಠದ ಷ.ಬ್ರ.ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಇಲ್ಲಿಯ ಮೋಗ್ಗಿ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಯಲಬುರ್ಗಾದ ಪುಟ್ಟರಾಜ ಕರೋಕೆ ಸ್ಟುಡಿಯೋ ಆಶ್ರಯದಲ್ಲಿ ವಾಯ್ಸ್ ಆಫ್ ಯಲಬುರ್ಗಾ ಸೀಜನ್-೧ ಪಿನಾಲೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರಿÃಗಳು, ಆರ್ಥಿಕವಾಗಿ ಹಿಂದುಳಿದಿದ್ದರು ಕೂಡಾ ಯಲಬುರ್ಗಾ ತಾಲೂಕು ಕಲೆ ಸಾಹಿತ್ಯ ಕ್ಷೆÃತ್ರಗಳಿಗೆ ಏನು ಕೊರತೆ ಇಲ್ಲ.ಆದರೆ ಯುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಇಲ್ಲದಿರುವದರಿಂದ ಬೆಳಕಿಗೆ ಬರಲು ಸಾಧ್ಯವಾಗುತ್ತಿಲ್ಲ.ಆದರೆ ಯಲಬುರ್ಗಾದ ಪುಟ್ಟರಾಜ ಕರೋಕೆ ಸ್ಟುಡಿಯೋ ಯುವ ಪ್ರತಿಭೆಗಳನ್ನು ಗುರ್ತಿಸುವ ಮೂಲಕ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಡುವ ಮೂಲಕ ಅವರನ್ನು ಬೆಳಕಿಗೆ ತಂದಿದ್ದು ಶ್ಲಾಘನೀಯ.ಮಾನವನಿಗೆ ಅಸಾಧ್ಯವಾದುದ್ದು ಯಾವುದು ಇಲ್ಲಾ.ಸಾಧಿಸುವ ಛಲವಿರಬೇಕು. ಜೋತೆಗೆ ಒಂದು ನಿರ್ದಿಷ್ಟವಾದ ಗುರಿಯಿರಬೇಕು. ಆಗ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು.ಮನಸ್ಸಿದ್ದರೆ ಮಾರ್ಗವಿದೆ ಎನ್ನುವುದಕ್ಕೆ ಇವತ್ತಿನ ಈ ವೇದಿಕೆ ಸಾಕ್ಷಿಯಾಗಿದೆ ಎಂದರು.

ಯಲಬುರ್ಗಾದ ಶ್ರಿÃಧರ ಮುರಡಿ ಹಿರೇಮಠದ ಷ.ಬ್ರ.ಬಸವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದ ಶ್ರಿÃಗಳು,ಕಲೆಗೆ ಹಳ್ಳಿ ಪಟ್ಟಣಗಳೆಂಬ ಬೇಧಭಾವವಿಲ್ಲ.ಅದು ದೈವದತ್ತ ಸರ್ವವ್ಯಾಪಿ.ಆದರೂ ಪೇಟೆ ನಗರಗಳಲ್ಲಿರುವ ಕಲಾವಿದರಂತೆ ಹಳ್ಳಿಯ ಕಲಾವಿದರೂ ಹೆಚ್ಚಾಗಿ ಸರಿಯಾದ ಪ್ರೊÃತ್ಸಾಹ ನಿರ್ದೇಶನಗಳಿಲ್ಲದೇ ಎಲೆಮರೆ ಕಾಯಿಗಳಾಗಿ ಕಮರಿ ಹೋಗುವುದೇ ಹೆಚ್ಚು.ಅಂಥವರನ್ನು ಗುರ್ತಿಸಿ,ಇವರಿಗೆ ಸೂಕ್ತ ವೇದಿಕೆ ಕಲ್ಪಿಸಿದ್ದು ಒಳ್ಳೆಯ ಕಾರ್ಯವಾಗಿದೆ.ಈ ಎಲ್ಲಾ ಪ್ರತಿಭೆಗಳು ರಾಜ್ಯ,ರಾಷ್ಟç ಮಟ್ಟದಲ್ಲಿ ಬೆಳೆಯುವ ಮೂಲಕ ತಾಲೂಕಿಗೆ ಹೆಸರು ತರುವಂತಾಗಲಿ ಎಂದರು.
ಶ್ರಿÃಪಾದಪ್ಪ ಅಧಿಕಾರಿ, ಬಸವಲಿಂಗಪ್ಪ ಭೂತೆ, ಬಸವರಾಜ ಉಳ್ಳಾಗಡ್ಡಿ, ಸಿ.ಎಚ್.ಪೋಲೀಸ್ ಪಾಟೀಲ್ ಸೇರಿದಂತೆ ಮತ್ತಿತರರು ಮಾತನಾಡಿದರು.ಇದೇ ಸಂದರ್ಭದಲ್ಲಿ ವಾಯ್ಸ್ ಆಫ್ ಯಲಬುರ್ಗಾ ಸೀಜನ್-೧ ಪಿನಾಲೆ ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತುಕ್ಕೂ ಹೆಚ್ಚು ಯುವ ಗಾಯಕರು ತಮ್ಮ ಸಿರಿಕಂಠದಿಂದ ಹಾಡುಗಳನ್ನು ಹಾಡುವ ಮೂಲಕ ಜನರನ್ನು ರಂಜಿಸಿದರು.ಬಿಜೆಪಿ ಹಿರಿಯ ಮುಖಂಡ ಕಳಕನಗೌಡ ಜುಮ್ಮಾಪೂರ,ಬಿಜೆಪಿ ಯುವ ಮುಖಂಡ ನವೀನಕುಮಾರ ಗುಳಗಣ್ಣನವರ್, ಕಳಕಪ್ಪ ಕಂಬಳಿ, ಸುರೇಶಗೌಡ ಶಿವನಗೌಡ್ರ, ವೀರಣ್ಣ ಹುಬ್ಬಳ್ಳಿ, ಸಿದ್ರಾಮೇಶ ಬೇಲೇರಿ, ಅಮರೇಶ ಹುಬ್ಬಳ್ಳಿ, ವಸಂತಕುಮಾರ ಭಾವಿಮನಿ, ಕಳಕಪ್ಪ ತಳವಾರ, ಅಶೋಕ ಅರಕೇರಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

loading...