ತರಕಾರಿ ಸಗಟು ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರ

0
75

ನಗರದ ಟ್ರಾಪಿಕ್ ಸಮಸ್ಯೆಗೆ ಮುಕ್ತಿ | ನಗರಾಭಿವೃದ್ಧಿಗೆ ಮೊದಲ ಹೆಜ್ಜೆ

ಮಾಲತೇಶ ಮಟಿಗೇರ
ಬೆಳಗಾವಿ: ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಕೃಷಿ ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕೆಂಬ ಬಹು ವರ್ಷಗಳ ಬೇಡಿಕೆ ಇಡೇರುತ್ತಿದ್ದು, ದಿನನಿತ್ಯ ಸಾರ್ವಜನಿಕರು ಅನುಭವಿಸುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗುತ್ತಿದೆ.


ಸಾರ್ವಜನಿಕರು ಹಾಗೂ ರೈತರ ಒತ್ತಾಯದ ಮೇರೆಗೆ ಹಾಗೂ ಸಿಎಂ ನಿರ್ದೇಶನ ಮೇಲೆ ಜಿಲ್ಲಾಡಳಿತದ ನೇತೃತ್ವದಲ್ಲಿ ಮೇ.೧೪ ರಂದು ಸಗಟು ತರಕಾರಿ ಮಾರುಕಟ್ಟೆಯನ್ನು ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಸುಮಾರು ೩ ಎಕರೆ ಜಾಗದಲ್ಲಿ ತರಕಾರಿ ಮಾರಾಟ ನಡೆಸಲಾಗುತ್ತಿದ್ದು, ಗೋವಾ,ಮಹಾರಾಷ್ಟç ಸೇರಿದಂತೆ ಅನೇಕ ರಾಜ್ಯಗಳಿಗೆ ತರಕಾರಿ ರಪ್ತು ಆಗಲಿದೆ. ದಿನನಿತ್ಯ ನಗರ ಹೃದಯ ಭಾಗದಲ್ಲಿ ಲಾರಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿತ್ತು. ಎಲ್ಲವನ್ನೂ ಗಂಭೀರವಾಗಿ ಪರಿಗಣಿಸಿದ ಎಪಿಎಂಸಿ ಆಡಳಿತ ಮಂಡಳಿ ೩-೪ ವರ್ಷಗಳ ಹಿಂದೆ ೬೯ ಕೋಟಿ ರೂ.ಗಳ ಯೋಜನೆ ರೂಪಿಸಿ ಸಾಲ, ಸ್ವಂತದ ಹಣ ಬಳಸಿ ಈಗಾಗಲೇ ೨೬ ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಳಿಸಿ. ವ್ಯವಸ್ಥಿತವಾದ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.


ಸುಸಜ್ಜಿತ ಅಂಗಡಿಗಳು: ದೇಶದಲ್ಲಿ ಗುಜರಾತ್ ಮಹರಾಷ್ಟç ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಉತ್ತಮ ರೀತಿಯಲ್ಲಿ ಮಾರುಕಟ್ಟೆಯನ್ನು ನಡೆಸುತ್ತಿದ್ದಾರೆ. ಅಂತಹ ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಿ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಲು ಜಿಲ್ಲಾಡಳಿತ, ಎಪಿಎಂಸಿ ಆಡಳಿತ ಮಂಡಳಿ ತಿರ್ಮಾನಿಸಿದೆ. ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿನ ಸಗಟು ತರಕಾರಿ ಮಾರುಕಟ್ಟೆಯಲ್ಲಿ ವಿದ್ಯುತ್, ನೀರು, ವಿಶಾಲವಾದ ರಸ್ತೆಗಳು, ಶೌಚಾಲಯ, ಬೀದಿ ದೀಪ ವ್ಯವಸ್ಥೆಗಳನ್ನು ಕಲ್ಪಿಸಲಾಗಿರುತ್ತದೆ. ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಎಪಿಎಂಸಿ ಜಂಟಿನಿರ್ದೇಶಕ, ಗುರುಪ್ರಸಾದ ಕೆ.ಎಚ್. ಕನ್ನಡಮ್ಮಕ್ಕೆ ತಿಳಿಸಿದ್ದಾರೆ.

ಪೊಲೀಸ್ ಸಿಬ್ಬಂದಿಗಳ ನಿಯೋಜನೆ: ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡುವುದರಿಂದ ದಂಡು ಮಂಡಳಿಯ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾಸ್ತರು ಮೇ.೧೪ರ ಬಳಿಕ ವ್ಯವಹಾರ ನಡೆಸಬಾರದೆಂದು ಜಿಲ್ಲಾಡಳಿತ ಆದೇಶಿಸಿದೆ. ಆದ್ದರಿಂದ ಆ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ ೧೯೬೬ರ ರನ್ವಯ ನಗರದ ಇತರೆ ಯಾವುದೇ ಪ್ರದೇಶದಲ್ಲಿ ಸಗಟು ತರಕಾರಿ ವ್ಯಾಪಾರ ವ್ಯವಹಾರವನ್ನು ಕೈಗೊಳ್ಳುವುದು ಕಾನೂನಿನನ್ವಯ ಅಪರಾಧವಾಗುತ್ತದೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಸಗಟು ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಕೃಷಿ ಮಾರುಕಟ್ಟೆಗೆ ಸ್ಥಳಾಂತರದಿಂದ ಆ ಭಾಗದ ಸಾರ್ವಜನಿಕರಿಗೆ ಟ್ರಾಫಿಕ್ ಹಾಗೂ ಜನಜಂಗೂಳಿಯಿಂದ ಮುಕ್ತಿ ಸಿಗಲಿದೆ. ಇನ್ನೊಂದೆಡೆ ರೈತರಿಗೆ ವ್ಯಾಪಾರದಲ್ಲಿ ನಡೆಯುವ ಮೊಸಕ್ಕೆ ಬ್ರೆÃಕ್ ಬಿಳಲಿದೆ.
=========ಬಾಕ್ಸ್==========
ಗಾಂಧಿ ನಗರದ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆಯ ಬದಿಯಲ್ಲಿ ಬೆಳಗಾವಿ ಉತ್ತರ ಕ್ಷೆÃತ್ರದ ಹಿಂದಿನ ಶಾಸಕ ಫಿರೋಜ್ ಸೇಠ್ ಕೇವಲ ಒಂದೇ ಸಮುದಾಯದವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅನಧಿಕೃತವಾಗಿ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಿಸಲು ಮುಂದಾಗಿದ್ದರು. ಆದರೆ ಅದು ಸಂಪೂರ್ಣ ಅವೈಜ್ಞಾಕತೆಯಿಂದ ಕೂಡಿದ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿನ ಕೆಲ ವ್ಯಾಪಾರಿಗಳು ಇದಕ್ಕೆ ವಿರೋಧ ಮಾಡಿದ ಹಿನ್ನೆಲೆಯಲ್ಲಿ ಆ ಕಟ್ಟಡ ನಿರ್ಮಾಣ ಕೈಬಿಡಲಾಯಿತು.
ಎಪಿಎಂಸಿ ಆವರಣದಲ್ಲಿ ಸರಕಾರದಿಂದ ಸುಸಜ್ಜಿತವಾದ ಕಟ್ಟಡದಲ್ಲಿ ಹೊಸ ಮಳಿಗೆಗಳನ್ನು ನಿರ್ಮಾಣ ಮಾಡಿ ವ್ಯಾಪಾರಿಗಳು ಹಾಗೂ ರೈತರಿಗೆ ನೇರವಾಗಿ ಸಂಪರ್ಕದ ಕೊಂಡಿಯಾಗುವ ಉದ್ದೆÃಶದಿಂದ ನಗರದ ಪೋರ್ಟ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುತ್ತಿರುವುದು ಹೆಮ್ಮೆಯ ಸಂಗತಿ.
ಫೋರ್ಟ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಿಂದ ವಾಹನ ಸವಾರರಿಗೆ ಕಿರಿಕಿರಿ ಹಾಗೂ ಪರಿಸರ ಹಾನಿಯಾಗುತ್ತಿತ್ತು. ಉಳಿದ ಹಸಿ ತರಕಾರಿಯನ್ನು ಕಿಲ್ಲಾ ಕೋಟೆಯ ಸುತ್ತಲು ಹಾಕುತ್ತಿರವುದರಿಂದ ಕೋಟೆಯ ಅಂದ ಕಳೆ ಗುಂದಿತ್ತು. ಪೋರ್ಟ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರಿಸುತ್ತಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

=========ಬಾಕ್ಸ್========

ಎಪಿಎಂಸಿ ಕೃಷಿ ಮಾರುಕಟ್ಟೆ ಸಂಕೀರ್ಣದಲ್ಲಿ ೧೩೨ ಸುಸಜ್ಜಿತ ಅಂಗಡಿಗಳನ್ನು ವಿಶಾಲವಾದ ಹರಾಜು ಕಟ್ಟೆಗಳೊಂದಿಗೆ ನಿರ್ಮಿಸಲಾಗಿರುತ್ತದೆ. ತರಕಾರಿ ವ್ಯಾಪಾರಸ್ಥರುಗಳಿಗೆ ಈಗಾಗಲೇ ೧೦೨ ಅಂಗಡಿಗಳನ್ನು ಹಂಚಿಕೆ ಮಾಡಲಾಗಿದೆ. ಮೇ.೧೪ ಮಂಗಳವಾರ ಸ್ಥಳಾಂತರವಾಗಲಿದೆ. ರೈತರಿಗೆ ಮರಾಟಗಾರರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಕೆ.ಎಚ್ ಗುರುಪ್ರಸಾದ್
ಜಂಟಿ ನಿರ್ದೇಶಕರು,ಕೃಷಿ ಮಾರಾಟ ಇಲಾಖೆ

loading...