ಜೋಯಿಡಾ ತಾಲೂಕಿನ ಕಾಡುಗಳಲ್ಲಿ ಬಿಯರ್ ಬಾಟಲಿಗಳು

0
46

ಸಂದೇಶ ದೇಸಾಯಿ
ಜೋಯಿಡಾ: ಕರ್ನಾಟಕದಲ್ಲೆÃ ಅತೀ ಹೆಚ್ಚು ಕಾಡನ್ನು ಹೊಂದಿದ ತಾಲೂಕು ಎಂಬ ಖ್ಯಾತಿ ಜೋಯಿಡಾ ತಾಲೂಕಿಗಿದೆ. ಪ್ರಕೃತಿ ಸೌಂದರ್ಯ ಇಲ್ಲಿ ತುಂಬಿ ತುಳುಕಾಡುತ್ತಿದೆ, ಇಂಥ ದೊಡ್ಡ ಅರಣ್ಯ ಪ್ರದೇಶ ಇಂದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ, ಅಷ್ಟೆÃ ಅಲ್ಲದೇ ಬೇಸಿಗೆಯಲ್ಲಿ ಹೊರ ರಾಜ್ಯಗಳಿಂದಲೂ ಇಲ್ಲಿ ಪ್ರಸಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಆದರೆ ಕೆಲ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನೆÃ ಹಾಳು ಮಾಡುವ ಕಿಡಿಗೆಡಿತನ ಮಾಡುತ್ತಿರುವುದು ವಿಪರ್ಯಾಸ.

ಕಾಡಿನಲ್ಲಿ ಮೋಜು- ಮಸ್ತಿ: ಜೋಯಿಡಾ ತಾಲೂಕು ಅರಣ್ಯ ಸಂಪತ್ತಿಗೆ ಹೆಸರುವಾಸಿ, ಇಲ್ಲಿ ದಿನ ನಿತ್ಯ ಸಾವಿರಾರು ಪ್ರವಾಸಿಗರು ಬಂದು ನಿಸರ್ಗ ಸೌಂದರ್ಯವನ್ನು ಸವಿಯುತ್ತಾರೆ, ಆದರೆ ಕೆಲ ಪ್ರವಾಸಿಗರು ಇಲ್ಲಿಯ ಕಾಡನ್ನು ನಾಶ ಮಾಡಲು ಹೊರಟಿದ್ದಾರೆ, ತಂಪಾದ ಗಾಳಿ ನೀಡುವ ಮರದ ಕೆಳಗೆ ಕುಳಿತು ಮದ್ಯಪಾನ, ಧೂಮಪಾನ ಮಾಡಿ, ಕಾಡಿನಲ್ಲಿ ದಾಂದಲೆ ಮಾಡುತ್ತಿದ್ದಾರೆ, ಅಷ್ಟೆÃ ಅಲ್ಲದೇ ಧ್ವನಿ ವರ್ಧಕಗಳನ್ನು ಬಳಸಿ ಕಾಡು ಪ್ರಾಣಿಗಳಿಗೆ ತೊಂದರೆ ನೀಡುತ್ತಿದ್ದಾರೆ, ಬಿಯರ್ ಬಾಟಲಿಗಳನ್ನು ಕಂಡ ಕಂಡಲ್ಲಿ ಎಸೆದು ಅದೂ ಕಾಡು ಪ್ರಾಣಿಗಳ ಕಾಲಿಗೆ ಚುಚ್ಚುವಂತಾಗಿದ್ದು ಇದು ಮೂಕ ಪ್ರಾಣಿಗಳಿಗೆ ನರಕಯಾತನೆಯಾಗಿದೆ. ಇಲ್ಲಿಯ ಪ್ರವಾಸಿ ತಾಣಗಳನ್ನು ನೋಡಲು ಬರುವ ಪ್ರವಾಸಿಗರು ಗುಡ್ಡ ಬೆಟ್ಟಗಳನ್ನು ನೋಡಿ ಆನಂದಿಸುವುದನ್ನು ಬಿಟ್ಟು ಅದನ್ನು ಹಾಳು ಮಾಡುತ್ತಿರುವುದು ಬೇಸರದ ಸಂಘತಿ.
ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿ: ಜೋಯಿಡಾ ತಾಲೂಕಿನ ಕಾಡುಗಳು ಇನ್ನೂ ಕೆಲ ವರ್ಷಗಳ ನಂತರ ಪ್ಲಾಸ್ಟಿಕ್ ಕಾಡು ಆದರೆ ಆಶ್ಚರ್ಯವೆನಿಲ್ಲ , ತಾಲೂಕಿನ ಎಲ್ಲಾ ರಸ್ತೆಯ ಇಕ್ಕೆಲಗಳಲ್ಲಿ ಪ್ಲಾಸ್ಟಿಕ್ ಕಸದ ರಾಶಿ ಹೆಚ್ಚಿದೆ, ಹೊರಗಿನಿಂದ ಬಂದ ಪ್ರವಾಸಿಗರು ರಸ್ತೆಯ ಪಕ್ಕದಲ್ಲಿಯೇ ಊಟ ಮಾಡಿ ಪ್ಲಾಸ್ಟಿಕ್‌ಗಳನ್ನು ಅಲ್ಲಿಯೇ ಏಸೆಯುತ್ತಿದ್ದಾರೆ, ಇದರಿಂದಾಗಿ ಪರಿಸರಕ್ಕೆ ಅಪಾರ ಹಾನಿ ಉಂಟಾಗುತ್ತಿದೆ, ಇಲ್ಲಿಯ ನದಿಯ ಪಕ್ಕದಲಂತು ಕಾಲು ಇಡುವ ಹಾಗೆಯೇ ಇಲ್ಲ, ಕಾಲಿಟ್ಟರೇ ಗಾಜಿನ ಬಾಟಲಿಗಳೇ ಚುಚ್ಚುತ್ತವೆ ಹೀಗಾಗಿ ಇಲ್ಲಿಗೆ ಬರುವ ಪ್ರಯಾಣಿಕನ್ನು ಕಾಯುವುದೇ ಅರಣ್ಯ ಇಲಾಕೆಗೆ ಒಂದು ದೊಡ್ಡ ಸವಾಲಾಗಿದೆ.

ಅರಣ್ಯ ಇಲಾಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ: ಪ್ರವಾಸಕ್ಕೆಂದು ಬಂದು ಮದ್ಯಪಾನ, ಧೂಮಪಾನ ಮಾಡುವ ಪ್ರವಾಸಿಗರ ಮೇಲೆ ಅರಣ್ಯ ಇಲಾಕೆ ಮುಲಾಜಿಲ್ಲದೆ ಕೇಸ್ ದಾಖಲಿಸಬೇಕು, ಮತ್ತು ಹೆಚ್ಚಿನ ದಂಡ ವಿಧಿಸಬೇಕು ಹೀಗಾದಾಗ ಮಾತ್ರ ಅರಣ್ಯ ಉಳಿಯಲು ಸಾಧ್ಯ ಮತ್ತು ಬೆಳೆಯಲು ಸಾಧ್ಯ ,ಹಾಗೆ ಸ್ವಚ್ಚವಾಗಿರಲು ಸಾಧ್ಯ, ನದಿಯ ಹತ್ತಿರ ಹಾಗೂ ಪ್ರವಾಸಿ ತಾಣಗಳ ಹತ್ತಿರ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನೇಮಿಸಿ ಕಸ ಎಸೆಯುವವರ ಮೇಲೆ ಮತ್ತು ಮೋಜು ಮಸ್ತಿ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಹೀಗೆ ಮಾಡಿದಾಗ ಮಾತ್ರ ಸ್ವಚ್ಚ ಕಾಡು ನಮ್ಮ ಜೋಯಿಡಾ ಎಂದು ಹೇಳಲು ಸಾಧ್ಯ.
ಅಪಾಯಕ್ಕೆ ಸಿಲುಕಿವೆ ಕಾಡು ಪ್ರಾಣಿಗಳು: ನಾವು ಮನುಷ್ಯರು ಬುದ್ಧಿವಂತ ಪ್ರಾಣಿಗಳು, ಆದರೆ ಕಾಡು ಪ್ರಾಣಿಗಳು ಹಾಗಲ್ಲ, ನದಿಯ ಹತ್ತಿರ ನೀರು ಕುಡಿಯಲು ಬಂದಾಗ ಪ್ಲಾಸ್ಟಿಕ್ ತಿನ್ನಬಹುದು, ಅಲ್ಲದೆ ಎಷ್ಟೂ ಪ್ರಾಣಿಗಳು ನಾವು ಬಿಟ್ಟ ಆಹಾರ ತಿನ್ನಲು ಬಂದು ಪಾತ್ರೆಯೊಳಗೆ ತಲೆ ಸಿಕ್ಕಿ ಹಾಕಿಕೊಳ್ಳಬಹುದು, ಪ್ರವಾಸಿಗರು ದಿನವಿಡಿ ಮೋಜು ಮಸ್ತಿ ಮಾಡುತ್ತಾ ನದಿಯ ತೀರದಲ್ಲೆÃ ಕಾಲ ಕಳೆದರೆ ಪ್ರಾಣಿಗಳು ನೀರು ಕುಡಿಯುವುದಾದರು ಹೇಗೆ ? ಕೆಲ ಪ್ರಾಣಿಗಳು ಪ್ಲಾಸ್ಟಿಕ್‌ಗಳನ್ನು ತಿಂದು ರೋಗಕ್ಕೆ ತುತ್ತಾಗುತ್ತಿವೆ, ಮಂಗಗಳಲ್ಲಿ ಬೇರೆ ಬೇರೆ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತಿರಲು ಇದೆ ಕಾರಣವಿರಬಹುದು.

ಕಾಡನ್ನು ಉಳಿಸುವ ಮನುಷ್ಯರೇ ಕಾಡು ಹಾಳು ಮಾಡಬಾರದು, ವನ್ಯಜೀವಿ ವಲಯದಲ್ಲಿ ಮದ್ಯಪಾನ ಮಾಡಿ ಕಸಗಳನ್ನು ಚೆಲ್ಲಲು ಅವಕಾಶವಿಲ್ಲ, ಹೀಗೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷವೂ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೆÃವೆ.

ಎಸ್.ತೋಡ್ಕರ
ಎ.ಸಿ.ಎಪ್ ಅಣಶಿ ವಿಭಾಗ

loading...