ಹಳಿಯಾಳ ತ್ಯಾಜ್ಯ ವಿಲೇವಾರಿ ಕಾರ್ಯ ಪರಿಶೀಲಿಸಿದ ಗದಗ ಜಿಲ್ಲೆಯ ನಿಯೋಗ

0
81

ಹಳಿಯಾಳ: ತ್ಯಾಜ್ಯ ವಿಲೇವಾರಿಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದು ಮಾದರಿಯಾದ ಹಳಿಯಾಳ ಪಟ್ಟಣಕ್ಕೆ ಗದಗ ಜಿಲ್ಲೆಯ ಸ್ಥಳೀಯ ನಗರ ಹಾಗೂ ಪಟ್ಟಣ ಸಂಸ್ಥೆಗಳ ನಿಯೋಗವು ಬುಧವಾರ ಆಗಮಿಸಿ ಘನತ್ಯಾಜ್ಯ ವಿಲೇವಾರಿಯ ಅಧ್ಯಯನ ನಡೆಸಿತು.
ಹಳಿಯಾಳ ಪುರಸಭೆಯು ಮನೆ-ಮನೆಯಿಂದಲೇ ಸಂಗ್ರಹಿತ ಘನತ್ಯಾಜ್ಯವನ್ನು ಹಸಿಕಸ ಹಾಗೂ ಒಣಕಸ ಎಂದು ವಿಂಗಡಿಸಿ ಪಡೆದು ಒಂದೆಡೆಯಲ್ಲಿ ಕ್ರೂಢೀಕರಿಸಿ ‘ಕಸದಿಂದ ರಸ’ ಎಂಬ ಮಾತಿನಂತೆ ಹಸಿಕಸದಿಂದ ಸಾವಯವ ಗೊಬ್ಬರ ತಯಾರಿಸುವುದು ಮತ್ತು ಒಣಕಸದಲ್ಲಿನ ಪ್ಲಾಸ್ಟಿಕ್, ಕಾಗದ, ರಟ್ಟನ್ನು ಪ್ರತ್ಯೆÃಕಿಸುವುದು ತದನಂತರ ಅದನ್ನು ಮಾರಾಟ ಮಾಡುವ ವ್ಯವಸ್ಥೆ ಸಹ ಅನುಷ್ಠಾನಗೊಂಡಿರುವ ಬಗ್ಗೆ ವಿವರಣೆ ಪಡೆಯಲಾಯಿತು.

ಗದಗ, ಬೆಟಗೇರಿ ನಗರಸಭೆ, ಗದಗ ಜಿಲ್ಲೆಯ ಪುರಸಭೆಗಳಾದ ಶಿರಹಟ್ಟಿ, ಮುಂಡರಗಿ, ರೋಣ, ನರಗುಂದ, ಗಜೇಂದ್ರಗಡ, ಮುಳಗುಂದ ಮತ್ತು ನರೇಗಲ್ ಪಟ್ಟಣ ಪಂಚಾಯತಗಳು ಇವುಗಳ ವತಿಯಿಂದ ಗದಗ-ಬೆಟಗೇರಿ ನಗರಸಭೆಯ ಪರಿಸರ ಇಂಜಿನೀಯರ್ ಆನಂದ ಬದಿ, ನರಗುಂದ ಪುರಸಭೆಯ ಹಿರಿಯ ನೈರ್ಮಲ್ಯಾಧಿಕಾರಿ ಬಸವರಾಜ ದೊಡ್ಡಮನಿ ಇವರುಗಳ ನೇತೃತ್ವದಲ್ಲಿ ಮೂವರು ಹಿರಿಯ ಆರೋಗ್ಯ ನಿರೀಕ್ಷಕರು, ೧೦ ನೈರ್ಮಲ್ಯಾಧಿಕಾರಿಗಳು, ೨೮ ಪೌರ ಕಾರ್ಮಿಕರು ಹೀಗೆ ಒಟ್ಟು ೪೦ಕ್ಕೂ ಹೆಚ್ಚಿನ ಸಂಖ್ಯೆಯ ಪೌರಾಡಳಿತ ಸಿಬ್ಬಂದಿಗಳು ನಿಯೋಗದಲ್ಲಿದ್ದರು.
ಹಳಿಯಾಳ ಪಟ್ಟಣದಲ್ಲಿ ಪುರಸಭೆಯ ಪೌರಕಾರ್ಮಿಕರು ೪ ಚಕ್ರಗಳ ವಾಹನಗಳ ಸಮೇತ ತೆರಳಿ ಓಣಿ-ಓಣಿಗಳಲ್ಲಿ ಸಂಚರಿಸಿ ತ್ಯಾಜ್ಯವನ್ನು ಸಾರ್ವಜನಿಕರಿಂದ ಹಸಿಕಸ, ಒಣಕಸ ಎಂದು ಪ್ರತ್ಯೆÃಕವಾಗಿ ಪಡೆಯುವುದನ್ನು ಗಮನಿಸಲು ನಿಯೋಗದಲ್ಲಿ ಬಂದಿದ್ದ ಸಿಬ್ಬಂದಿಗಳು ಹಳಿಯಾಳ ಪುರಸಭೆ ಸಿಬ್ಬಂದಿಗಳೊಂದಿಗೆ ಓಣಿಗಳಿಗೆ ಸಂಚರಿಸಿದರು. ತದನಂತರ ಪಟ್ಟಣದ ಹೊರವಲಯದ ಬಾಮಣಿಕೊಪ್ಪ ಪ್ರದೇಶದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೂ ಸಹ ಭೇಟಿ ನೀಡಲಾಯಿತು.

ಹಳಿಯಾಳ ಪುರಸಭೆಯ ಇಂಜಿನೀಯರ್ ಜಿ.ಆರ್. ಹರೀಶ, ತೆರಿಗೆ ವಿಭಾಗದ ಮುಖ್ಯಸ್ಥ ಅಶೋಕ ಸಾಳೆಣ್ಣವರ, ನೈರ್ಮಲ್ಯಾಧಿಕಾರಿ ಪರಶುರಾಮ ಶಿಂಧೆ, ಆಡಳಿತ ವಿಭಾಗದ ಚಂದು ನಿಂಗನಗೌಡಾ, ವಸತಿ ವಿಭಾಗದ ರಾಮಚಂದ್ರ ಮೋಹಿತೆ, ನೀರು ಸರಬರಾಜು ವಿಭಾಗದ ಪ್ರಕಾಶ ಟೋಸೂರ ಹಾಗೂ ನೈರ್ಮಲ್ಯ ವಿಭಾಗದ ಇತರೇ ಸಿಬ್ಬಂದಿಗಳು ಹಾಜರಿದ್ದರು.

loading...