ಸಾಮೂಹಿಕ ದೀಕ್ಷೆ ನೀಡುವ ಧಾರ್ಮಿಕ ಕಾರ್ಯಕ್ರಮ

0
31

ವಿಜಯಪುರ : ಧಾರ್ಮಿಕ ಕಾರ್ಯ ಹಾಗೂ ಸತ್ಕಾರ್ಯಗಳಿಂದ ಧರ್ಮ ಉಳಿಯುತ್ತದೆ ಎಂದು ತಡವಲಗಾ ಹಿರೇಮಠದ ಶ್ರಿÃ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹೇಳಿದರು.
ನೂತನ ತಾಲೂಕಾ ಕೇಂದ್ರ ತಿಕೋಟಾದ ಗುರುಭವನದಲ್ಲಿ ಅರ್ಚಕ ಚಂದ್ರಶೇಖರಯ್ಯಾ ಹಿರೇಮಠ ಅವರ ಪುತ್ರ ಉದಯೇಶ್ವರಯ್ಯ ಅವರ ದೀಕ್ಷಾ ಕಾರ್ಯ ಹಿನ್ನೆಲೆಯಲ್ಲಿ ೨೫ ಜಂಗಮ ವಟುಗಳಿಗೆ ಉಚಿತ ಸಾಮೂಹಿಕ ದೀಕ್ಷಾ ಕಾರ್ಯದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಪ್ರತಿಯೊಬ್ಬರು ಧಾರ್ಮಿಕ ಕಾರ್ಯ, ಸತ್ಕಾರ್ಯ ಕೈಗೊಂಡರೆ ಧರ್ಮ ಉಳಿಯಲು ಸಾಧ್ಯ ಎಂದರು.

ಸಾಮೂಹಿಕ ದೀಕ್ಷಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಹಂದಿರ ಹಾಕುವ ಕಾರ್ಯಕ್ರಮ, ನಂತರ ನೂಲು ಸುತ್ತುವುದು, ಒಟುಗಳಿಗೆ ಎಣ್ಣೆ ಅರಿಷಿಣ ನೀಡುವುದು, ನಂತರ ಗುರುಪಾದೋದಕ ಜೋತೆಗೆ ಪಂಚಾಮೃತ, ಪಂಚಕಳಸ ಮಾಡಿ, ಪಂಚಾಚಾರ್ಯನ ಪ್ರತಿಷ್ಠಾಪನೆ ನೇರವೇರಿಸಲಾಯಿತು. ಗಂಗಾಕಳಸ ಪೂಜೆ, ಮಹಾಗಣಪತಿ ಪೂಜೆ, ರುದ್ರ ಪಠಣ ನಡೆಯಿತು. ವಿಯಜಪುರದ ಸಿದ್ದಾರಾಮಯ್ಯಾ ಶಾಸ್ತಿçÃಜಿ, ಚಿದಾನಂದ ಶಾಸ್ತಿçÃ, ಶಂಭುಲಿಂಗ ಶಾಸ್ತಿçÃಜಿ ವಿವಿಧ ಧಾರ್ಮಿಕ ಕಾರ್ಯ ನಡೆಸಿದರು.
ಜಂಗಮ ಸಮಾಜದ ಮುಖಂಡ ಬಸಯ್ಯಾವಿಭೂತಿ ಮಾತನಾಡಿದರು. ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪ್ರಗತಿಪರ ರೈತ ಪ್ರಕಾಶ ಗಣಿ ಅಧ್ಯಕ್ಷತೆ ವಹಿಸಿದ್ದರು.

ಬಾಬುಸಾಹುಕಾರ ಮೇತ್ರಿ, ಜಗದೀಶಗೌಡ ಪಾಟೀಲ, ತಾಲೂಕಾ ಪಂಚಾಯತ ಸದಸ್ಯೆ ಪ್ರಭಾವತಿ ನಾಟೀಕಾರ, ಭಾಗಿರಥಿ ತೇಲಿ, ರಾವತ್ ಕಂಬಾರ, ಅಶೋಕ ಬಾಬಾರ, ಡಾ ಗುರುರಾಜ ನಾಗಠಾಣ, ಹಾಜಿಲಾಲ ಬಾಗವಾನ, ವಿಜಯಕುಮಾರ ಹಿರೇಮಠ, ನಿಂಗಪ್ಪಾ ಗುರಕಿ, ವಿಠ್ಠಲ ಕೋಲಾರ, ವಿಜಯಕುಮಾರ ಪಾಟೀಲ, ಚನ್ನಪ್ಪಾ ಕೋರಿ ,ಚನಯ್ಯಾ ಗವಿಮಠ. ರಾಜಶೇಖರಯ್ಯಾ ಮಠಪತಿ, ಸಂತೋಷ ಕೋಲಾರ, ಅಪ್ಪಯ್ಯಾ ಕೋಲಲಮಠ, ಗಿರಮಲಯ್ಯಾ ಮಠಮತಿ, ಮಲಯ್ಯಾ ಸಾಲಿಮಠ ಉಪಸ್ಥಿತರಿದ್ದರು.
ಚನ್ನಬಸಯ್ಯಾ ಮಠ ಸ್ವಾಗತಿಸಿದರು. ಡಾ.ಪ್ರಮೋದ ಮಠಪತಿ ವಂದಿಸಿದರು.

loading...