ಕಾರವಾರ ಮೆಡಿಕಲ್ ಕಾಲೇಜು ಪಕ್ಕದಲ್ಲಿ ನಿರ್ಮಾಣಗೊಳ್ಳಲಿರುವ ೧೨೫ ಕೋಟಿ ರೂ. ವೆಚ್ಚದ ನೂತನ ಆಸ್ಪತ್ರೆಗೆ ನೀಲನಕ್ಷೆ ಸಿದ್ಧ

0
50

 

ದೀಪಕ ಶೆಟ್ಟಿ
ಕಾರವಾರ: ಇಲ್ಲಿನ ಕಿಮ್ಸ್ (ಕಾರವಾರ ವೈದ್ಯಕೀಯ ಕಾಲೇಜು) ಪಕ್ಕದಲ್ಲಿ ೧೨೫ ಕೋಟಿ ರೂ. ವೆಚ್ಚದ ೪೫೦ ಹಾಸಿಗೆಯ ಅತ್ಯಾಧುನಿಕ ನೂತನ ಆಸ್ಪತ್ರೆಗೆ ನೀಲನಕ್ಷೆ ತಯಾರಾಗಿದ್ದು, ಇದರಿಂದ ನಗರದ ಜನತೆಯ ಬಹುದಿನಗಳ ಬೇಡಿಕೆ ನನಸಾಗಲಿದೆ.

ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೊದಲ ಬ್ಯಾಚ್ ೨೦೨೦ಕ್ಕೆ ಪದವಿ ಪಡೆದುಕೊಂಡು ಹೊರಬರಲಿದ್ದು, ಮೆಡಿಕಲ್ ಕಾಲೇಜಿನ ಕೊನೆ ವರ್ಷದ ಮಾನ್ಯತೆಗೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ವಿಧಿಸಿದ್ಧ ಶರತ್ತಾದ ೪೫೦ ಹಾಸಿಗೆಗಳ ನೂತನ ಆಸ್ಪತ್ರೆಯ ನಿರ್ಮಾಣಕ್ಕೆ ನೀಲನಕಾಶೆ ಸಿದ್ಧವಾಗಿದೆ. ಹೊಸ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಅಂತಿಮ ಹಂತದ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆಯುತ್ತಿದೆ. ೧೨೫ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ನೀಡಿದ್ದು, ಹಣಕಾಸು ಇಲಾಖೆ ೪೫೦ ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಲು ಮುಂದಾಗಿದೆ. ಜೊತೆಗೆ ಎಂಬಿಬಿಎಸ್ ವಿದ್ಯಾರ್ಥಿಗಳ ಸಂಖ್ಯೆ ಇದೇ ಶೈಕ್ಷಣಿಕ ವರ್ಷ ೩೦೦ ತಲುಪಲಿದ್ದು, ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್‌ನ ಮತ್ತೊಂದು ಮಹಡಿ ನಿರ್ಮಿಸಲು ಸರ್ಕಾರ ಹೆಚ್ಚುವರಿಯಾಗಿ ೨೫ ಕೋಟಿ ರೂ. ಮಂಜೂರಿಮಾಡಿದೆ. ಮಳೆಗಾಲ ಮುಗಿಯುತ್ತಿದ್ದಂತೆ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಮನಗೆಲ್ಲಲು ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕಾರವಾರ ಮೆಡಿಕಲ್ ಕಾಲೇಜು ನಿರ್ದೇಶಕರು ಸಕಲ ಸಿದ್ಧತೆಗಳನ್ನು ಮಾಡಿಕೊಂಡು, ಸರ್ಕಾರದ ಪರವಾಗಿ ಎಂಸಿಎ ಎದುರು ಕಾರವಾರ ಮೆಡಿಕಲ್ ಕಾಲೇಜಿನ ಪ್ರಗತಿ ಮತ್ತು ಸೌಲಭ್ಯಗಳನ್ನು ವಿವರಿಸಿದ್ದಾರೆ. ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮೂರನೇ ವರ್ಷದಿಂದ ಮೊದಲ ವರ್ಷದತನಕ ೪೫೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ೭ ಪ್ಯಾರಾ ಮೆಡಿಕಲ್ ಕೋರ್ಸಗಳು ನಡೆಯುತ್ತಿದ್ದು, ೧೪೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರತಿ ವರ್ಷ ೬೦ ವಿದ್ಯಾರ್ಥಿನಿಯರು ನರ್ಸಿಂಗ್ ಕಲಿಯುತ್ತಿದ್ದಾರೆ. ೨೦೧೬ ರಿಂದ ನರ್ಸಿಂಗ್ ವಿದ್ಯಾರ್ಥಿಗಳು ಕಲಿತು ಹೊರ ಬರುತ್ತಿದ್ದಾರೆ. ೧೦೦ ಜನ ವೈದ್ಯರು ಮೆಡಿಕಲ್ ಕಾಲೇಜು ಹಾಗೂ ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು, ಆಸ್ಪತ್ರೆಗೆ ಬರುವ ಹೊರ ರೋಗಿಗಳ ಸಂಖ್ಯೆ ಸಾವಿರ ದಾಟಿದೆ. ೩೦೦ ಜನ ಒಳರೋಗಿಗಳಾಗಿ ದಾಖಲಾಗುತ್ತಿದ್ದಾರೆ. ಎಕ್ಸರೇ, ಬ್ಲಡ್ ಬ್ಯಾಂಕ್, ಪ್ರಯೋಗಾಲಯ, ಟ್ರೊÃಮೊ ಸೆಂಟರ್(ಮೊದಲ ಹಂತ) ಉನ್ನತೀಕರಣ ಗೊಂಡಿವೆ. ಅಪರೇಶನ್ ಥೇಟರ್ ಸಂಖ್ಯೆ ೩ ರಿಂದ ೫ ಕ್ಕೆ ಹೆಚ್ಚಿಸಲಾಗಿದೆ. ಔಷಧಿ ಸಂಗ್ರಹ ಉಗ್ರಾಣ ನವೀಕರಣವಾಗಿದೆ.

ಮೆಡಿಕಲ್ ಕಾಲೇಜು ಸ್ಥಾಪನೆಯ ನಂತರ: ಸ್ಪೆಶಲಿಸ್ಟ್ ತಜ್ಞ ವೈದ್ಯರ ಸೇವೆ ಒದಗಿಸುವ ಸುವರ್ಣ ಆರೋಗ್ಯ ಸುರಕ್ಷಾ ಯೋಜನೆಯನ್ನು ೨೦೧೬ ರಿಂದ ಅನುಷ್ಠಾನಗೊಳಿಸಲಾಗಿದೆ. ೭ ವಿಷಯಗಳಲ್ಲಿ ಸೂಪರ್‌ಸ್ಪೆಶಲಿಸ್ಟ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ೪ ವಿಷಯಗಳಲ್ಲಿ ಪಿ.ಜಿ. ಕೋರ್ಸನ್ನು ೨೦೧೮ರಿಂದ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ದ್ವಿತಿಯ ಹಂತದ ಟ್ರಾಮಾಕೇಂದ್ರ ಸ್ಥಾಪನೆ ಕಾರ್ಯ ಅನುಮೋದನೆಯ ಹಂತದಲ್ಲಿದೆ. ೨೦೧೮ ರಿಂದ ವಿಮಾ ಕಾರ್ಮಿಕರಿಗೆ ತಜ್ಞ ಸೇವೆ ಒದಗಿಸುವ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.೨೦೧೭ ರಿಂದ ರೋಗಿಗಳ ಸಂಬಂಧಿಕರುಗಳಿಗೆ ಸ್ವಯಂ-ಸೇವಾ ಸಂಘದ ಮೂಲಕ ಉಚಿತ ಊಟ ವಿತರಿಸಲಾಗುತ್ತಿದೆ. ಸ್ವಯಂ ದೇಹದಾನ ಮಾಡಲು ಸಹಕಾರ ಸಂಘವನ್ನು ನೋಂದಾಯಿಸಲಾಗಿದೆ ಮತ್ತು ಮೆಡಿಕಲ್ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗಾಗಿ ಐ.ಎಂ.ಎ. ಘಟಕವನ್ನು ಸ್ಥಾಪಿಸಲಾಗಿದೆ. ಹಳ್ಳಿಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಹಾಗೂ ರೇಡಿಯೋ ಕಾರ್ಯಕ್ರಮದ ಮೂಲಕ ಜಾಗೃತಿ ಉಂಟು ಮಾಡಲಾಗುತ್ತಿದೆ. ಸುಲಭ ಶೌಚಾಲಯ, ಬಸ್‌ನಿಲ್ದಾಣ ಹಾಗೂ ಹಾಲು ವಿತರಣಾ ಫಟಕಗಳನ್ನು ಸ್ಥಾಪಿಸಲಾಗಿದೆ. ಸುಸಜ್ಜಿತವಾದ ೨ ಅಂಬ್ಯುಲೆನ್ಸ್ಗಳನ್ನು ಖರೀದಿ ಮಾಡಲು ಸರ್ಕಾರದ ಅನುಮತಿ ಕೇಳಲಾಗಿದೆ.
ಉಚಿತ ಸಿ.ಟಿ. ಸ್ಕಾö್ಯನ್ ಸೇವೆ ಪ್ರಾರಂಭ: ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಬಿಪಿಎಲ್ ಸೇರಿದಂತೆ ಎಪಿಎಲ್ ಮತ್ತು ಶ್ರಿÃಮಂತರಿಗೂ ಸಹ ಉಚಿತವಾಗಿ ಸಿ.ಟಿ.ಸ್ಕಾö್ಯನ್ ಸೌಲಭ್ಯ ದೊರೆತಿದೆ. ಜನರು ತುರ್ತು ಸಂದರ್ಭದಲ್ಲಿ ಸಿ.ಟಿ.ಸ್ಕಾö್ಯನ್ ಸೌಲಭ್ಯ ಪಡೆಯ ಬಹುದಾಗಿದೆ. ಓಪಿಡಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದು ಸಾವಿರ ತಲುಪಿದೆ. ಇದಕ್ಕೆ ತಕ್ಕಂತೆ ವಾರ್ಡ ಸಂಖ್ಯೆ ಹೆಚ್ಚಿದ್ದು, ೮೦ ಕ್ಕೂ ಹೆಚ್ಚು ವೈದ್ಯರು ಪಾಳಿಯ ಮೇಲೆ ರೋಗಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹಾಗಾಗಿ ಮೆಡಿಕಲ್ ಕಾಲೇಜಿನ ಪ್ರಯೋಜನ ನಿಧಾನಕ್ಕೆ ಜನರನ್ನು ತಲುಪತೊಡಗಿದೆ. ಕ್ಯಾನ್ಸರ್ ಆಸ್ಪತ್ರೆ ಘಟಕ ಸ್ಥಾಪನೆಗೆ ಸರ್ಕಾರ ಸಮ್ಮಿತಿಸಿದ್ದು, ಇದಕ್ಕಾಗಿ ಪ್ರತ್ಯೆÃಕ ವಾರ್ಡಗೆ ೫ ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ.

——-ಕೋಟ್————
ಕಾರವಾರ ಮೆಡಿಕಲ್ ಕಾಲೇಜಿನ ಕನಸು ನನಸಾಗಿದೆ. ವೈದ್ಯಕೀಯ ಸೌಲಭ್ಯಗಳು ನಿಧಾನಕ್ಕೆ ಜನರನ್ನು ತಲುಪುತ್ತಿದೆ. ಇನ್ನೊಂದು ವರ್ಷದಲ್ಲಿ ಹೆಚ್ಚಿನ ವೈದ್ಯಕೀಯ ಸೌಕರ್ಯ ಜನತೆಯನ್ನು ತಲುಪಲಿವೆ. ೪೫೦ ಹಾಸಿಗೆಗಳ ನೂತನ ಆಸ್ಪತ್ರೆಯ ಕಟ್ಟಡ ಸಹ ಇನ್ನೊಂದು ವರ್ಷದಲ್ಲಿ ಬರಲಿದೆ. ಎಂಬಿಬಿಎಸ್ ವಿದ್ಯಾರ್ಥಿಗಳು ಮೊದಲ ಬ್ಯಾಚ್ ಸಹ ೨೦೨೦ಕ್ಕೆ ಹೊರ ಬರಲಿದೆ. ಡಾ. ಶಿವಾನಂದ ದೊಡ್ಮನಿ ನಿರ್ದೇಶಕರು. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ. ಕಾರವಾರ.

loading...