ಮೌಂಟ್‌ ಎವರೆಸ್ಟ್‌ ಶಿಖರವೇರಿದ ಆಫ್ರಿಕಾದ ಮೊದಲ ಕಪ್ಪು ವರ್ಣದ ಮಹಿಳೆ

0
3

ಜೊಹಾನ್ಸ್‌ಬರ್ಗ್‌:- ದಕ್ಷಿಣ ಆಫ್ರಿಕಾದ ಪರ್ವತಾರೋಹಿ ಸರೇ ಖುಮಾಲೊ ಅವರು ಮೌಂಟ್‌ ಎವರೆಸ್ಟ್‌ ಶಿಖರವನ್ನೇರಿದ ಆಫ್ರಿಕಾದ ಮೊದಲ ಕಪ್ಪು ವರ್ಣದ ಮಹಿಳೆ ಎಂಬ ಹೆಗ್ಗಳಿಕೆಗೆ ಗುರುವಾರ ಪಾತ್ರರಾಗಿದ್ದಾರೆ.ತಮ್ಮ ರಾಷ್ಟ್ರದ ಮಕ್ಕಳ ಶಿಕ್ಷಣಕ್ಕಾಗಿ ದತ್ತಿ ಹಣ ಸಂಗ್ರಹಿಸಲು ಕಳೆದ ಆರು ವರ್ಷಗಳಿಂದ ಪರ್ವತಾರೋಹಣದಲ್ಲಿ ತೊಡಗಿಸಿಕೊಂಡಿರುವ ಖುಮಾಲೊ, ವಿಶ್ವದ ವಿವಿಧ ಪರ್ವತಗಳನ್ನು ಏರಿದ ಅನುಭವವನ್ನೂ ಹೊಂದಿದ್ದಾರೆ.

“ಕೆಲ ಸಮಯದ ಹಿಂದಷ್ಟೇ, ಸರೇ ಎನ್ಕುಸಿ ಖುಮಾಲೊ ವಿಶ್ವದ ಅತ್ಯಂತ ಎತ್ತರದ ಸ್ಥಳ ತಲುಪಿದ್ದಾರೆ. ಝಾಂಬಿಯಾ ಮೂಲದವರಾದ ಅವರು ಈಗ ದಕ್ಷಿಣ ಆಫ್ರಿಕಾದ ನಿವಾಸಿ. ಆಫ್ರಿಕಾದ ಈ ಸಹೋದರಿ ಇದೀಗ ಮೌಂಟ್‌ ಎವರೆಸ್ಟ್‌ ಹತ್ತಿದ ಆಫ್ರಿಕಾದ ಕಪ್ಪು ವರ್ಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ,” ಎಂದು ಖುಮಾಲೊ ಅವರನ್ನು 2013ರಿಂದ ಬೆಂಬಲಿಸುತ್ತಾ ಬಂದಿರುವ ಸಂಸ್ಥೆಯೊಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

ಎರಡು ದಿನಗಳ ಹಿಂದಷ್ಟೆ ಬೇಸ್‌ ಕ್ಯಾಂಪ್‌ ತಲುಪಿ ಫೋಟೊ ಪ್ರಕಟಿಸಿದ್ದ ಖುಮಾಲೊ, ಇದೀಗ ಎವರೆಸ್ಟ್‌ನ ತುತ್ತ ತುದಿ ತಲುಪಿದ್ದಾರೆ. 29,029 ಅಡಿ ಎತ್ತರದ (8,848 ಮೀ.) ಎವರೆಸ್ಟ್‌ ಹತ್ತಲು ಖುಮಾಲೊ ಅವರ ನಾಲ್ಕನೇ ಪ್ರಯತ್ನ ಇದಾಗಿದೆ. 2014ರಲ್ಲಿ ಕೆಟ್ಟ ಹವಾಮಾನ ಕಾರಣ ಸಾಧ್ಯವಾಗಿರಲಿಲ್ಲ. 2015ರಲ್ಲೂ ಭೂಕಂಪನದಿಂದ ಸಾಧ್ಯವಾಗಿರಲಿಲ್ಲ.
ಇನ್ನು 2012ರಲ್ಲಿ ಖುಮಾಲೊ ಅವರು ತಾನ್ಝೇನಿಯಾದ ಮೌಂಟ್‌ ಕಿಲಿಮಂಜಾರೊ (5,895 ಮೀ) ಮತ್ತು ಅರ್ಜೆಂಟೀನಾದ ಅಕೋನ್‌ಕಾಗುವಾ (6,962 ಮೀ.) ಶಿಖರಗಳನ್ನೇರಿದ್ದರು.

loading...