ಮುಂದಿನ ರಾಜಕಾರಣಕ್ಕಾಗಿ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯಿಂದ ವಿಚಾರ ಸಂಕೀರ್ಣ-ಶಾಸಕ ಹಾಲಪ್ಪ ಆಚಾರ

0
20

 

ಯಲಬುರ್ಗಾ: ತಾಲೂಕಿನಲ್ಲಿ ೩೦ ವರ್ಷ ಅಧಿಕಾರವನ್ನು ಅನುಭವಿಸಿದ್ದರು ಕೂಡಾ ಹನಿ ನೀರಾವರಿ ಯೋಜನೆಗೆ ಚಿಂತಿಸದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಸೋಲಿನ ಹತಾಶೆ ಮನೋಭಾವನೆಯಿಂದಾಗಿ ಇವತ್ತು ತಮ್ಮ ಮುಂದಿನ ರಾಜಕೀಯ ಲಾಭಕ್ಕಾಗಿ ನೀರಾವರಿ ಯೋಜನೆ ಕುರಿತು ವಿಚಾರ ಸಂಕೀರ್ಣಕ್ಕೆ ಮುಂದಾಗುತ್ತಿದ್ದು ನೋಡಿದರೆ ರಾಜಕಾರಣಕ್ಕಾಗಿ ಇಂಥ ವಿಚಾರ ಸಂಕೀರ್ಣಕ್ಕೆ ಮುಂದಾಗಿದ್ದಾರೆಂದು ಶಾಸಕ ಹಾಲಪ್ಪ ಆಚಾರ ಆರೋಪಿಸಿದರು.
ಶುಕ್ರವಾರ ಬಿಜೆಪಿ ಪಕ್ಷದ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಸ್ವಾತಂತ್ರö್ಯ ಬಂದು ಇಷ್ಟು ವರ್ಷ ಕಳೆದರೂ ಕೂಡಾ ಈ ತಾಲೂಕಿನಲ್ಲಿ ನೀರಾವರಿ ಯೋಜನೆಗೆ ಇಚ್ಚಾಶಕ್ತಿ ಕೊರತೆಯಿಂದ ನೀರಾವರಿ ವಿಷಯದಲ್ಲಿ ಯಾವುದೇ ಅನುಷ್ಠಾನವಾಗಿಲ್ಲ. ಇದಕ್ಕೆ ಶಾಸಕರಾಗಿ,ಸಚಿವರಾಗಿ,ಸಂಸದರಾಗಿ ಈ ಕ್ಷೆÃತ್ರದಲ್ಲಿ ಸುಮಾರು ೨೫ ವರ್ಷ ಆಡಳಿತ ನಡೆಸಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರ ನಿರ್ಲಕ್ಷತನದಿಂದ ನೀರಾವರಿ ಯೊಜನೆ ಇವತ್ತಿಗೂ ಅನುಷ್ಠಾನವಾಗಿಲ್ಲ. ಆದರೆ ಅಂದು ಜಗದೀಶ ಶೆಟ್ಟರ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬೇವೂರು ಗ್ರಾಮದಲ್ಲಿ ಕೊಪ್ಪಳ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆಯನ್ನು ನೇರವೇರಿಸಲಾಗಿತು. ಇದಕ್ಕೆ ಸರ್ಕಾರ ಕೂಡಾ ಅನುದಾನ ಕೂಡಾ ಬಿಡುಗಡೆ ಮಾಡಲಾಗಿತ್ತು, ಒಂದು ಮತ್ತು ಎರಡನೇ ಹಂತದ ಎಲ್ಲಾ ಕಾಮಗಾರಿ ಕೂಡಾ ಮುಗಿದಿದೆ. ಆದರೆ ಮೂರನೇ ಹಂತದ ಕಾಮಗಾರಿಗಳು ಸ್ಥಗಿತಗೊಂಡಿದೆ. ಇದಕ್ಕಾಗಿ ಸರಕಾರಕ್ಕೆ ಸಾಕಷ್ಟು ಭಾರಿ ಮನವಿ ಮಾಡಿದರು ಕೂಡಾ ಸ್ಪಂದಿಸಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆÃಸ್ ಸರಕಾರ ನಯ ಪೈಸೆಯನ್ನು ಈ ಯೋಜನೆಗೆ ಬಿಡುಗಡೆ ಮಾಡಲಿಲ್ಲ. ಈ ಯೋಜನೆಯು ಸುಮಾರು ೧೨.೮೧೫ ಟಿಎಂಸಿ ನೀರು ಹಂಚಿಕೆಯ ೨೮ ಲಕ್ಷ ಎಕರೆ ವ್ಯಾಪ್ತಿ ಪ್ರದೇಶಕ್ಕೆ ನೀರುಣಿಸುವ ಯೋಜನೆಯಾಗಿದೆ. ಆದರೆ ಕಳೇದ ಅವಧಿಯ ಸರಕಾರ ಈ ಯೋಜನೆಗೆ ಅನುದಾನ ನೀಡದೆ ನಿರ್ಲಕ್ಷ ವಹಿಸಿದೆ. ಕಳೇದ ಐದು ವರ್ಷದ ಅವಧಿಯಲ್ಲಿ ಈ ಯೋಜನೆ ಕುರಿತು ಬರೀ ಪೋಸ್ಟರ, ಬ್ಯಾನರಲ್ಲಿನಲ್ಲಿಯೇ ನೀರಾವರಿ ಯೋಜನೆ ಕಂಡಿದ್ದೆÃವೆ ಹೊರತು,ಯಾವುದೇ ಕಾಮಗಾರಿ ಅನುಷ್ಠಾನಗೊಂಡಿಲ್ಲ ಎಂದು ಆರೋಪಿಸಿರುವ ಅವರು, ಈ ಕುರಿತು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಗಳಿಗೆ ಮತ್ತು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಜಿಲ್ಲೆಯ ಶಾಸಕರೊಂದಿಗೆ ಭೇಟಿ ಮಾಡಿ,ಈ ಯೋಜನೆ ಮೂರನೇ ಹಂತದ ಕಾಮಗಾರಿಗಳಿಗೆ ಕೂಡಲೇ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿತ್ತು. ಈ ಹಿನ್ನಲೆಯಲ್ಲಿ ಈ ಯೋಜನೆಗೆ ೨೧೦ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದಾ ಅವರು, ೩೦ ವರ್ಷ ಆಳಿದವರಿಗೆ ಯಾಕೆ ಅವತ್ತು ನೀರಾವರಿ ಯೋಜನೆ ಬಗ್ಗೆ ಚಿಂತಿಸದ ಬಸವರಾಜ ರಾಯರೆಡ್ಡಿಯವರಿಗೆ ಯಾಕೆ ಇವತ್ತು ಬಂತು ಎಂದು ಪ್ರಶ್ನಿಸಿದ ಶಾಸಕ ಹಾಲಪ್ಪ ಆಚಾರ, ಈ ಕ್ಷೆÃತ್ರದ ಮತದಾರರಿಂದ ತಿರಸ್ಕಾರಗೊಂಡಿದ್ದರಿಂದ ಹತಾಶೆ ಮನೋಭಾವನೆಯಿಂದ ಹೊರಬಾರದೆ ಮುಂದಿನ ತಮ್ಮ ರಾಜಕೀಯ ಲಾಭಕ್ಕಾಗಿ ಇಂಥ ನೀರಾವರಿ ಯೋಜನೆ ಕುರಿತು ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ನಾನು ಮಾತು ಕೊಟ್ಟಂತೆ ಈ ಭಾಗದ ಬಹು ದಿನದ ಕನಸಾಗಿರುವ ಕೊಪ್ಪಳ ಏತ ನೀರಾವರಿ ಯೊಜನೆಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಈ ಭಾಗಕ್ಕೆ ನೀರಾವರಿ ಯೋಜನೆಗೆ ಕಾರ್ಯ ರೂಪಕ್ಕೆ ತರುವಲ್ಲಿ ನಾನು ಶಕ್ತಿ ಮೀರಿ ಮುಂದಾಗುತ್ತಿದ್ದೆÃನೆ ಎಂದರು.

ಹಿರಿಯ ಮುಖಂಡರಾದ ಬಸವಲಿಂಗಪ್ಪ ಭೂತೆ, ಕಳಕನಗೌಡ ಜುಮ್ಲಾಪೂರ, ಸಿ.ಎಚ್.ಪೋಲೀಸ್ ಪಾಟೀಲ್, ನವೀನಕುಮಾರ ಗುಳಗಣ್ಣನವರ್, ಶಿವನಗೌಡ ಬನ್ನಪ್ಪಗೌಡ್ರ, ರತನ ದೇಸಾಯಿ, ವೀರಣ್ಣ ಹುಬ್ಬಳ್ಳಿ, ಅರವಿಂದಗೌಡ ಪಾಟೀಲ್,ರಸೂಲಸಾಬ ಹಿರೇಮನಿ, ಸಿದ್ರಾಮೇಶ ಬೇಲೇರಿ, ಸುಧಾಕರ ದೇಸಾಯಿ, ವೀರಣ್ಣ ಉಳ್ಳಾಗಡ್ಡಿ, ವಿಶ್ವನಾಥ ಮರಿಬಸಪ್ಪನವರ್, ಶರಣಪ್ಪ ಈಳಗೇರ, ರಾಮಣ್ಣ ಹೊಸ್ಮನಿ,ಪಪಂ ಸದಸ್ಯರಾದ ವಸಂತಕುಮಾರ ಭಾವಿಮನಿ, ಕಳಕಪ್ಪ ತಳವಾರ, ಅಶೋಕ ಅರಕೇರಿ, ಸೇರಿದಂತೆ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

loading...