ಸಂಭ್ರಮದ ಶಿರಹಟ್ಟಿ ಫಕ್ಕಿÃರೇಶ್ವರ ರಥೋತ್ಸವ: ಲಕ್ಷಾಂತರ ಭಕ್ತರು ಸಾಕ್ಷಿ

0
142

ಎ.ಎಚ್.ಖಾಜಿ
ಶಿರಹಟ್ಟಿ: ಕೋಮು ಸೌಹಾರ್ದದ ಪ್ರತೀಕವಾಗಿರುವ ಐತಿಹಾಸಿಕ ಶಿರಹಟ್ಟಿಯ ಫಕ್ಕಿÃರೇಶ್ವರ ಮಹಾಸ್ವಾಮಿಗಳ ರಥೋತ್ಸವ ಇಂದು[ಶನಿವಾರ] ಅಪಾರ ಭಕ್ತ ಸಮೂಹದ ಶ್ರದ್ಧೆ-ಭಕ್ತ,ಸಡಗರದ ಮಧ್ಯೆ ಸಂಭ್ರಮದಿಂದ ನಡೆಯಿತು.
ಶಿರಹಟ್ಟಿ ಫಕ್ಕಿರೇಶ್ವರ ಮಠದ ಶ್ರಿÃ ಜಗದ್ಗುರು ಫಕೀರಸಿದ್ಧರಾಮ ಮಹಾಸ್ವಾಮಿಗಳು ರಥದ ಗಾಲಿಗೆ ತೆಂಗಿನಕಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.
ಫಕೀರೇಶ್ವರ ಮಹಾರಾಜ ಕೀ ಜೈ,ಹರಹರ ಮಹಾದೇವ,ಫಕೀರನಾನಾಕಿ ದೋಸ್ತರಾಧಿನ್ ಎಂದು ಭಕ್ತರು ಜೈಕಾರ ಹಾಕುತ್ತ ರಥದ ಬೀದಿಯಲ್ಲಿ ಫಕ್ಕಿÃರೇಶ್ವರ ಮಹಾಸ್ವಾಮಿಗಳ ರಥ ಎಳೆದು ಸಂಭ್ರಮಿಸಿದರು.
ಭಕ್ತರು ಚಲಿಸುವ ರಥಕ್ಕೆ ಉತ್ತತ್ತಿ,ನಿಂಬೆಹಣ್ಣು,ಮಾವಿನಹಣ್ಣು ಬಾಳೆಹಣ್ಣು ಎಸೆದು ನಮಿಸಿದರು.ರಥ ಪಾದಗಟ್ಟೆಯವರೆಗೆ ಸಾಗಿ ವಾಪಸ್ಸಾಯಿತು,
ದೇವರ ದಯೆಯಿಂದ ಈ ವರ್ಷ ಮಳೆ ಬೇಳೆ ಚೆನ್ನಾಗಿ ಬಂದು ನಾಡಿನ ಸಮಸ್ತ ಜನತೆಯ ಮನೆ ಮತ್ತು ಮನ ಬೆಳಗುವಂತಾಗಲಿ ಎಂದು ಫಕೀರಸಿದ್ಧರಾಮ ಮಹಾಸ್ವಾಮಿಗಳು ಹಾರೈಸಿದರು.
ರಥೋತ್ಸವದಲ್ಲಿ ಜಾಂಜ್ ಮೇಳ,ಡೊಳ್ಳು ಕುಣಿತ,ಹೆಜ್ಜೆ ಮೇಳ,ವಾದ್ಯಮೇಳ, ಮುಂತಾದ ಜನಪದ ಕಲಾತಂಡಗಳು ಪಾಲ್ಗೊಂಡಿದ್ದವು.
ರಥೋತ್ಸವದಲ್ಲಿ ಆಸ್ಟೆçÃಲಿಯಾ,ಅಮೇರಿಕಾ ರಾಷ್ಟç ಹಾಗೂ ಗೋವಾ,ಗುಜರಾತ,ಮಹಾರಾಷ್ಟç ರಾಜ್ಯ ಸೇರಿದಂತೆ ವಿಜಾಪೂರ,ಬೀದರ,ಗುಲಬುರ್ಗಾ.ಧಾರವಾಡ,ಹಾವೇರಿ,ಕೊಪ್ಪಳ,ಗದಗ,ಶಿರಹಟ್ಟಿ,ಲಕ್ಷೆö್ಮÃಶ್ವರ,ಹುಬ್ಬಳ್ಳಿ,ಬೆಳಗಾಂ,ಬೆಂಗಳೂರ,ಸೇರಿದಂತೆ ಸುತ್ತಮುತ್ತಲಿನ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಮೆರವಣಿಗೆ;-ಪ್ರತಿವರ್ಷ ಸಂಪ್ರದಾಯದಂತೆ ಖಾನಾಪೂರದಿಂದ ಆಗಮಿಸಿದ ಶ್ರಿÃ ಫಕೀರಸಿದ್ಧರಾಮ ಮಹಾಸ್ವಾಮಿಜಿಯವರನ್ನು ಪಟ್ಟಣದಲ್ಲಿ ಸ್ವಾಗತಿಸಲಾಯಿತು.ಆನೆ,ಕುದುರೆ,ಒಂಟೆ,ಕೋಲಾಟ,ಜಾಂಝ ಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಫಕೀರಸಿದ್ದರಾಮ ಸ್ವಾಮಿಜಿ ಅವರ ಆಕರ್ಷಕ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ದರ್ಬಾರ ಕಾರ್ಯಕ್ರಮ-ರಥೋತ್ಸವದ ನಂತರ ನಡೆದ ದರ್ಬಾರ ಕಾರ್ಯಕ್ರಮದಲ್ಲಿ ಶ್ರಿÃ ಫಕೀರಸಿದ್ಧರಾಮ ಮಹಾಸ್ವಾಮಿಗಳು ಜಾತ್ರೆಯಲ್ಲಿ ಪಾಲ್ಗೊಂಡ ಮತ್ತು ಜಾತ್ರಾ ಮಹೋತ್ಸವಕ್ಕೆ ಸಹಕರಿಸಿ ಸಮಸ್ತ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು.
ಪಳ್ಹಾರ ಸೇವನೆ;- ರಥೋತ್ಸವದ ನಂತರ ಶ್ರಿÃಮಠದ ರಥದ ಬೀದಿಯ ಬಯಲಿನಲ್ಲಿ ಜಾತ್ರೆಗೆ ಆಗಮಿಸಿದ ಭಕ್ತರು ಕುಟುಂಬ,ಸ್ನೆÃಹಿತರೊಂದಿಗೆ ಗುಂಪು-ಗುಂಪಾಗಿ ಕುಳಿತು ಚುರುಮರಿ,ಖಾರಾ,ಬಜಿ-ಮಿರ್ಚಿ ಪಳ್ಹಾರ ಸೇವಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ,ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ ಮಾಗಡಿ,ಕಾಂಗ್ರೆಸ್ ಧುರೀಣ ಯಲ್ಲಪಗೌಡ ಪಾಟೀಲ,,ಶಿರಹಟ್ಟಿ ತಾಲೂಕ ಕುರುಬ ಸಮಾಜದ ಅಧ್ಯಕ್ಷ ಮಂಜುನಾಥ ಘಂಟಿ,ಡಿ ಎನ್ ಡಬಾಲಿ,ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ,ಚಂದ್ರಕಾಂತ ನೂರಶೆಟ್ಟರ,ತಾಲೂಕ ಪಂಚಾಯತ ಮಾಜಿ ಸದಸ್ಯ ಜಾನು ಲಮಾಣಿ,ಪಟ್ಟಣ ಪಂಚಾಯತ ಮಾಜಿ ಸದಸ್ಯ ,ಚಾಂದಸಾಬ ಮುಳಗುಂದ.ಸುರೇಶ ಅಕ್ಕಿ , ಎ.ಎಚ್.ಖಾಜಿ,ಜಿ.ಬಿ.ಹೆಸರೂರ,ಸೇರಿದಂತೆ ರಾಜಕೀಯ ಮತ್ತು ಇತರ ಕ್ಷೆÃತ್ರದ ಗಣ್ಯರನೇಕರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

loading...