ಕುಂದಗೋಳ ಉಪ ಚುನಾವಣೆ: ಅಂಚಟಗೇರಿಯಲ್ಲಿ ಉತ್ಸಾಹದ ಮತದಾನ

0
13

ಕನ್ನಡಮ್ಮ ಸುದ್ದಿ, ಹುಬ್ಬಳ್ಳಿ : ಕುಂದಗೋಳ ಕ್ಷೇತ್ರದ ಅಂಚಟೇರಿ ಗ್ರಾಮದಲ್ಲಿ ಉಪಚುನಾವಣೆಯ ಕಾವು ಜೋರಿದ್ದು, ಜನರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳಲುತ್ತಿದ್ದಾರೆ. ಬೆಳಗ್ಗಿನ ಬಿಸಿಲು ಏರುತ್ತಿದ್ದಾ ಹಾಗೆ ಕುಟುಂಬ ಸಮೀತ ಮತಗಟ್ಟೆಗಳಿಗೆ ಆಗಮಿಸಿ ಮತಚಲಾಯಿಸುತ್ತಿದ್ದಾರೆ.

ಬೆಳಿಗ್ಗೆನ ೯:೩೦ರ ಸುಮಾರಿಗೆ ಮತಗಟ್ಟೆ ಸಂಖ್ಯೆ ೭ರ ೧೧೨೬ ಮತದಾರ ಪೈಕಿ ೨೩೬ ಮತದಾರರು, ಮತಗಟ್ಟೆ ಸಂಖ್ಯೆ ೮ರ ೪೩೪ ಮತದಾರಲ್ಲಿ ೧೦೬, ಮತಗಟ್ಟೆ ಸಂಖ್ಯೆ ೯ರ ೭೯೬ ಮತದಾರಲ್ಲಿ ೧೩೪, ಹಾಗೂ ಮತಗಟ್ಟೆ ಸಂಖ್ಯೆ ೧೦ರ ೭೭೯ ಮತದಾರರಲ್ಲಿ ೧೩೭ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ ಅದರಗುಂಚಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ ೬೫ರಲ್ಲಿ ಕುಟುಂಬದೊಂದಿಗೆ ಬಂದು ಮತದಾನ ಮಾಡಿದರು. ಮತದಾನದ ಬಳಿಕ ಮಾತನಾಡಿದ ಅವರು, ಈ ಬಾರಿ ಕುಂದಗೋಳದಲ್ಲಿ ಬಿಜೆಪಿ ಪರ ಅಲೆಯಿದೆ. ಕಳೆದ ಬಾರಿ ನಾನು ೬೩೪ ಮತಗಳಿಂದ ಸೋತಿದ್ದೆ. ಈ ಬಾರಿ ೨೧ ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ. ಗೆಲುವು ನನ್ನದೇ ಎಂದು ಹೇಳಿದರು.

loading...