ತಾಳಕೇರಿಯಲ್ಲಿ ನೀರಾವರಿ ಯೋಜನೆ ಕುರಿತು ವಿಚಾರಗೋಷ್ಠಿ

0
1

ಯಲಬುರ್ಗಾ: ಪ್ರಸ್ತುತ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವುಕುಮಾರ ಅವರನ್ನು ಭೇಟಿ ಮಾಡಿ ಜಿಲ್ಲೆಯ ಏತನೀರಾವರಿ ಯೋಜನೆಗೆ ಅನುಧಾನ ನೀಡುವಂತೆ ಮನವಿ ಮಾಡಿಕೊಂಡಿದ್ದರಿಂದ ಮೈತ್ರಿ ಸರಕಾರ ಬಜೆಟ್‌ನಲ್ಲಿ ೨೧೦ ಕೋಟಿ ರೂ ನೀಡಿದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ತಾಳಕೇರಿ ಗ್ರಾಮದಲ್ಲಿ ಶನಿವಾರ ಕೃಷ್ಣಾ ಬಿ ಸ್ಕಿÃಂ ನೀರಾವರಿ ಯೋಜನೆ ಅನುಷ್ಠಾನ ಹೋರಾಟ ಸಮಿತಿ ಹಾಗೂ ತಾಲೂಕ ಬ್ಲಾಕ್ ಕಾಂಗ್ರೆÃಸ್ ಪಕ್ಷದ ಸಯುಂಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೃಷ್ಣಾ ಬಿ ಸ್ಕಿÃಂ ನೀರಾವರಿ ಯೋಜನೆ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಲಬುರ್ಗಾ ತಾಲೂಕಿಗೆ ಕೃಷ್ಣಾ ಬಿ ಸ್ಕಿÃಂ ಯೋಜನೆಯಿಂದ ನೀರಾವರಿ ಪ್ರಾರಂಭಿಸಲು ೨೦೧೫ರಲ್ಲಿ ಶಾಸಕನಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡ ನಿಮಿತ್ಯ ಪಟ್ಟಣದಲ್ಲಿ ಕೃಷ್ಣಾ ಭಾಗ್ಯ ಜಲನಿಗಮ ಉಪ-ವಿಭಾಗ ಕಚೇರಿಯನ್ನು ಪ್ರಾರಂಭಿಸಲಾಯಿತು.೨೦೧೫ ರಿಂದ ೨೦೧೮ರವರಗೆ ಯಲಬುರ್ಗಾ ತಾಲೂಕಿನ ೧೦೧ ಗ್ರಾಮಗಳ ೧ ಲಕ್ಷದ ೧೩ ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಯೋಜನೆ ಕಲ್ಪಿಸಲು ಸರ್ವೇ ಕಾರ್ಯ ಮಾಡಿಸಿ ಅಂದಾಜು ಪತ್ರಿಕೆ ತಯಾರಿಸಲಾಯಿತು. ಸಚಿವನಿದ್ದ ಸಂದರ್ಭದಲ್ಲಿ ಮೊದಲನೆ ಹಂತದ ಕುಷ್ಟಗಿ-ಯಲಬುರ್ಗಾ, ಕನಕಗರಿ ಮುಖ್ಯ ಕಾಲುವೆ ನಿರ್ಮಾಣಕ್ಕೆ ಸರಕಾರದಿಂದ ತಾತ್ವಿಕ ಅನುಮೋದನೆ ಪಡೆಯಲಾಯಿತು. ಬಿಸ್ಕಿÃಂ ಯೋಜನೆ ಪ್ರಾರಂಭವಾಗಿದ್ದು ೨೦೧೧ರಲ್ಲಿ. ಯಲಬುರ್ಗಾ ಕೃಷ್ಣಾ ಬಿಸ್ಕಿÃಂ ಯೋಜನೆಯ ಕೊನೆಯ ಹಂತದಲ್ಲಿ ಇದೆ. ನೀರಾವರಿಗೆ ಕಾಲುವೆ, ಉಪಕಾಲುವೆ, ಹಂಚಿಕೆ ಕಾಲುವೆ ಸೇರಿದಂತೆ ಹಲವಾರು ಕಾರ್ಯಗಳು ನಡೆಯಬೇಕು.

ಈ ಯೋಜನೆ ಪೂರ್ಣಗೊಳ್ಳಲು ಒಟ್ಟು ೧ ಲಕ್ಷ ಕೋಟಿ ರೂ ಬೇಕಾಗುತ್ತದೆ ಎಂದರು. ವಿಚಾರಗೋಷ್ಠಿಯನ್ನು ರಾಜಕೀಯ ಉದ್ದೆÃಶಕ್ಕೆ ಮಾಡುತ್ತಿಲ್ಲ. ಜನತಯ ಸೇವೆ ದೇವರ ಸೇವೆ ಎಂದು ತಿಳಿದಿದ್ದೆÃನೆ.ಚುನಾವಣೆಯಲ್ಲಿ ಸೋತಿರಬಹುದು. ಸೋತರೇ ಜನಸೇವೆ ಮಾಡಬಾರದು ಎಂದು ಎಲ್ಲಿಯೂ ಹೇಳಿಲ್ಲಎಂದರು. ಬ್ಲಾಕ್ ಕಾಂಗ್ರೆÃಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಹನುಮಂತಗೌಡ ಚೆಂಡೂರು, ಮಹೇಶ ಹಳ್ಳಿ, ಕೆರಿಬಸಪ್ಪ ನಿಡಗುಂದಿ, ರುದ್ರಪ್ಪ ಮರಕಟ್, ಶಂಕ್ರಪ್ಪ ಸುರಪುರ, ಡಾ.ಶಿವನಗೌಡ ದಾನರಡ್ಡಿ, ಅಪ್ಪಣ್ಣ ಜೋಶಿ, ಚಿದಾನಂದಪ್ಪ, ಮಲ್ಲು ಜಕ್ಕಲಿ, ಷಣ್ಮುಖಪ್ಪ ಬಳ್ಳಾರಿ ಇದ್ದರು.

 

loading...