ಜನರಿಗೆ ಸಂಸ್ಕಾರ ಪಡೆಯುವುದಕ್ಕೆ ಯಕ್ಷಗಾನದಿಂದ ಸಾಧ್ಯ: ಡಿ.ಶಂಕರ

0
23

 

ಯಲ್ಲಾಪುರ: ಸಮಕಾಲಿನ ಬದುಕಿನಲ್ಲಿ ರಾಮಾಯಣ, ಭಾರತದಂತಹ ಪೌರಾಣಿಕ ಕಥೆಗಳನ್ನು ಕೇಳುವ ಓದುವ ಮನಸ್ಥಿತಿ ಕಡಿಮೆಯಾಗಿದೆ. ಯಕ್ಷಗಾನ, ತಾಳಮದ್ದಲೆ ಅಂತಹ ಕಥೆಗಳನ್ನು ವಿಶ್ಲೆÃಷಣಾತ್ಮಕವಾಗಿ ಜನರಿಗೆ ಮನರಂಜನೆ ಜೊತೆ ಉತ್ತಮ ಸಂಸ್ಕಾರ ಪಡೆಯುವುದಕ್ಕೆ ಯಕ್ಷಗಾನದಿಂದ ಸಾಧ್ಯ. ಎಂದು ಶ್ರಿÃ ಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು.
ಅವರು ತಾಲೂಕಿನ ತಟಗಾರ ಗ್ರಾಮದ ಲಕ್ಷಿö್ಮÃನರಸಿಂಹ ದೇವಸ್ಥಾನದ ವರ್ಧಂತಿ ಹಾಗೂ ಲಕ್ಷಿö್ಮÃನರಸಿಂಹ ಜಯಂತಿ ಧಾರ್ಮಿಕ ಕಾರ್ಯಕ್ರಮದ ನಂತರ ನಡೆದ “ಜಾಂಬವತಿ ಕಲ್ಯಾಣ” ತಾಳಮದ್ದಲೆ ಯ ಅಧ್ಯಕ್ಷತೆ ವಹಿಸಿ, ದೇವಸ್ಥಾನಕ್ಕೆ ತಾ.ಪಂ ದಿಂದ ಸಹಾಯ ಮಾಡಿದ ಲಕ್ಷಿö್ಮನಾರಾಯಣ ಗುಮ್ಮಾನಿಯವರನ್ನು ಸನ್ಮಾನಿಸಿ, ಮಾತನಾಡುತ್ತಿದ್ದರು. ನಮ್ಮ ಪ್ರದೇಶದಲ್ಲಿ ಸಂಸ್ಕೃತ ವಿದ್ವಾಂಸರು ಸಾಕಷ್ಟಿದ್ದರೂ ಯಕ್ಷಗಾನ ಅರ್ಥಗಾರಿಕೆಯಲ್ಲಿ ಗುರುತಿಸಿಕೊಂಡಿರಲಿಲ್ಲ. ಆದರಿಂದು ಯುವ ವಿದ್ವಾಂಸರು ತಾಳಮದ್ದಲೆಯಲ್ಲಿ ಅಧ್ಯಯನಶೀಲರಾಗಿ ಉತ್ತಮ ಅರ್ಥಗಾರಿಕೆಯ ಜೊತೆ ವೈಚಾರಿಕ ಚಿಂತನೆಯನ್ನು ಸಮಾಜದ ಮುಂದೆ ಇಡುವಷ್ಟರಮಟ್ಟಿಗೆ ಬೆಳೆಯುತ್ತಿರುವುದು ಸಂತಸದ ವಿಚಾರ ಎಂದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಗೋಪಾಲ ಹಂಗಾರಿ, ಕಾರ್ಯದರ್ಶಿ ನರಸಿಂಹ ಬೋಳ್ಪಾಲ ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ ಸದಸ್ಯ ಲಕ್ಷಿö್ಮನಾರಾಯಣ ಗುಮ್ಮಾನಿ ತಮಗಿತ್ತ ಸನ್ಮಾನ ಸ್ವಿÃಕರಿಸಿ, ಸಾಂದರ್ಭಿಕ ಮಾತನಾಡಿದರು. ಸಂಘಟಕರ ಪರವಾಗಿ ಸಣ್ಣಪ್ಪ ಭಾಗ್ವತ್ ಸ್ವಾಗಿತಿಸಿ, ನಿರ್ವಹಿಸಿ, ವಂದಿಸಿದರು.

ವರ್ಧಂತಿ ಹಾಗೂ ಲಕ್ಷಿö್ಮÃನರಸಿಂಹ ಜಯಂತಿ ಧಾರ್ಮಿಕ ಕಾರ್ಯಕ್ರಮದ ನಂತರ ನಡೆದ “ಜಾಂಬವತಿ ಕಲ್ಯಾಣ” ತಾಳಮದ್ದಲೆ ಜನರ ಪ್ರಶಂಸೆಗೆ ಪಾತ್ರವಾಯಿತು.
ಯುವ ಕಲಾವಿದ ಶಶಾಂಕ ಭಟ್ಟ ಬೋಡೆಮನೆ (ಭಾಗವತ); ಶಿವರಾಮ ಕೋಮಾರ ತಾರಗಾರ (ಮೃದಂಗ); ಡಾ||ಮಹೇಶ ಭಟ್ಟ ಇಡಗುಂದಿ (ಶ್ರಿÃಕೃಷ್ಣ); ವಿ.ಶಿವರಾಮ ಭಾಗ್ವತ್ ಮಣ್ಕುಳಿ (ಜಾಂಬವ); ವಿ.ನರಸಿಂಹ ಭಟ್ಟ ಕವಡಿಕೆರೆ (ಬಲರಾಮ); ಮಂಜುನಾಥ ಹೆಗಡೆ ಉಮ್ಮಚಗಿ (ನಾರದ) ತಮ್ಮ ಕಾರ್ಯ ನಿರ್ವಹಿಸಿದರು.

loading...