ಇರಾನ್, ರಷ್ಯಾ ಮೇಲೆ ಪೂರ್ಣ ಪ್ರಮಾಣದ ನಿರ್ಬಂಧ ಹೇರಲು ಮನವಿ

0
6

ವಾಷಿಂಗ್ಟನ್- ಸಿರಿಯಾದಲ್ಲಿ ಇರಾನ್ ಹಾಗೂ ರಷ್ಯಾದ ಚಟುವಟಿಕೆಗಳ ಮೇಲೆ ಪೂರ್ಣ ಪ್ರಮಾಣದ ನಿರ್ಬಂಧ ಹೇರಬೇಕು ಎಂದು ಅಮೆರಿಕ ಸಂಸದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸಿರಿಯಾದಲ್ಲಿನ ಇರಾನ್ ಹಾಗೂ ರಷ್ಯಾ ಚಟುವಟಿಕೆಗಳ ಕುರಿತು ಒತ್ತಡ ಹೇರಬೇಕು. ಹಿಜಬುಲ್ಲಾ ಹಾಗೂ ಇತರ ಭಯೋತ್ಪಾದನಾ ಸಂಘಟನೆಗಳಿಗೆ ಇರಾನ್ ನೀಡಿದ ಬೆಂಬಲವನ್ನು ಸಮರ್ಥವಾಗಿ ಎದುರಿಸಲು ಆರ್ಥಿಕ ಮತ್ತು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಬೇಕು. ಜತೆಗೆ ಸಿರಿಯಾದಲ್ಲಿ ನಿರ್ದಯ ಆಡಳಿತವನ್ನು ಬೆಂಬಲಿಸುತ್ತಿರುವ ರಷ್ಯಾ ಪ್ರಯತ್ನವನ್ನು ನಿಯಂತ್ರಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಸಿರಿಯಾದಲ್ಲಿ ಭಯೋತ್ಪಾಕದರು ಮತ್ತು ಅಮೆರಿಕ ವಿರೋಧಿಗಳ ಹಿನ್ನೆಲೆಯಲ್ಲಿ ದೇಶದ ಉತ್ಪಾದನೆಯ ಮೇಲೆ ಉಂಟಾಗುವ ಅಪಾಯ ಕುರಿತು ಚಿಂತೆ ವ್ಯಕ್ತಪಡಿಸಿರುವ ಸಂಸದರು, ಭಯೋತ್ಪಾದನೆಯನ್ನು ತೆಡಯಲು ಕ್ರಮ ಕೈಗೊಳ್ಳುವಂತೆ ಡೊನಾಲ್ಡ್ ಗೆ ಮನವಿ ಮಾಡಿದ್ದಾರೆ.

loading...