ಯಲಬುರ್ಗಾದ ಪದವಿ ಕಾಲೇಜಿನಲ್ಲಿ ಸರ್ಕಾರಿ ಫೀ ಕ್ಕಿಂತ ಹೆಚ್ಚಿಗೆ ಫೀ ವಸೂಲ

0
44

 

ಯಲಬುರ್ಗಾ: ಇಲ್ಲಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ,ದ್ವಿತೀಯ ಪಿಯುಸಿಗೆ ಪ್ರವೇಶ ಫೀ, ಸರಕಾರ ಫೀಕ್ಕಿಂತ ಹೆಚ್ಚಿಗೆ ಹಣವನ್ನು ತಗೆದುಕೊಳ್ಳುತ್ತಿದ್ದಾರೆಂದು ಆರೋಪಿಸಿ ಭಾರತ ವಿಧ್ಯಾರ್ಥಿ ಫೆಡರೇಷನ್ ಮಂಗಳವಾರ ಕಾಲೇಜಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ತಾಲೂಕಾ ಎಸ್ ಎಫ್ ಐ ಘಟಕದ ಅಧ್ಯಕ್ಷ ಎಂ.ಸಿದ್ದಪ್ಪ ಇವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,ಯಲಬುರ್ಗಾ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿ ದಾಖಲಾತಿಗೆ ಕಲಾ, ವಿಜ್ಞಾನ, ವಾಣಿಜ್ಯ, ಸಂಯೋಜನೆಗಳ ವಿದ್ಯಾರ್ಥಿಗಳ ನಿಗದಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕವನ್ನು ಪಡೆದುಕೊಳ್ಳುತ್ತಿದ್ದಾರೆ.

೨೦೧೯, ೨೦೨೦ನೇ ಸಾಲಿನಲ್ಲಿ ೧೦೦ ವಿದ್ಯಾರ್ಥಿಗಳ ಮಾತ್ರ ತೆಗೆದುಕೊಳ್ಳಲು ಬರುತ್ತದೆ.ನೀವು ಹೆಚ್ಚಿನ ಹಣ ೫೦೦ ರೂ.ಗಳನ್ನು ಸಂದಾಯ ಮಾಡಿದರೆ ನಿಮಗೆ ಪ್ರವೇಶ ನೀಡುತ್ತೆÃವೆ,ಇಲ್ಲದಿದ್ದರೆ ಪ್ರವೇಶ ಪಡೆಯುದಿಲ್ಲ ಅಂತಾ ಕಾಲೇಜಿನ ಮುಖ್ಯಸ್ಥರು ಹೇಳುತ್ತಿದ್ದು ನಿಜಕ್ಕೂ ವಿಷಾದನೀಯ.ಸರಕಾರಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಬಡವ ವಿದ್ಯಾರ್ಥಿಗಳೆ ಇರುತ್ತಾರೆ.ಸರಕಾರ ಕಾಲೇಜಿನಲ್ಲಿ ಹಣವನ್ನು ವಸೂಲಿ ಮಾಡುವುದು ತಪ್ಪಾಗಿದೆ, ಕೂಡಲೇ ಹೆಚ್ಚಿನ ಹಣವನ್ನು ತಗೆದುಕೊಳ್ಳುವದು ನಿಲ್ಲಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾಲೇಜಿನ ಮುಂದೆ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿ, ಕಾಲೇಜಿನ ಹಿರಿಯ ಉಪನ್ಯಾಸಕ ಬಸವರಾಜ ಬಿಲ್ಲಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಎಚ್.ಆರ್.ಆನಂದ, ಸುನೀಲ್, ಯಲ್ಲಪ್ಪ, ಪರಶುರಾಮ್, ವಿಜಯಕುಮಾರ, ಯಮನೂರಪ್ಪ, ಸಂತೋಷ, ಉಮೇಶ, ಶಿವಕುಮಾರ, ಪ್ರಶಾಂತ, ನಾಗರಾಜ, ಮೈನುದ್ದಿÃನ್, ರಮೇಶ, ಕಲ್ಲೆÃಶ,ಪ್ರಶಾಂತ ಸೇರಿದಂತೆ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

loading...