ತೀವೃ ನೀರಿನ ಕೋರತೆ: ಒಣಗಿದ ಅಡಿಕೆ ತೋಟ

0
50

 

ಜೋಯಿಡಾ: ತಾಲೂಕಿನಾದ್ಯಂತ ತೀವೃ ನೀರಿನ ಕೋರತೆ ಹಿನ್ನೆಲೆಯಲ್ಲಿ ಅಡಿಕೆ ತೋಟಗಳು ಒಣಗಿ ಕೆಂಪಾಗಿದ್ದು, ಸಿಂಗಾರಗಳು ಒಳಣಿಹೋಗಿದೆ. ಅಡಿಕೆ ಬೆಳೆ ಬೆಳೆದ ರೈತ ತಲೆಯ ಮೇಲೆ ಕೈಇಟ್ಟು ಕುಳಿತುಕೊಳ್ಳುವಂತಾಗಿದೆ. ತಾಲೂಕಿನಲ್ಲಿ ಸುಮಾರು ೭೦೦ ಹೆಕ್ಟೆÃರ್ ಪ್ರದೇಶದಲ್ಲಿ ರೈತರು ತೋಟದ ಬೆಳೆ ಬೆಳೆಯುತ್ತಿದ್ದು, ಇವೆಲ್ಲವೂ ಹೆಚ್ಚಿನದಾಗಿ ಸಾವಯವ ಕೃಷಿ ಎನ್ನುವುದೆ ವಿಶೇಷ.
ಇಂತಹ ಸಾವಯವ ಕೃಷಿಕನಿಗೆ ಇತ್ತಿಚಿನ ದಿನಗಳಲ್ಲಿ ಬಿಸಿಲ ತಾಪ, ಬತ್ತಿದ ನೀರಿನ ಸೆಲೆ, ತೋಟಕ್ಕೆ ನೀರು ಪೂರೈಸಿಕೊಳ್ಳಲಾಗದ ಸ್ಥಿತಿಯಲ್ಲಿ ತೋಟದ ಬೆಳೆ ರೈತರಿಗೆ ಕೈಕೊಡುತ್ತಿರುವವುದು ದುರಾದೃಷ್ಟಕರ, ತಾಲೂಕಿನಲ್ಲಿ ಸಾವಯವ ಕೃಷಿಕ ಎಕರೆ ಒಂದಕ್ಕೆ ೧೫ ರಿಂದ ೧೮ ಕ್ವಿÃಂಟಾಲ ವರೆಗೂ ಅಡಿಕೆ ಬೆಳೆಯನ್ನು ತೆಗೆಯುತ್ತಾನೆ. ಈ ಬಾರಿ ನವೆಂಬರ್‌ದಿಂದ ನಿಂತುಹೋದ ಮಳೆ ಮತ್ತೆ ಬಾರಲೇ ಇಲ್ಲ. ಮದ್ಯಂತರದಲ್ಲಿ ಬೀಳುವ ಅಕಾಲಿಕ ಮಳೆ ತೋಟಕ್ಕೆ ತಂಪ್ಪು ತರುತ್ತಿತ್ತು, ಅಲ್ಲದೇ ನೀರಿನ ಸೆಲೆಯನ್ನು ಬತ್ತದಂತೆ ಕಾಯುತ್ತಿತ್ತು. ಆದರೆ ಈ ಬಾರಿಯ ಭೀಕರ ಬಿಸಿಲು ರೈತನ ತೋಟನ್ನೆÃ ಬಲಿತೆಗೆದುಕೊಳ್ಳುತ್ತಿದ್ದು, ರೈತ ಕಂಗಾಲಾಗಿದ್ದಾನೆ. ಅಡಿಕೆ ಬೆಳೆಯ ಜೊತೆಯಲ್ಲಿ ಬೆಳೆಯುವ ಉಪಬೆಳೆಯಾದ ಕಾಣೀ ಮೆಣಸು, ಯಾಲಕ್ಕಿ, ಜಾಯಿಕಾಯಿ, ಲವಂಗ ಗಿಡಗಳನ್ನು ಬೆಳೆಯುತ್ತೆÃಲೆ. ಜಾಯಕಾಯಿ ಲವಂಗ ಗಿಡಗಳು ನೀರಿಲ್ಲದೆ ಸತ್ತು ಹೋಗಿವೆ, ಉಳಿದ ಗಿಡಗಳು ಸಾಯುವ ಪರಿಸ್ಥಿತಿಯಲ್ಲಿದೆ. ಉಪಬೆಳೆಯು ಕೈಕೊಟ್ಟರೆ ರೈ ಬದುಕುವುದು ಹೇಗೆ ಎನ್ನುವ ಪ್ರಶ್ನೆ ಕಾಡುವಂತೆ ಮಾಡಿದೆ.

ನೆಂಟರಿಗೆ ಬರಬೇಡಿ ಎನ್ನುವ ಸ್ಥಿತಿ :- ಬಳಸುವ ನೀರಿನ ಕೋರೆತಯಿಂದಾಗಿ ಎಲ್ಲೊÃ ದೂರದಿಂದ ವರ್ಷಕ್ಕೊಂದುಬಾರಿ ಬೇಸಿಗೆಯ ರಜಾ ದಿನಗಳಲ್ಲಿ ಬಂದು ಹೋಗುವ ನೆಂಟರಿಷ್ಟರಿಗೆ ಈ ಬಾರಿ ಬಾರದಂತೆ ಸೂಚನೆ ನೀಡಿದ್ದೆÃವೆ. ನೀರಿನ ಸಮಸ್ಯೆ ಇಷ್ಟೊÃಂದ ಭೀಕರವಾಗಿ ನಮ್ಮನ್ನು ಕಾಡುತ್ತಿದ್ದು, ನೆಂಟರನ್ನು ಬರಬೇಡಿ ಎನ್ನುವ ಸ್ಥಿತಿಗೆ ನಮ್ಮನ್ನು ತಲುಪಿಸಿದ್ದು, ನಾವು ಕೂಡಾ ನೀರಿದ್ದ ನಮ್ಮ ಸಂಬಂದಿಕರ ಮನೆಯಲ್ಲಿ ಮಳೆಗಾಲದ ವರೆಗೆ ಉಳದು ಬರುವ ಮಟ್ಟಿಗೆ ಮನಸ್ಥಿತಿ ಬದಲಾಗಿದ್ದು, ದುಖಃದ ಸಂಗತಿ. ತಾಲೂಕಿನಾದ್ಯಂತ ವಾರಕ್ಕೊಂದು ಬಾರಿ, ೪-೫ ದಿನಕ್ಕೊಂದು ಬಾರಿ ಹೀಗೆ ಕುಡಿಯುವ ನೀರು ಬಿಡುವ ಪಂಚಾಯತ್‌ದಿಂದ ಬಳಕೆಗೆ ನೀರು ಸಾಕಾಗುತ್ತಿಲ್ಲ. ರಾಮನಗರದಂತ ನಿರಾಶ್ರಿತರ ಪ್ರದೇಶದಲ್ಲಿ ೧೫ ದಿನಕ್ಕೊಮ್ಮೆ ನೀರು ಬಿಡುತ್ತಿರುವುದು ವಿಷಾದನೀಯ. ಬಳಕೆಗೆ ಈ ಪರಿಸ್ಥಿತಿ ಆದರೆ ತೋಟಕ್ಕೆ ನೀರು ಹೇಗೆ ಎನ್ನುವುದೇ ತಿಳಿಯದಂತಾಗಿದೆ. ಒಟ್ಟಾರೆ ಈ ಬಾರಿ ತೋಟದ ಬೆಳೆ ನೀರಿಲ್ಲದೆ ಸಂಪೂರ್ಣ ನಾಶವಾಗುವ ಲಕ್ಷಣ ಕಾಣುತ್ತಿದ್ದು, ತೋಟದ ಬೆಳೆಯ ರೈತರನ್ನು ಸರಕಾರವೇ ಕಾಪಾಡಬೇಕಿದೆ.
ಶ್ರಿÃಪಾದ ದೇಸಾಯಿ – ರೈತ ತೋಟಕ್ಕೆ ನೀರಿಲ್ಲದೆ ಅಡಿಕೆ ಗಿಡಗಳು ಕೆಂಪಾಗಿದ್ದು, ಸಿಂಗಾರ ಕೂಡಾ ಒಣಗಿ ಹೋಗುತ್ತಿದೆ. ನೀರನ ಸಮಸ್ಯೆ ನಮ್ಮ ತೋಟದ ಬೆಳೆಯ ರೈತರನ್ನು ಕಂಗಾಲಾಗಿಸಿದೆ. ತೋಟದ ಪರಿಸ್ಥಿತಿ ನೋಡಿ ದುಖಃ ವಾಗುತ್ತಿದೆ. ತೋಟಕ್ಕೆ ಹೋಗಲು ಮನಸ್ಸಾಗುತ್ತಿಲ್ಲ.

loading...