ಇಂಡೋನೇಷಿಯಾ: ಅಧ್ಯಕ್ಷೀಯ ಚುನಾವಣೆ ವಿರೋಧಿ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಪ್ರಯೋಗ

0
13

ಮಾಸ್ಕೋ,- ಇಂಡೋನೇಷಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಿಸಿದ ನಂತರ ರಾಜಧಾನಿ ಜಕಾರ್ತದಲ್ಲಿನ ಚುನಾವಣಾ ನಿಗಾ ಸಂಸ್ಥೆ (ಬವಾಸ್ಲು)  ಎದುರು  ಬುಧವಾರ ಜಮಾಯಿಸಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಅಧ್ಯಕ್ಷೀಯ  ಚುನಾವಣೆಯಲ್ಲಿ ಇಂಡೋನೇಷಿಯಾ ಅಧ್ಯಕ್ಷ ಜೋಕೊ ವಿಡೊಡೊ ಅವರು ತಮ್ಮ  ಪ್ರತಿಸ್ಪರ್ಧಿ ಪ್ರಬೊವೊ ಸುಬಿಯಾಂತೊ ವಿರುದ್ಧ ಜಯಗಳಿಸಿದ್ದಾರೆ ಎಂದು ಎಂದು ಮಂಗಳವಾರ ಘೋಷಿಸಲಾಗಿತ್ತು.
ಚುನಾವಣಾ ಫಲಿತಾಂಶಗಳನ್ನು ಒಪ್ಪಿಕೊಳ್ಳದ ಸುಬಿಯಂತೋ ಬೆಂಬಲಿಗ ಪ್ರತಿಭಟನಾಕಾರರು, ಚುನಾವಣಾ ನಿಗಾ ಸಮಿತಿ ಎದುರು ಜಮಾಯಿಸಿ ಕಲ್ಲುಗಳು, ಗಾಜಿನ ಬಾಟಲಿಗಳು ಮತ್ತು ಸಿಡಿಮದ್ದುಗಳನ್ನು ಎಸೆದಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯ ಪ್ರಯೋಗಿಸಿದ್ದಾರೆ ಎಂದು ಜಕಾರ್ತ ಗ್ಲೋಬ್‌ ಪತ್ರಿಕೆ ವರದಿ ಮಾಡಿದೆ.
2014 ರಲ್ಲಿ ಆಯ್ಕೆಯಾಗಿದ್ದ ವಿಡೊಡೊ ಸೇನಾ ಹಿನ್ನೆಲೆಯಿರದ ಮೊದಲ ಅಧ್ಯಕ್ಷರೆನಿಸಿದ್ದಾರೆ. ಅದಕ್ಕೂ ಮುನ್ನ ಅವರು, ಸೂರಕರ್ತ ನಗರದ ಮೇಯರ್ ಆಗಿ, ಆ ನಂತರ ಜಕಾರ್ತಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರ

loading...