ಕ್ರಿಕೆಟ್ ಪಂದ್ಯಾವಳಿಗೆ ಸಕಲ ಸಿದ್ಧತೆ : ಅವಿನಾಶ

0
27

ಕ್ರಿಕೆಟ್ ಪಂದ್ಯಾವಳಿಗೆ ಸಕಲ ಸಿದ್ಧತೆ : ಅವಿನಾಶ

ಬೆಳಗಾವಿ: ಇಂಡಿಯಾ-ಎ ಮತ್ತು ಶ್ರೀಲಂಕಾ-ಎ ತಂಡಗಳ ನಡುವೆ ಒಂದು ಟೆಸ್ಟ್ ಮ್ಯಾಚ್ ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಭವಿಷ್ಯದಲ್ಲಿ ಇನ್ನು ದೊಡ್ಡ ದೊಡ್ಡ ಮ್ಯಾಚ್ ಗಳು ನಮ್ಮ ಬೆಳಗಾವಿಯಲ್ಲಿ ನಡೆಯಲಿವೆ ಎಂದು ಕೆಎಸ್ ಸಿಎ ಬೆಳಗಾವಿ ಅಧ್ಯಕ್ಷ ಅವಿನಾಶ ಪೋತದಾರ ಹರ್ಷ ವ್ಯಕ್ತಪಡಿಸಿದರು.

ಬುಧವಾರ ನಗರದ ಕೆಎಸ್ ಸಿಎ ಮೈದಾನದ ಸಭಾಭವನದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು, ಮೇ 25ರಿಂದ 28ರವರೆಗೆ ಭಾರತ-ಎ ಮತ್ತು ಶ್ರೀಲಂಕಾ-ಎ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದ್ದು, ಬಳಿಕ ಜೂನ್ 6, 8 ಮತ್ತು 10ರಂದು ಮೂರು ಏಕದಿನ ಪಂದ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪರ್ಧಿಸಿರುವ ಹಲವು ಪ್ರಮುಖ ಆಟಗಾರರು ಆಗಮಿಸುತ್ತಿದ್ದಾರೆ. ಅದೇ ರೀತಿ ಇಂಡಿಯನ್ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಕೂಡ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಬಳಿಕ ಕೆಎಸ್ಸಿಎ ಧಾರವಾಡ ಅಧ್ಯಕ್ಷ
ಬಾಬಾ ಬುಸದ್ ಅವರು ಇಂಡಿಯಾ-ಎ ಮತ್ತು ಶ್ರೀಲಂಕಾ- ಎ ತಂಡಗಳ ನಡುವೆ ನಡೆಯಲಿರುವ ಪಂದ್ಯಾವಳಿಗಳ ಕುರಿತು ಹೆಚ್ಚಿನ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಬಿಸಿಸಿಐನ ರಾಹೀಲ್, ಕೆಎಸ್ಸಿಎ ಬೆಳಗಾವಿ ಮ್ಯಾನೇಜರ್
ದೀಪಕ ಪವಾರ್ ಉಪಸ್ಥಿತರಿದ್ದರು.

loading...