ವಿರಾಟ್‌ ಕೊಹ್ಲಿ ಲಯದಲ್ಲಿರುವ ಬ್ಯಾಟ್ಸ್‌ಮನ್‌: ಬಟ್ಲರ್‌

0
7

ಲಂಡನ್‌:-ಕಳೆದ 12 ತಿಂಗಳುಗಳಿಂದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅದ್ಭುತ ಲಯದಲ್ಲಿದ್ದಾರೆ ಎಂದು ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ ಗುಣಗಾನ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಜೋಸ್‌ ಬಟ್ಲರ್‌ ಇಂಗ್ಲೆಂಡ್‌ ತಂಡದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೇ, ಇತ್ತೀಚೆಗೆ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ವಿಶ್ವದ ಗಮನ ಸೆಳೆದಿದ್ದರು. ಜತೆಗೆ, ಐಸಿಸಿ ವಿಶ್ವಕಪ್‌ನಲ್ಲಿ ಇದೇ ಲಯ ಮುಂದುವರಿಸುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಬಟ್ಲರ್‌, ” ಭಾರತದಲ್ಲಿ ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್ಸ್ ಪ್ರೀಮಿಯರ್‌ ಲೀಗ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಅವರು ಆಡಿದ್ದರು. ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅದ್ಭುತ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಕಳೆದ 12 ತಿಂಗಳುಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ಲಯದಲ್ಲಿದ್ದಾರೆ. ಹಾಗಾಗಿ, ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಇಲ್ಲೂ ಅವರು ರನ್ ಹೊಳೆ ಹರಿಸುವುದರಲ್ಲಿ ಅನುಮಾನವೇ ಇಲ್ಲ” ಎಂದರು.

ಕೊಹ್ಲಿ ಗುಣಗಾನ ಮಾಡುವ ಜತೆಗೆ ಆಸ್ಟ್ರೇಲಿಯಾ ತಂಡದ ಸ್ಟೀವ್‌ ಸ್ಮಿತ್‌ ಅವರನ್ನು ಜೋಸ್‌ ಬಟ್ಲರ್‌ ಇದೇ ವೇಳೆ ಕೊಂಡಾಡಿದರು. ಭಾರತದಲ್ಲಿ ಇತ್ತೀಚೆಗೆ ಮುಕ್ತಾಯವಾದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್ ಪರ ಆಡುವಾಗ ಸ್ಟೀವ್‌ ಸ್ಮಿತ್‌ ಅವರ ಜತೆ ಸಾಕಷ್ಟು ಸಮಯ ಕಳೆದಿದ್ದೇನೆ. ಒಬ್ಬ ಬ್ಯಾಟ್ಸ್‌ಮನ್ ಆಗಿ ಯಾವ ರೀತಿಯ ತತ್ವಗಳನ್ನು ಅನುಸರಿಸಬೇಕೆಂದು ಅವರಿಂದ ಕಲಿತಿದ್ದೇನೆ ಎಂದು ಹೇಳಿದರು.
“ವಿರಾಟ್‌ ಕೊಹ್ಲಿ ಹಾಗೂ ಸ್ಟೀವ್‌ ಸ್ಮಿತ್ ಇಬ್ಬರು ವಿಶ್ವ ಶ್ರೇಷ್ಠ ಆಟಗಾರರು. ಐಪಿಲ್‌ ಟೂರ್ನಿಯ ವೇಳೆ ಸ್ಮಿತ್‌ ಅವರೊಂದಿಗೆ ಕಳೆದ ಸಮಯ ಅಮೋಘವಾಗಿತ್ತು. ಚೆಂಡು ವಿರೂಪ ಪ್ರಕರಣದಿಂದ 12 ತಿಂಗಳ ಬಳಿಕ ಅಂಗಳಕ್ಕೆ ಆಗಮಿಸಿದ ಸ್ಮಿತ್‌ ಅವರ ನಡೆ, ಅಭ್ಯಾಸ ಹಾಗೂ ಅವರಲ್ಲಿನ ತತ್ವಗಳು ನನಗೆ ಸಾಕಷ್ಟು ಇಷ್ಟವಾಯಿತು” ಎಂದು ಸ್ಟೀವ್‌ ಸ್ಮಿತ್‌ ಅವರನ್ನು ಹೊಗಳಿದರು.
ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅವರನ್ನು ವಿಶೇಷ ಬ್ಯಾಟ್ಸ್‌ಮನ್‌ ಆಗಿ ಇಂಗ್ಲೆಂಡ್‌ ತಂಡಕ್ಕೆ ಆಯ್ಕೆ ಮಾಡಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ” ಇಂಗ್ಲೆಂಡ್‌ ತಂಡಕ್ಕೆ ಬೆನ್‌ ಸ್ಟೋಕ್ಸ್‌ ಅತಿ ದೊಡ್ಡ ಕೀ ಆಟಗಾರ. ಪಂದ್ಯದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ತಂಡಕ್ಕೆ ನೆರವಾಗುತ್ತಾರೆ. ವಿಶ್ವದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಅವರು ಕೂಡ ಒಬ್ಬರು. ಪ್ರಸ್ತುತ ವಿಶ್ವಕಪ್‌ನಲ್ಲಿ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ” ಎಂದು ಜೋಸ್‌ ಬಟ್ಲರ್‌ ತಿಳಿಸಿದರು.

loading...