ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

0
29

ಶಿರಹಟ್ಟಿ: ಪಟ್ಟಣದ ಗಾಂಧಿ ವೃತ್ತದ ಬಳಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಅಚರಿಸಿದರು. ದೇಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ಹಾಗೂ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನಗಳಿಸಿದ್ದು ಮತ್ತು ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿðಯಾದ ಶಿವಕುಮಾರ ಉದಾಸಿ ಅವರು ಅತ್ಯಧಿಕ ಮತಗಳಿಂದ ಜಯಗಳಿಸಿದ್ದು ಶಿರಹಟ್ಟಿಯಲ್ಲಿ ತಾಲೂಕಾ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ನಾಗರಾಜ ಲಕ್ಕುಂಡಿ, ನಗರ ಘಟಕದ ಅಧ್ಯಕ್ಷ ಗೂಳಪ್ಪ ಕರಿಗಾರ ಸಿಹಿ ಹಂಚುವದರ ಮೂಲಕ ವಿಜಯೋತ್ಸವ ಅಚರಿಸಿದರು. ಈ ಸಂದರ್ಭದಲ್ಲಿ ಅನೀಲ ಮಾನೆ,ಯಲ್ಲಪ್ಪ ಇಂಗಳಗಿ, ಬೀರಪ್ಪ ಸ್ವಾಮಿ ಇದ್ದರು.

loading...