ಕೊಪ್ಪಳ ಲೋಕಸಭಾ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಗೆಲುವು,

0
43

 

ಕನ್ನಡಮ್ಮ ಸುದ್ದಿ-ಯಲಬುರ್ಗಾ: ಕೊಪ್ಪಳ ಲೋಕಸಭಾ ಚುನಾವಣೆಯಲ್ಲಿ ಕರಡಿ ಸಂಗಣ್ಣ ಮತ್ತು ದೇಶದಲ್ಲಿ ಬಿಜೆಪಿ ಪಕ್ಷ ಅಭೂತಪೂರ್ಣ ಗೆಲುವು ಸಾಧಿಸಿದ ಹಿನ್ನಲೆ ಪಕ್ಷದ ಮುಖಂಡರು, ಕಾರ್ಯಕರ್ತರು ಯಲಬುರ್ಗಾ ಪಟ್ಟಣದಲ್ಲಿ ಗುರುವಾರ ವಿಜಯೋತ್ಸವವನ್ನು ಆಚರಿಸಿದರು.
ಇಲ್ಲಿಯ ವೀರರಾಣಿ ಕಿತ್ತೂರು ಚೆನ್ನöಮ್ಮ ವೃತ್ತ, ಕನ್ನಡ ಕ್ರಿÃಯಾ ಸಮಿತಿ ವೃತ್ತ, ಕನಕದಾಸ ವೃತ್ತ ಬಳಿ ಬಿಜೆಪಿ ಪಕ್ಷದ ಕಾರ್ಯಕರ್ತರು ಪರಸ್ವರ ಸಿಹಿ ಹಂಚಿಕೊಂಡು ಪಟಾಕಿ ಸಿಡಿಸುವ ಮೂಲಕ ಸಂಸದ ಕರಡಿ ಸಂಗಣ್ಣ ಮತ್ತು ದೇಶದಲ್ಲಿ ಅಭೂತಪೂರ್ಣ ಗೆಲುವಿಗೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿಜಿ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷ ಶಿವನಗೌಡ ಬನಪ್ಪಗೌಡ್ರ ಮಾತನಾಡಿ,ದೇಶವನ್ನು ಅಭಿವೃದ್ದಿಯತ್ತ ಕೊಂಡೊಯುವ ಮೂಲಕ ಜಗತ್ತಿನ ರಾಷ್ಟçಗಳು ಭಾರತದತ್ತ ಮುಖ ಮಾಡುವಂತೆ ನರೇಂದ್ರ ಮೋದಿ ಮಾಡಿದ್ದರಿಂದ ದೇಶದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದಿದೆ.ಅಲ್ಲದೇ ಕರಡಿ ಸಂಗಣ್ಣನವರು ಕೊಪ್ಪಳ ಲೋಕಸಭಾ ಕ್ಷೆÃತ್ರದಲ್ಲಿ ಹತ್ತು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಕ್ಷೆÃತ್ರದ ಪ್ರಜ್ಞಾವಂತ ಮತದಾರರು ಆಶೀರ್ವದಿಸಿದ್ದರಿಂದ ಮತ್ತೊÃಮ್ಮೆ ಸಂಸದರಾಗಿ ಪುನರ ಆಯ್ಕೆಗೊಂಡಿದ್ದಾರೆ ಎಂದರು.
ಪಪಂ ಸದಸ್ಯ ಅಂದಯ್ಯ ಕಳ್ಳಿಮಠ, ಮಾಜಿ ಸದಸ್ಯ ಸಿದ್ರಾಮೇಶ ಬೇಲೇರಿ ಮಾತನಾಡಿ, ಐದು ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಕಳಂಕವಿಲ್ಲದೇ ದೇಶವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊÃಮ್ಮೆ ಪ್ರಧಾನಿಯನ್ನಾಗಿಸಿ ದೇಶದ ಸಮಗ್ರ ಅಭಿವೃದ್ಧಿಗಾಗಿ ಈ ದೇಶದಲ್ಲಿ ನರೇಂದ್ರ ಮೋದಿಜಿಯವರ ನೇತೃತ್ವದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಮತ್ತು ಕೊಪ್ಪಳ ಲೋಕಸಭಾ ಕ್ಷೆÃತ್ರದ ಅಭ್ಯರ್ಥಿಯಾಗಿದ್ದ ಹಾಲಿ ಸಂಸದ ಕರಡಿ ಸಂಗಣ್ಣನವರು ಈ ಹಿಂದೆ ಹತ್ತು ಹಲವಾರು ಜನಪರ ಯೋಜನೆಗಳನ್ನು ಕ್ಷೆÃತ್ರಕ್ಕೆ ತರುವ ಮೂಲಕ ಸಾಕಷ್ಟು ಅಬಿವೃದ್ದಿಪಡಿಸಿದ್ದರಿಂದ ಇಲ್ಲಿಯ ಪ್ರಜ್ಞಾವಂತ ಮತದಾರರು ಇವರನ್ನು ಆಶೀರ್ವದಿಸಿದ್ದು ನಿಜಕ್ಕೂ ಸಂತೋಷದಾಯಕ. ಒಟ್ಟಿನಲ್ಲಿ ದೇಶಕ್ಕೆ ನರೇಂದ್ರ ಮೋದೀಜಿ, ಕೊಪ್ಪಳಕ್ಕೆ ಕರಡಿ ಸಂಗಣ್ಣನವರು ಭರ್ಜರಿ ಗೆಲುವು ಸಾದಿಸಿದ್ದಾರೆ ಎಂದರು.

ಅಶೋಕ ಅರಕೇರಿ, ವಸಂತಕುಮಾರ ಭಾವಿಮನಿ, ಕಳಕಪ್ಪ ತಳವಾರ, ಬಸವಲಿಂಗಪ್ಪ ಕೊತ್ತಲ್, ಅಂಬರೀಶ ಹುಬ್ಬಳ್ಳಿ, ಮುಖಂಡರಾದ ಶಿವಕುಮಾರ ಭೂತೆ, ಸಂಗಪ್ಪ ರಾಮತಾಳ, ದಾನನಗೌಡ, ನೀಲನಗೌಡ ತಳುವಗೇರ, ಈರಪ್ಪ ಬಣಕಾರ, ಮೈನುಸಾಬ ವಣಗೇರಿ, ಸುರೇಶ ಮಾಟರ, ಶಿವನಂದ ಬಣಕಾರ, ಶಂಕರ ಭಾವಿಮನಿ, ದೊಡ್ಡಯ್ಯ ಗುರುವಿನ, ವೀರೇಶ ತಳುವಗೇರ, ಸೇರಿದಂತೆ ಬಿಜೆಪಿ ಪಕ್ಷದ ಅಪಾರ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

loading...