ಕುಂದಗೋಳ ಉಪಚುನಾವಣೆ: ಕುಸುಮಾಗೆ ಗೆಲುವು

0
26

ಹುಬ್ಬಳ್ಳಿ: ಕಾಂಗ್ರೆಸ್-ಜೆಡಿಎಸ್ ಮೈತ್ರಿಪಕ್ಷ ಹಾಗೂ ಬಿಜೆಪಿಯ ಪ್ರತಿಷ್ಠೆಯ ಕಣವಾಗಿದ್ದ ಕುಂದಗೋಳ ವಿಧಾನಸಭಾ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿಯವರು ೩೦೦ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ಅವರನ್ನು ಹಿಂದಿಕ್ಕಿ ೩೦೦ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿಯವರ ನಿಧನದಿಂದ ಕುಂದಗೋಳ ವಿಧಾನಸಬೆಗೆ ನಡೆದ ಉಪಚುನಾವಣೆಯು ಮೈತ್ರಿಕೂಟ ಹಾಗೂ ಬಿಜೆಪಿಗೆ ಅತ್ಯಂತ ಪ್ರತಿಷ್ಠೆಯ ಕಣವಾಗಿತ್ತು. ಸುಮಾರು ದಿನಗಳಿಂದ ಕ್ಷೇತ್ರದಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದ ಮೈತ್ರಿಪ್ರಕ್ಷ ಹಾಗೂ ಬಿಜೆಪಿ ನಾಯಕರು ಹೇಗಾದರೂ ಮಾಡಿ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲೇಬೇಕೆಂದು ಕ್ಷೇತ್ರದಲ್ಲಿ ಹರಸಾಹಸ ಪಟ್ಟಿದ್ದರು. ಈಗ ಕುಸುಮಾ ಶಿವಳ್ಳಿ ಅವರು ಗೆಲುವು ಸಾಧಿಸಿ ಕಾಂಗ್ರೆಸ್ ಮುಖಂಡರು ಪಟ್ಟ ಹರಸಾಹಸಕ್ಕೆ ಪ್ರತಿಫಲವನ್ನು ನೀಡಿದ್ದಾರೆ.

loading...