೫ ಜಿ ನೆಟ್ ವರ್ಕ್ ಗಳ ಭದ್ರತಾ ಬೆದರಿಕೆ ಕುರಿತು ಅಮೆರಿಕ, ಯೂರೋಪಿಯನ್ ಒಕ್ಕೂಟ ಪರಾಮರ್ಶಿಸಬೇಕು : ಅಮೆರಿಕ

0
24

ವಾಷಿಂಗ್‌ಟನ್: ಐದು ಜಿ ತರಂಗಾಂತರದ ಸಂಭಾವ್ಯ ಅಪಾಯಗಳ ಬಗ್ಗೆ ಚರ್ಚಿಸಲು ಅಮೆರಿಕ ಮತ್ತು ಯೂರೋಪ್ ಒಕ್ಕೂಟ (ಇಯು) ವಾಷಿಂಗ್‌ಟನ್‌ ನಲ್ಲಿ ಈ ವಾರ ನಡೆದ ಸಭೆಯಲ್ಲಿ ಸಮ್ಮತಿಸಿವೆ ಎಂದು ಅಮೆರಿಕದ ಅಧಿಕೃತ ಹೇಳಿಕೆ ತಿಳಿಸಿದೆ.
ಅಮೆರಿಕ – ಇಯು ಉಭಯ ದೇಶಗಳು ದೂರಸಂಪರ್ಕ ವಲಯದಲ್ಲಿ ಐದು ಜಿ ತರಂಗಾಂತರದ ಮಹತ್ವ ವಿವರಿಸಿ, ಸಂಭಾವ್ಯ ಭದ್ರತಾ ಅಪಾಯಗಳನ್ನು ಪರಿಹರಿಸಲು ಗಮನ ಹರಿಸಲು ಸಮ್ಮತಿಸಿವೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , ಚೀನಾದ ದೂರಸಂಪರ್ಕ ಕಂಪೆನಿ ಹುವೈ ಮತ್ತು ಅದರ ಸಹವರ್ತಿ 70 ಕಂಪೆನಿ ಸಾಧನ, ಸಲಕರಣಗಳನ್ನು ಕಪ್ಪುಪಟ್ಟಿಗೆ ಸೇರಿಸಿ ಅಮೆರಿಕದಲ್ಲಿ ಅವುಗಳ ಚಟುವಟಿಕೆಗೆ ನಿರ್ಬಂಧ ಹೇರಿದ್ದರು.  ಹೀಗಾಗಿ ಗೂಗಲ್ ಸಹ ಹುವೈ ನೊಂದಿಗಿನ ವ್ಯವಹಾರ ರದ್ದುಪಡಿಸಿತು.
ಹುವೈ ಸಾಧನಗಳ ಮೂಲಕ ಚೀನಾ ಬೇಹುಗಾರಿಕೆ ನಡೆಸಿದೆ ಎಂದು ಅನೇಕ ದೇಶಗಳು ಆರೋಪಿಸಿವೆ.
ಕಳೆದ ವರ್ಷ ಆಸ್ಟ್ರೇಲಿಯಾ, ಜಪಾನ್, ನ್ಯೂಜಿಲೆಂಡ್‌ ಮತ್ತು ಅಮೆರಿಕ ದೇಶಗಳು ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಹುವೈ ಸಂಸ್ಥೆ ಸರ್ಕಾರಿ ವ್ಯವಹಾರಗಳಲ್ಲಿ ಪಾಲ್ಗೊಳ್ಳದಂತೆ ನಿರ್ಬಂಧ ವಿಧಿಸಿದ್ದವು.
ಆದರೆ ಹುವೈ ಈ ಆರೋಪಗಳನ್ನು ನಿರಾಕರಿಸಿದೆ.

loading...