ರಮೇಶ ಜಾರಕಿಹೊಳಿ ಆಪರೇಷನ್ ಕಮಲ ರಿಲೀಜ್ ಆಗದ ಚಿತ್ರ : ಸತೀಶ ಜಾತಕಿಹೊಳಿ

0
29

ರಮೇಶ ಜಾರಕಿಹೊಳಿ ಆಪರೇಷನ್ ಕಮಲ ರಿಲೀಜ್ ಆಗದ ಚಿತ್ರ : ಸತೀಶ ಜಾತಕಿಹೊಳಿ

ಬೆಳಗಾವಿ : ಇದು ರಮೇಶ ಜಾರಕಿಹೊಳಿಯ ಹಳೆಯ ಪಿಕ್ಚರ್ ಇನ್ನೂ‌ ರಿಲೀಸ್‌ ಆಗಿಲ್ಲ.. ಪಿಕ್ಚರ್ ಹಳೆದು ಆದ್ರೆ ಇನ್ನೂ ರಿಲೀಸ್ ಆಗಿಲ್ಲ,ಅಗೊದೂ ಇಲ್ಲ. ಇದೊಂದು ಬಿಡುಗಡೆ ಯಾಗದೇ ಇರುವ ಚಿತ್ರ ಎಂದು ರಮೇಶ ಜಾರಕಿಹೊಳಿಗೆ ಸಚಿವ ಸತೀಶ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಅವರು ಇಂದು ನಗರದ ನಿವಾಸದಲ್ಲಿ ಮಾಧ್ಯಮದಲ್ಲಿ ಮಾತನಾಡಿ, ಬಹಳಷ್ಟು ಜನ ಪಿಕ್ಚರ್ ತೆಗೆದು ಡಬ್ಬದಲ್ಲಿ ಇಟ್ಟಿರ್ತಾರೆ, ಹಾಗೇ ರಮೇಶ ಜಾರಕಿಹೊಳಿ ಪಿಕ್ಚರ ಕೂಡ ಎಂದು ರಾಜ್ಯದಲ್ಲಿ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಆಪರೇಷನ್ ಕಮಲ ವಿಚಾರವು ಹಾಗೇ ಎಂದು ಹೇಳಿದರು.

ರಾಜೀನಾಮೆ ಕೊಡ್ತಿನಿ ಕೊಡ್ತಿನಿ ಅಂತಾರೆ ಕೊಡೋದು‌ ಯಾವಾಗ ಎಂದು ಪ್ರಶ್ನಿಸಿದ್ದಾರೆ. ರಮೇಶ ಜಾರಕಿಹೊಳಿ ಸಿನೆಮಾ ರಿಲೀಸ್ ಆಗುತ್ತಾ ಎಂಬ ಪ್ರಶ್ನೆಗೆ ರಿಲೀಸ್ ಆಗೋದು ಡೌಟ್ ಎಂದ ಸತೀಶ್…

ಸಿಎಂ ಕುಮಾರಸ್ವಾಮಿ ರಮೇಶ ಜಾರಕಿಹೊಳಿಗೆ ಮಂತ್ರಿ ಆಫರ್ ಕೊಟ್ಟು ಎರಡು ತಿಂಗಳಾಯಿತು. ನಿನ್ನೆ ಸಿಎಂ ಕುಮಾರಸ್ವಾಮಿ ‌ಅವರಿಗೆ ಹೇಳಿದ್ದೇನೆ… ಸಚಿವ ಸ್ಥಾನ ಅಲ್ಲ.., ನಿಮ್ಮ ಸಿಎಂ ಸ್ಥಾನ ಕೊಟ್ರು ಅವನು ಸರ್ಕಾರ ಅಲುಗಾಡಿಸೋನೆ ಎಂದು ಹೇಳಿದ್ದೇನೆ ಎಂದು ಹೇಳಿದ್ದಾರೆ.

loading...