ಪಾರದರ್ಶಕವಾಗಿ ಚುನಾವಣೆ ನಡೆಸಿ: ಅನಿಲಕುಮಾರ

0
12

ಅಳ್ನಾವರ: ಮೇ.೨೯ ರಂದು ನಡೆಯಲಿರುವ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ ಸಂವಿಧಾನ ನೀಡಿದ ಅಮೂಲ್ಯ ಮತವನ್ನು ಕಡ್ಡಾಯವಾಗಿ ಚಲಾಯಿಸಬೇಕು. ಚುನಾವಣೆಯನ್ನು ಶಾಂತಿಯುತವಾಗಿ, ಪಾರದರ್ಶಕವಾಗಿ ನಡೆಯಲು ಸಹಕರಿಸಿಬೇಕು ಎಂದು ಪಿಎಸ್‌ಐ ಎಚ್.ಡಿ.ಅನಿಲಕುಮಾರ ಹೇಳಿದರು.
ಪಟ್ಟಣ ಪಂಚಾಯ್ತಿ ಚುನಾವಣೆ ಪ್ರಯುಕ್ತ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಲು ನೆಹರು ನಗರ ಬಡಾವಣೆಯಲ್ಲಿ ನಡೆದ ತಿಳುವಳಿಕೆ ಕಾರ್ಯಕ್ರಮದಲ್ಲಿ ಸಾರ್ವಜನಿಕರನ್ನು ಉದ್ದೆÃಶಿಸಿ ಮಾತನಾಡಿದ ಅವರು, ಯಾವುದೆ ಗಲಾಟೆ ಮಾಡದೆ ಚುನಾವಣೆ ನಡೆಸಬೇಕು ಎಂದರು.

ಧಾರ್ಮಿಕ ತಾಣಗಳನ್ನು ಪ್ರಚಾರಕ್ಕೆ ಬಳಸಬಾರದು. ಪಕ್ಷಗಳು ತಮ್ಮ ಸಿದ್ದಾಂತಗಳನ್ನು ಪ್ರತಿಪಾದಿಸಿ ಮತಯಾಚನೆ ಮಾಡಬೇಕು. ಚುನಾವಣೆ ದಿನ ಮತದಾರರನ್ನು ಮತಗಟ್ಟೆಗೆ ಕರೆ ತರಲು ವಾಹನ ಬಳಕೆ ಬೇಡ. ಅಂಗವಿಕಲರಿಗೆ, ವೃದ್ದರಿಗೆ ಸರ್ಕಾರವೆ ವಾಹನ ವ್ಯವಸ್ಥೆ ಮಾಡುತ್ತದೆ. ಮತದಾರರ ಯಾದಿಯನ್ನು ಸರ್ಕಾರವೆ ಪ್ರತಿ ಮನೆಗೆ ನೀಡುತ್ತದೆ. ಪವಿತ್ರವಾದ ಮತವನ್ನು ವ್ಯರ್ಥ ಮಾಡದೆ ಉತ್ತಮ ವ್ಯಕ್ತಿಗಳಿಗೆ ಚಲಾಯಿಸಿ ಎಂದರು.
ನಿರ್ಬಿತವಾಗಿ ಚುನಾವಣೆ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಅಪರಾದ ತಡೆಗೆ ಫ್ಲಾಯಿಂಗ್ ಸ್ಕಾಡ್ ರಚಿಸಲಾಗಿದೆ. ಅಭ್ಯರ್ಥಿಗಳು ಮತದಾರರಿಗೆ ಒತ್ತಾಯ ಮಾಡಬಾರದು. ಪ್ರಜಾಪ್ರಭತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಶ್ರೆÃಷ್ಟವಾದದ್ದು, ಮತ ಹಾಕುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು. ಅಭ್ಯರ್ಥಿಗಳು ಮತದಾರರಿಗೆ ಹಣದ ಆಸೆ ತೋರಿಸುವದು, ಉಡುಗೋರೆ ನೀಡುವದು ಕಾನೂನು ರೀತಿಯಲ್ಲಿ ಅಪರಾದವಾಗಿದೆ. ಅಂತಹ ಘಟಣೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ನಿಮ್ಮ ಜೊತೆ ಇದೆ ಎಂದರು.

ನಾಗರಾಜ ಹಾಲಹರವಿ. ಮಹಾಂತೇಶ ಮುದ್ದಿÃನ, ಪ್ರವೀಣ, ಭಾಗ್ಯವತಿ ಕುರುಬರ, ಉಸ್ಮಾನ ಬಾತಖಂಡಿ, ಜೈಲಾನಿ ಸುದರ್ಜಿ, ಅಶೋಕ ಬರಗುಂಡಿ, ವಿನಾಯಕ ಕುರುಬರ , ಅಸನಲಿ ಶೇಖ ಇದ್ದರು.

loading...