ಬಾಲ್ಯ ವಿವಾಹ ನಡೆಯುತ್ತಿದ್ದ ಮನೆಗೆ ಅಧಿಕಾರಿಗಳ ಭೇಟಿ

0
34

ಕನ್ನಡಮ್ಮ ಸುದ್ದಿ-ಧಾರವಾಡ: ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಬಂದ ಮಾಹಿತಿಯ ಮೇರೆಗೆ ಭಾನುವಾರದಂದು ಧಾರವಾಡ ತಾಲೂಕಿನ ಮನಸೂರ ಗ್ರಾಮದ ಮುದಕಪ್ಪ ಹರಕುಣಿ ಎಂಬ ಯುವಕನೊಂದಿಗೆ ಅದೇ ಗ್ರಾಮದ ೧೬ ವರ್ಷದ ಅಪ್ರಾಪ್ತ ಬಾಲಕಿಯೊಡನೆ ಬಾಲ್ಯ ವಿವಾಹ ನಿಶ್ಚಯ ಮಾಡಿದ್ದರ ಬಗ್ಗೆ ಮಾಹಿತಿ ತಿಳಿದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಮಾರ್ಗದರ್ಶನದಂತೆ ಗ್ರಾಮ ಪಂಚಾಯತ್ ಮಟ್ಟದ ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮನೆಗೆ ಭೇಟಿ ಮಾಡಿ ಬಾಲ್ಯ ವಿವಾಹ ನಡೆಯುತ್ತಿದ್ದರ ಬಗ್ಗೆ ಮಾಹಿತಿ ಪಡೆದರು.
ಬಾಲ್ಯ ವಿವಾಹ ತಡೆಯಲು ಬಂದ ಅಧಿಕಾರಿಗಳಿಗೆ ದುರ್ವತನೆ ತೋರುತ್ತಿರುವುದರ ಬಗ್ಗೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಚಿಣ್ಣನ್ನವರ ಆರ್.ಎಸ್ ಇವರೊಂದಿಗೆ ಮಾತನಾಡಿ ಮುಂದೆ ಆಗಬಹುದಾದ ತೊಂದರೆಗಳ ಕುರಿತು ಚರ್ಚಿಸಲಾಗಿದೆ. ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ನೆರೆದ ಸಮೂಹಕ್ಕೆ ಬಾಲ್ಯ ವಿವಾಹ ನಿಷೇಧ ಮತ್ತು ಕರ್ನಾಟಕ ತಿದ್ದುಪಡೆ ಕಾಯ್ದೆ-೨೦೧೬ ರ ಬಗ್ಗೆ ಮಾಹಿತಿ ನೀಡಿ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಬಾಲಕಿಯ ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮುಚ್ಚಳಿಕೆ ಪಡೆಯಲಾಯಿತು.

ಅನಿತಾ ಹಿರೇಮಠ, ಶಿಶುಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ರೇಣುಕಾ ಅಸುಂಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಾಂಸ್ಥಿಕ ರಕ್ಷಣಾಧಿಕಾರಿಗಳಾದ ನಿಂಗಪ್ಪ ಮಡಿವಾಳರ, ಘಟಕದ ಮಹಮ್ಮದಅಲಿ ತಹಶೀಲ್ದಾರ ಇದ್ದರು.

loading...