ನಾಳೆ ದಿ ಮಹಾಂತೇಶ ಅರ್ಬನ್‌ ಕೋ-ಆಫ್‌ ಸೋಸೈಟಿಯ ಬೆಳ್ಳಿ ಹಬ್ಬ ಮಹೋತ್ಸವ

0
26

ರಾಮದುರ್ಗ: ಮೇ 29 ರಂದು ದಿ ಮಹಾಂತೇಶ ಅರ್ಬನ್‌ ಕೋ-ಆಫ್‌ ಸೋಸೈಟಿಯ ಬೆಳ್ಳಿ ಹಬ್ಬ ಮಹೋತ್ಸವ ಹಾಗೂ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ನೇರವೇರಲಿದೆ ಎಂದು ಅಧ್ಯಕ್ಷ ಶಶಿಧರ ಮಾಳವಾಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಥಳೀಯ ಪ್ರೆಸ್‌ ಕ್ಲಬ್‌ ನಲ್ಲಿ ಸೋಮವಾರ ನೆಡದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು1994 ರಲ್ಲಿ ಪ್ರಾರಂಭವಾದ ಸಂಸ್ಥೆ ಹೆಮ್ಮರವಾಗಿ ಬೇಳದಿದೆ 1800 ಸೇರುದಾರು ದುಡಿಯುವ ಬಂಡವಾಳ 6 ಕೋಟಿ ಹೊಂದಿದ್ದು ಪ್ರತಿ ವರ್ಷ 15 ಲಕ್ಷ ಲಾಭವನ್ನು ಬರುತ್ತಿದೆ.
ಈ ನೂತನ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ಬೆಳಗಾವಿ ರುದ್ರಾಕ್ಷಿಮಠದ ಡಾ ಸಿದ್ದರಾಮೇಶ್ವರ ಸ್ವಾಮಿಗಳು, ತೊರಗಲ್‌ ಚನ್ನಮಲ್ಲ ಶಿವಾಚಾರ್ಯ ಸ್ವಾಮಿಗಳು,ಮುಳ್ಳೂರಿನ ಚಂದ್ರಶೇಖರ ಸ್ವಾಮಿಗಳು, ಸಾನಿದ್ಯ ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ಸೋಸೈಟಿಯ ಅಧ್ಯಕ್ಷ ಶಶಿಧರ ಮಾಳವಾಡ, ನೂತನ ಕಟ್ಟಡ ಉದ್ಘಾಟನೆ ಅರಣ್ಯ ಸಚಿವ ಸತೀಶ ಜಾರಕಿಹೋಳಿ, ಲಾಕರ್‌ ಉದ್ಘಾಟನೆ, ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ, ಸ್ಮರಣ ಸಂಚಿಕೆ ಬಿಡುಗಡೆ ಮಹಾದೇವಪ್ಪ ಯಾದವಾಡ, ಮುಖ್ಯ ಅತಿಥಿಗಳಾಗಿ ಬಾಗಲಕೋಟ ಶಾಸಕ ವಿರಣ್ಣಾ ಚರಂತಿಮಠ, ಮಾಜಿ ಶಾಸಕ ಅಶೋಕ ಪಟ್ಟಣ.
ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ, ಸಂಜೆ ಕಾಮಿಡಿ ಕಿಲಾಡಿಗಳಿಂದ ಹಾಸ್ಯ ಸಂಗೀತ ಸಂಜೆ ಕಾರ್ಯಕ್ರಮ ಬಸವೇಶ್ವರ ಶಾಲಾ ಆವರಣದಲ್ಲಿ ನೆರವೇರಲಿದೆ. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಗೋವಿಂದ ಮಡ್ಡಿ, ಸಂಸ್ಥಾಪಕ ಅಧ್ಯಕ್ಷ ಮಹಾದೇವಪ್ಪ ಕಲಹಾಳ, ನಿರ್ದೇಶಕರಾದ ಬಸವರಾಜ ಯಾದವಾಡ, ಶಿವಾನಂದ ಅಂಗಡಿ,ಅಶೋಖ ಶಿರೋಳ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...