ಆರ್ ಸಿಯುನ ಯುಜಿಸಿ‌ ನಿಯಮಗಳ ಅಕ್ರಮ ನೇಮಕ: ಉಗಾರೆ

0
246

ಬೆಳಗಾವಿ

ಬೆಳಗಾವಿಯಲ್ಲಿರುವ ರಾಣಿ ಚನ್ನಮ್ಮ ವಿವಿಯ ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ನೇಮಕವಾದ ಎಲ್ಲ ಭೋದಕ ನೇಮಕಾತಿಯನ್ನು ತನಿಖೆಮಾಡಿ ಅವರ ಮೇಲೆ ಕ್ರಿಮಿನಲ್ ಕ್ರಮ ತೆಗದುಕೊಳ್ಳುವುದು ಮತ್ತು ಹೊಸದಾಗಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಅಕ್ರಮಕ್ಕೆ ಕಾರಣರಾದವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನ್ಯಾಯವಾದಿ ಸುರೇಂದ್ರ ಉಗಾರೆ‌ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಣಿ ಚನ್ನಮ್ಮ ವಿವಿಯಲ್ಲಿ 2011-12ರಿಂದ ಇಲ್ಲಿಯವರೆಗೆ ಒಟ್ಟು 130ರ ಪೈಕಿ 105 ಬೋದಕ ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. ಈ ನೇಮಕಾತಿಯ ನ್ಯೂನತೆ ಉಜಿಸಿ ನಿಯಮವನ್ನು ಉಲ್ಲಂಘಿಸಿ ಆಯ್ಕೆಯಾದವರ ಕುರಿತು 2016-17 ರಲ್ಲಿ ವಾರ್ಷಿಕ ಅಡಿಟ್ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದರಂತೆ ನಿಯಮಗಳನ್ನು ಉಲ್ಲಂಘಿಸಿ ನೇಮಕವಾದ ಬೋದಕರ ನೇಮಕಾತಿಯ ವರದಿಯ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
2016-17 ರ ವಾರ್ಷಿಕ ವರದಿಯ ಪ್ರಕಾರ ಪ್ರೊಪೆಸರ್ ಹುದ್ದೆ 22 ರಲ್ಲಿ 13. ಸಹ ಪ್ರೊಫೆಸರ್ ಹುದ್ದೆಯಲ್ಲಿ 40ರಲ್ಲಿ 29 ಹಾಗೂ ಸಹಾಯಕ ಪ್ರೊಫೆಸರ್ 130ರಲ್ಲಿ 105 ಹುದ್ದೆಗಳಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ನೇರ ನೇಮಕವಾದ ಹುದ್ದೆಗಲು ಕೇವಲ 7 ಮಾತ್ರ ಎಂದರು..

loading...