ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರು ಕಂಡು ಬಂದರೆ ಕ್ರಮ

0
32

ನರೇಗಲ್ಲ: ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರು ಮತ್ತು ಶಾಲಾ ಮಕ್ಕಳನ್ನು ಸಾಗಿಸುವುದು ಕಂಡುಬಂದಲ್ಲಿ ವಾಹನ ಮಾಲೀಕರ ಮತ್ತು ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ಪಿಎಸ್‌ಐ ರಾಜೇಶ ಬಟಕುರ್ಕಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಕಟ್ಟಡ, ಕೂಲಿ ಕಾರ್ಮಿಕರಿಗೆ ರಸ್ತೆ ಸಪ್ತಾಹ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಮುಂಜಾಗ್ರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಚ್ಚನ್ಯಾಯಾಲಯದಲ್ಲಿ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರ ಪರಿಣಾಮವಾಗಿ ನ್ಯಾಯಾಂಗದಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ವಿಷಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಗೋಸ್ಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಸರಕು ವಾಹನಗಳೆಂದು ನೊಂದಣಿಯಾಗಿರುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವಾಗ ಅಪಘಾತ ಉಂಟಾದಾಗ ಗಾಯಾಳುಗಳಿಗೆ ಮತ್ತು ಜೀವಹಾನಿಯಾದ ವ್ಯಕ್ತಿಗೆ ವಿಮಾ ಪರಿಹಾರ ಹಣ ದೊರೆಯದೆ ಅವರ ಅವಲಂಬಿತರು ಕಷ್ಟದ ಕಾಲ ಕಳೆಯುವಂತಾಗುತ್ತದೆ. ಅಲ್ಲದೇ ನಷ್ಟಕ್ಕೆ ಒಳಗಾದ ವ್ಯಕ್ತಿಗೆ ವಾಹನ ಮಾಲೀಕ ಪರಿಹಾರ ಭರಿಸಬೇಕಾಗುತ್ತದೆ. ಅಲ್ಲದೇ ವಾಹನ ಚಾಲಕನ ಪರವಾಣಿಗೆ ರದ್ದುಗೊಳ್ಳುತ್ತದೆ. ಜನ ಸಾಮಾನ್ಯರು ಪ್ರಾಣಿಗಳಂತೆ ಹಾಗೂ ವಸ್ತುಗಳಂತೆ ಸಂಚರಿಸುವುದು ಮಾನವ ಕುಲಕ್ಕೆ ಕಳಂಕವಾಗಿದ್ದು, ಇದನ್ನು ತಡೆಗಟ್ಟು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿವೆ ಎಂದರು.
ಚಂದ್ರಮೌಳೇಶ್ವ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಂತೋಷ ಮಣ್ಣೊಡ್ಡರ ಮಾತನಾಡಿದರು. ರಾಮಣ್ಣ ಹಾಳಕೆರೆ, ಶರಣಪ್ಪ ಕೊಂಡಿ, ಸೋಮಪ್ಪ ಹನಮಸಾಗರ, ಮಂಜುನಾಥ ನವಲಗುಂದ ಸೇರಿದಂತೆ ಇದ್ದರು.

loading...