ಕೃಷಿ ಅಭಿಯಾನ ರಥಯಾತ್ರೆಗೆ ಚಾಲನೆ

0
18

ರಾಮದುರ್ಗ: ಕೃಷಿ ಇಲಾಖೆಗೆ ಬರುವ ಸಕಾರಕಾರದ ಯೋಜನೆಗಳನ್ನು ರೈತರಿಗೆ ಸಮರ್ಪಕವಾಗಿ ಹಾಗೂ ಪ್ರಾಮಾಣಿಕವಾಗಿ ತಲುಪಿಸುವಂತಾ ಕಾರ್ಯವನ್ನು ಅಧಿಕಾರಿಗಳು ಮುಂದಾಗಬೇಕು ಮತ್ತು ರೈತರು ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಸಮಗ್ರ ಕೃಷಿ ಅಭಿಯಾನ ಅಂಗವಾಗಿ ಕೃಷಿ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡ ಕೃಷಿ ಮಾಹಿತಿ ರಥ ಯಾತ್ರೆಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿಯನ್ನು ಹೆಚ್ಚು ಲಾಭದಾಯಕವಾಗಿ ಉತ್ಪಾದಕತೆ ಮಾಡುವದರ ಜೊತೆಗೆ ಉತ್ಪಾದನೆ ಹೆಚ್ಚಿಸಬೇಕಿದ್ದು, ಸಮಗ್ರ ಕೃಷಿ ಮಾಹಿತಿಯನ್ನು ವಿವಿಧ ಅಭಿವೃದ್ದಿ ಇಲಾಖೆಗಳ ಸಮನ್ವಯದೊಂದಿಗೆ ನಡೆಸಲಾಗುತ್ತಿರುವ ಈ ಸಮೂಹ ಜಾಗೃತಿ ಕೃಷಿ ಅಭಿಯಾನದ ಉದ್ದೇಶದ ಸದುಪಯೋಗವನ್ನು ರೈತರು ಪಡೆಸಿಕೊಳ್ಳಬೇಕು ಎಂದು ತಿಳಿಸಿದರು.
ಜಿ.ಪಂ ಸದಸ್ಯ ರೇಣಪ್ಪ ಸೋಮಗೊಂಡ ಮಾತನಾಡಿ, ಈ ಕೃಷಿ ಅಭಿಯಾನ ರಥಯಾತ್ರೆಯು ತಾಲೂಕಿನಲ್ಲಿ 8 ದಿನಗಳ ವರೆಗೆ ಸಂಚರಿಸಲಿದ್ದು, ಪ್ರತಿಯೊಂದು ಗ್ರಾಮಕ್ಕೆ ತೆರಳಿ ರೈತರೊಂದಿಗೆ ಕೃಷಿಯ ಅಭಿವೃದ್ದಿಯ ಕುರಿತು ಚರ್ಚಿಸಿ, ಪರಿಹಾರ ಸೂಚಿಸುವದು. ಅಲ್ಲದೇ ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ವಿವಿಧ ಯೋಜನೆಗಳನ್ನು ಬಿಂಬಿಸುವದು ಈ ರಥಯಾತ್ರೆಯ ಉದ್ದೇಶವಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ ಬಸನಗೌಡ ಕೋಟುರ, ಸಹಾಯಕ ಕೃಷಿ ನಿರ್ದೇಶಕ ಎಸ್‌.ಎಫ್‌. ಬೆಳವಟಗಿ, ಕೃಷಿ ಅಧಿಕಾರಿಗಳಾದ ರಮೇಶ ದಾಸರ, ಜಿ.ಬಿ. ರಾಮನ್ನವರ, ಎಸ್‌.ಎನ್‌. ಕಮತ, ಬೀರಪ್ಪ ಪೂಜೇರ, ಮಂಜು ಮೇಲಿನಮನಿ ಸೇರಿದಂತೆ ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು. ಆರ್‌.ಪಿ.ಅರಕೇರಿ ಸ್ವಾಗತಿಸಿ, ವಂದಿಸಿದರು.

loading...