ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ: ೪ ಇಂಗ್ಲಿಷ್ ಮಿಡಿಯಂ, ೧ ಎಲ್‌ಕೆಜಿ ಸರಕಾರಿ ಶಾಲೆ ಆರಂಭ

0
51

ಹಾನಗಲ್ಲ: ತಾಲೂಕಿನ ೨೨೩ ಸರಕಾರಿ ಪ್ರಾಥಮಿಕ ಮತ್ತು ೨೯ ಪ್ರೌಢಶಾಲೆಗಳು ಇದೇ ೨೯ ರಂದು ಬುಧವಾರದಿಂದ ಆರಂಭಗೊಳ್ಳುತ್ತಿದ್ದು, ಶಾಲೆ ಪ್ರಾರಂಭೋತ್ಸವಕ್ಕಾಗಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.
ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ೨೫ ಸಾವಿರಕ್ಕೂ ಅಧಿಕ ಮತ್ತು ಪ್ರೌಢಶಾಲೆಯಲ್ಲಿ ೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ದಾಖಲಾತಿ ಹೊಂದಲಿದ್ದಾರೆ. ಪ್ರತಿ ಶಾಲೆಯಲ್ಲಿ ವಿಶೇಷ ಚಟುವಟಿಕೆಗಳ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಕರು ಸಜ್ಜುಗೊಂಡಿದ್ದಾರೆ. ಈಗಾಗಲೇ ವಿಶೇಷ ದಾಖಲಾತಿ ಅಂದೋಲ ಆರಂಭಗೊಂಡಿದೆ.
ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳನ್ನು ಸುಣ್ಣ, ಬಣ್ಣದಿಂದ ಸಿಂಗಾರ ಮಾಡಲಾಗಿದೆ. ಶಾಲೆ ಆರಂಭದ ದಿನ ತಳಿರು ತೋರಣ, ಚಕ್ಕಡಿ ಬಂಡಿ ಮೆರವಣಿಗೆ, ವಿದ್ಯಾರ್ಥಿಗಳಿಗೆ ಆರತಿ ಬೆಳಗಿ, ಹೂವು ವಿತರಿಸಿ ಶಾಲೆಗೆ ಸ್ವಾಗತಿಸಲು ಶಿಕ್ಷಕ ವರ್ಗ ಯೋಜನೆಗಳನ್ನು ಹಾಕಿಕೊಂಡಿದೆ. ಜೂನ್ ತಿಂಗಳು ಪೂರ್ತಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ಅಂದೋಲನ ನಡೆಸಲಾಗುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಕ್ಷೆÃತ್ರ ಶಿಕ್ಷಣಾಧಿಕಾರಿ ಎಚ್.ಶ್ರಿÃನಿವಾಸ, ಈ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಿರುವ ಆಂಗ್ಲ ಮಾದ್ಯಮ ಶಾಲೆಗಳನ್ನು ಹಾನಗಲ್ಲನ ಶಾಸಕರ ಮಾದರಿ ಶಾಲೆ, ಬೆಳಗಾಲಪೇಟೆ ಸರಕಾರಿ ಉರ್ದು ಶಾಲೆ, ವರ್ದಿ ಮತ್ತು ಆಡೂರ ಗ್ರಾಮದ ಮಾದರಿ ಶಾಲೆಯಲ್ಲಿ ಆರಂಭಿಸಲಾಗುತ್ತಿದೆ ಎಂದರು.
ಆಡೂರಿನಲ್ಲಿ ಎಲ್‌ಕೆಜಿ ವರ್ಗ ತೆರೆಯಲಾಗುತ್ತಿದೆ. ಈ ಹೊಸ ಯೋಜನೆಗೆ ೮ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ ಆಂಗ್ಲ ಮಾದ್ಯಮದಲ್ಲಿ ಶಿಕ್ಷಣಕ್ಕೆ ಸಜ್ಜುಗೊಳಿಸಲಾಗಿದೆ. ಸ್ಥಳೀಯ ಅತಿಥಿ ಶಿಕ್ಷಕರನ್ನು ಎಲ್‌ಕೆಜಿ ವರ್ಗಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಶಾಲೆ ಆರಂಭದ ದಿನದಂದು ಬಿಸಿಯೂಟದಲ್ಲಿ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ. ಜೂನ್ ೨೫ ರ ತನಕ ಸೇತುಬಂಧು ಕಾರ್ಯಕ್ರಮದ ಮೂಲಕ ಹಿಂದಿನ ಪಠ್ಯದ ಕ್ರಿಯಾಶೀಲತೆಯನ್ನು ಬೆಳೆಸುವುದು ಮತ್ತಿತರ ಸೂಚನೆಗಳನ್ನು ಸೋಮವಾರ ನಡೆದ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ. ೮ ದಿನಗಳು ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡವು ವಿವಿಧ ಶಾಲೆಗಳಿಗೆ ಮಿಂಚಿನ ಸಂಚಾರ ಮೂಲಕ ವ್ಯವಸ್ಥೆ ಪರಿಶೀಲನೆ ಕೈಗೊಳ್ಳಲಾಗುತ್ತದೆ ಎಂದು ಶ್ರಿÃನಿವಾಸ ತಿಳಿಸಿದ್ದಾರೆ.
ಈಗಾಗಲೇ ಶೇ. ೯೦ ರಷ್ಟು ಪಠ್ಯ ಪುಸ್ತಕಗಳ ವಿತರಣೆ ಪೂರ್ಣಗೊಂಡಿದೆ. ಗುಣಮಟ್ಟದ ಶಿಕ್ಷಣ ಹೆಚ್ಚಿಸುವುದು, ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅರ್ಪಣಾ ಭಾವದ ಸೇವೆಗೆ ಶಿಕ್ಷಕರಿಗೆ ಸಲಹೆಗಳನ್ನು ನೀಡಲಾಗಿದೆ ಎಂದು ಎಚ್.ಶ್ರಿÃನಿವಾಸ ಹೇಳಿದ್ದಾರೆ.

loading...