ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

0
11

ನವದೆಹಲಿ:- ನಾಳೆ ಬಿಜೆಪಿ ನಾಯಕ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಕ್ಕೆ ಭರದ ಸಿದ್ಧತೆ ನಡೆದಿದೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ನೇಪಾಳ, ಭೂತಾನ ಸೇರಿದಂತೆ ದೇಶ, ವಿದೇಶಗಳ ಆರು ಸಾವಿರಕ್ಕೂ ಹೆಚ್ಚು ಗಣ್ಯರು ಭಾಗಿಯಾಗಲಿದ್ದಾರೆ ಎಂದು ವರದಿಯಾಗಿದೆ.
2014 ರಲ್ಲಿ ಮೋದಿ ಪ್ರಮಾಣ ವಚನ ತೆಗೆದುಕೊಂಡಾಗ ಸುಮಾರು 4000 ಗಣ್ಯರು ಭಾಗಿಯಾಗಿದ್ದರು.
ರಾಷ್ಟ್ರಪತಿ ಭವನದ ಮುಂಭಾಗದ ಅಂಗಳದಲ್ಲಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದೆ. ಕಳೆದ 1990 ರಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರಶೇಖರ್ ಅವರು ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದಾದ ನಂತರ 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ , ಅನಂತರ 2014 ರಲ್ಲಿ ಮೋದಿ ಅವರು ರಾಷ್ಟ್ರಪತಿ ಭವನದ ಮುಂಭಾಗದ ಅಂಗಳದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದೀಗ ಮೋದಿ ಅವರು ಅದೇ ಸ್ಥಳದಲ್ಲಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ವಿಶೇಷವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನವನ್ನು ನವವಧುವಿನಿಂದ ಸಿಂಗಾರಗೊಳಿಸಲಾಗಿದೆ.

ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್, ಶ್ರೀಲಂಕಾ ಪ್ರಧಾನಿ ಮೈತ್ರಿಪಾಲ ಸಿರಿಸೇನಾ, ಮಾರಿಷಸ್ ಪ್ರಧಾನಿ ಪರ್ವಿಂದ್ ಕುಮಾರ್, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ, ಕಚಕಿಸ್ತಾನದ ಅಧ್ಯಕ್ಷ ಸೋರ್ನೋಬೇ ಜೀನ್‌ಬೆಕೌ ಸೇರಿದಂತೆ ಅನೇಕ ನಾಯಕರು ನಾಳಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿ ಕೂಟ 353 ಸ್ಥಾನಗಳಲ್ಲಿ ಜಯಗಳಿಸಿ ಮತ್ತೆ ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿಯನ್ನು ಮಣಿಸಲು ಎಸ್‌ಪಿ, ಬಿಎಸ್‌ಪಿ ಮಹಾಘಟಬಂಧನ ಮಾಡಿಕೊಂಡಿದ್ದರೂ ಬಿಜೆಪಿಯ ನಾಗಾಲೋಟಕ್ಕೆ ತಡೆಯೊಡ್ಡಲು ಸಾಧ್ಯವಾಗಲಿಲ್ಲ. ಅಲ್ಲಿ 80 ಸದಸ್ಯರ ಪೈಕಿ ಬಿಜೆಪಿ ಹಾಗೂ ಎನ್ ಡಿ ಎ ಮೈತ್ರಿಕೂಟ ಈ ಬಾರಿ ಚುನಾವಣೆಯಲ್ಲಿ 62 ಸ್ಥಾನಗಳಲ್ಲಿ ಜಯ ಸಾಧಿಸಿತ್ತು.

loading...