ನಂದಿಗದ್ದಾದಲ್ಲಿ ನಡೆದ ಹಲಸು ಮತ್ತು ಕೋಕಂ ಮೇಳ

0
29

ಜೋಯಿಡಾ: ಜೋಯಿಡಾ ತಾಲೂಕಿನ ನಂದಿಗದ್ದಾದಲ್ಲಿ ದೇಶಪಾಂಡೆ ರೂಡ್‌ ಸೆಟ್‌ ಸಂಸ್ಥೆ ಹಾಗೂ ಸಪ್ತಸ್ವರ ಸೇವಾ ಸಂಸ್ಥೆ , ಪ್ರೇರಣಾ ಸಂಸ್ಥೆ, ತೋಟಗಾರಿಕಾ ಇಲಾಕೆ, ಹಾಗೂ ಕೃಷಿ ಇಲಾಕೆ
ಇವರ ವತಿಯಿಂದ ಹಲಸು ಮತ್ತು ಕೋಕಂ ಮೇಳವನ್ನು ಆಯೋಜಿಸಲಾಗಿತ್ತು,
ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಸದಾನಂದ ದಬಗಾರ ಹಲಸು ಇದು ಬಡವರ ಆಹಾರ , ಹಿಂದಿನ ಕಾಲದವರು ನೆಟ್ಟ ಗಿಡಗಳಿಂದ ನಾವು ಇಂದು ಹಲಸು ತಿನ್ನುತ್ತಿದ್ದೇವೆ, ಮುಂದಿನ ಪೀಳಿಗೆಯವರಿಗೆ ಹಲಸಿನ ಮರ ಇರಬೇಕಾದರೆ ನಾವು ಹಲಸಿಗ ಗಿಡ ನೆಡಬೇಕು , ಹಲಸಿನ ಹೆಚ್ಚಿನ ಬಳಕೆ ಆಗಬೇಕು ಅಲ್ಲದೇ ಕೋಕಂ ಕೂಡಾ ದೇಹಕ್ಕೆ ಪೋಶಕಾಂಶ ಒದಗಿಸುವ ವಸ್ತು, ಇದರಲ್ಲಿ ರೋಗ ನಿವಾರಿಸುವ ಪ್ರತಿರೋಧಕ ಶಕ್ತಿ ಇದೆ ಎಂದರು.
ಗುಂದದ ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ ಮಾತನಾಡಿ ಹಲಸಿನ ಮರ ನೆರಳು ನೀಡುವಂತ ಮರ, ಇದರಿಂದ ಅನೇಕ ತಿಂಡಿ ತಿನಿಸು ಮಾಡಲು ಸಾಧ್ಯ, ಗುಂದದ ಈ ಹಳ್ಳಿಯಲ್ಲಿಯೂ ಇಲ್ಲಿನ ಮಹಿಳೆಯರು ಹಲಸಿನ ಖಾಧ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಹಲಸು ಬೆಳೆಸುತ್ತಿದ್ದಾರೆ, ನಮ್ಮ ಅರಣ್ಯ ಇಲಾಕೆಯಲ್ಲಿಯೂ ಸಹಿಯ ಹಲಸಿನ ಕಸಿ ಗಿಡಗಳು ಲಭ್ಯವಿದೆ ಎಂದರು.
ದೇಶಪಾಂಡೆ ರೂಡಸೆಟ್‌ ನಿರ್ದೇಶಕರಾದ ನಿತ್ಯಾನಂದ ವೈದ್ಯ ಮಾತನಾಡಿ ನಮ್ಮ ತಾಲೂಕಿನಲ್ಲಿ ಹಲಸಿನಿಂದ ಸಿಗುವ ಖಾಧ್ಯಗಳ ಬಗ್ಗೆ ಹೆಚ್ಚಿನ ಅರಿವೂ ಬೇಕಾಗಿದೆ, ನಾವೂ ಪ್ರತಿ ಹಳ್ಳಿಯಲ್ಲೂ ಸ್ವಸಹಾಯ ಸಂಘಗಳು ತಯಾರು ಮಾಡಿದ ತಿಂಡಿ ತಿನಿಸುಗಳನ್ನು ಖರೀದಿಸುವ ಕೆಲಸ ಮಾಡುತ್ತಿದ್ದೇವೆ ಎಂದರು,
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಂದಿಗದ್ದಾ ಗ್ರಾ,ಪಂ,ಅಧ್ಯಕ್ಷ ಅರುಣ ದೇಸಾಯಿ ಮಾತನಾಡಿ ಗುಂದದಲ್ಲಿ ಹಲಸಿನ ಮೇಳ ನಡೆಸಲು ಮುಖ್ಯ ಕಾರಣಿಕರ್ತರು ಇಲ್ಲಿನ ಸ್ವಸಹಾಯ ಸಂಘದ ಮಹಿಳೆಯರು, ಹಲಸಿನ ಮೇಳದಂತ ಕಾರ್ಯಕ್ರಮಗಳು ವರ್ಷವೂ ನಡೆಯಲಿ ನಮ್ಮ ಸಹಕಾರ ಎಲ್ಲಾ ಸಂಘ ಸಂಸ್ಥೆಗಳಿಗೂ ಇದೆ ಎಂದರು.
ತದನಂತರ ವಿಷೇಶ ಉಪನ್ಯಾಸಕರಾದ ನರಸಿಂಹ ಛಾಪಖಂಡ, ಶಂಕರ ಭಟ್ಟ ಯಲ್ಲಾಪುರ, ವಿ,ಎಂ,ಹೆಗಡೆ, ದಿನೇಶ ಭಟ್ಟ, ಇವರಿಂದ ಜೇನು ಕೃಷಿ ಮತ್ತು ಹಲಸು , ಕೋಕಂ ಬಗ್ಗೆ ಸವಿಸ್ತಾರವಾಗಿ ಜನರಿಗೆ ತಿಳಿಸಿಕೊಡಲಾಯಿತು.
ವೇದಿಕೆಯಲ್ಲಿ ಗ್ರಾಪಂ ಸದಸ್ಯ ಆರ್‌.ವಿ ದಾನಗೇರಿ, ಕೃಷಿ ಅಧಿಕಾರಿ ಪಿ.ಆಯ್‌ ಮಾನೆ, ತೋಟಗಾರಿಕಾ ಅಧಿಕಾರಿ ಎಸ್‌.ಡೋಣಿ, ವಿಕಾಸ ಹೆಗಡೆ, ಸುಕನ್ಯಾ ದೇಸಾಯಿ, ದಾಕ್ಷಾಯಿಣಿ ದಾನಶೂರ ಇದ್ದರು,
ಇದ ನಂತರ ನೂರಾರು ರೈತ ಮಹಿಳೆಯರು ತಾವು ತಂದ ಹಲಸಿನ ಮತ್ತು ಕೋಕಂದ ವಿಷೇಶ ಖಾಧ್ಯಗಳನ್ನು ಮಾರಟ ಮಾಡಿದರು, 50 ಕ್ಕೂ ಹೆಚ್ಚು ವಿಧಧ ಖಾದ್ಯಗಳು ಮಾರಟಕ್ಕೆ ಬಂದಿದ್ದವು.

loading...