ಸೇನೆಯಲ್ಲಿ ನೇಮಕ: ಪೂರ್ವಸಿದ್ಧತೆ ಅಗತ್ಯ

0
22

ಸೇನೆ ಸೇರಲು ಪಾಲಕರು ಪ್ರೋತ್ಸಾಹಿಸಲಿ
ಗದಗ : ರಾಜ್ಯಗಳ ಜನಸಂಖ್ಯೆ ಆಧಾರದಲ್ಲಿ ಸೇನಾ ನೇಮಕಾತಿ ಆಗುತ್ತಿದ್ದು ಪ್ರಾಥಮಿಕ ಹಂತದಲ್ಲಿ ಅಭ್ಯರ್ಥಿಗಳೂ ಓಟ ಹಾಗೂ ಇಂಗ್ಲೀಷ್ ಅಥವಾ ಹಿಂದಿಯಲ್ಲಿರುವ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವದು ಮುಖ್ಯವಾಗಿದೆ.  ಅದಕ್ಕಾಗಿ ನೇಮಕಾತಿಗಿಂತ ಮೊದಲಿನಿಂದಲೂ ಅರ್ಹ ಅಭ್ಯರ್ಥಿಗಳು ಪೂರ್ವಸಿದ್ಧತೆ ತರಬೇತಿ ಹೊಂದುವುದು ಅಗತ್ಯವಾಗಿದೆ ಎಂದು ಭೂ ಸೇನಾ ನೇಮಕಾತಿಯ ರಾಜ್ಯದ ಹೆಚ್ಚುವರಿ ಮಹಾನಿರ್ದೇಶಕ ಮೇಜರ್ ಜನರಲ್ ವಿಜಯ ಪಿಂಗಳೆ ನುಡಿದರು.
            ಗದುಗಿನಲ್ಲಿ ಮೇ 28 ರಿಂದ  ಜೂನ್ 6 ರವರೆಗೆ ರಾಜ್ಯದ 11 ಜಿಲ್ಲೆಗಳ ನೊಂದಾಯಿತ ಅಭ್ಯರ್ಥಿಗಳಿಗೆ ನಡೆಯುತ್ತಿರುವ ಭೂ ಸೇನಾ ನೇಮಕಾತಿ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ  ಅವರು ಮಾತನಾಡಿದರು.    ಈ ಭಾಗದ ತರುಣರು ದೈಹಿಕ ಸಾಮಥ್ರ್ಯ ಹೊಂದಿದ್ದರೂ  ಓಟ ಹಾಗೂ  ಲಿಖಿತ   ಪರೀಕ್ಷೆ ಕುರಿತು ಪೂರ್ವಸಿದ್ಧತೆ ಇಲ್ಲದೇ ಕೆಲವು ಪ್ರಕರಣಗಳಲ್ಲಿ ಪಾಲಕರೇ, ಮಕ್ಕಳಿಗೆ ಸೇನೆಗೆ ಹೋಗುವುದು ಬೇಡ ಎನ್ನುವ ಕಾರಣಗಳಿಂದ ಕಡಿಮೆ ಸಂಖ್ಯೆಯಲ್ಲಿ ನೇಮಕಾತಿ ಆಗುತ್ತಿದೆ.  ಜೀವಕ್ಕೆ ಅಪಾಯ ಎನ್ನುವುದು ಸೇನೆಯಲ್ಲಿ ಅಷ್ಟೇ  ಅಲ್ಲ.  ಜೀವನದ ವಿವಿಧ ರಂಗಗಳಲ್ಲಿಯೂ ಇದೆ.  ಸೇನೆಗೆ ಸೇರಿದ ಮೇಲೆ ಅವರಿಗೆ ನೀಡುವ ತರಬೇತಿಯಿಂದಾಗಿ ಎಂತಹ ವಿಪತ್ತನ್ನು ನಿರ್ವಹಿಸುವ ಸಾಮಥ್ರ್ಯ ತಮ್ಮ ಮಕ್ಕಳಿಗೆ ಬರುತ್ತದೆ.  ಮೇಲಾಗಿ ಇದು ದೇಶರಕ್ಷಣೆಯಂತಹ ಪವಿತ್ರ ಕಾರ್ಯವಾಗಿದ್ದು ಪಾಲಕರು ಅರ್ಹ ಮಕ್ಕಳಿಗೆ  ಸರ್ವ ರೀತಿಯಲ್ಲಿ ಸೇನೆ ಸೇರಲು  ಪ್ರೋತ್ಸಾಹಿಸಬೇಕು.  ಗದಗ ಜಿಲ್ಲಾಡಳಿತ ನಿಜವಾಗಿಯೂ ಎಲ್ಲ ರೀತಿಯಿಂದ ಸಹಕಾರ ನೀಡುತಿದ್ದು ಅದಕ್ಕಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಅಭಿನಂದಿಸಿರುವುದಾಗಿ ನುಡಿದ ಮೇಜರ್ ಜನರಲ್ ವಿಜಯ ಪಿಂಗಳೆ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದು ಅದಕ್ಕೆ  ನಿರ್ವಹಿಸುವ ಸಬಲೀಕರಣ ಇಲಾಖೆ ಹಾಗೂ ಹೆಚ್ಚುವರಿಗಾಗಿ ವಸತಿ, ವ್ಯವಸ್ಥೆ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.   ಗದುಗಿನಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿ ದಿನವೂ 2500 ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದು ಅವರ ದೈಹಿಕ ಸಾಮಥ್ರ್ಯ ಆರೋಗ್ಯ ಹಾಘೂ ಲಿಖಿತ ಪರೀಕ್ಷೆಗಳ ಪೂರ್ವ ಸಿದ್ಧತೆ  ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುತ್ತಿಲ್ಲ ಇದನ್ನು ಅಭ್ಯರ್ಥಿಗಳು ಪಾಲಕರು ಗಮನಿಸಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಆಗುವಂತೆ ಪೂರ್ವ ಸಿದ್ಧತೆಗೆ ಮುಂದಾಗಬೇಕೆಂದು ತಿಳಿಸಿದರು ಹಾಗೂ   ಮುಂದಿನ  ರ್ಯಾಲಿಯನ್ನು ಕೊಪ್ಪಳದಲ್ಲಿ  ನಡೆಸಲಾಗುವುದು ಎಂದು ಮೇಜರ್ ಜನರಲ್  ಮನವಿ ಮಾಡಿದರು.
           ಮಂಗಳೂರು ಭೂ ಸೇನಾ ನೇಮಕಾತಿ ಕೇಂದ್ರದ ನಿರ್ದೇಶಕ ಕರ್ನಲ್ ಎಂ.ಎ. ರಾಜಮನ್ನಾರ್ , ಭೂ ಸೇನೆಯ ಅಧಿಕಾರಿಗಳಾದ ಪಿ. ರಂಗವಾಲ್ , ರೋಹಿತ ಠಾಕೂರ, ರಿತೇಶ ಸಿಂಗ್, ಸಮೀತ ನವಾನಿ, ರಾಣೆ, ಹಾಗೂ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಧಾರವಾಡ ಕೇಂದ್ರದ ಉಪನಿರ್ದೇಶಕ ನಿವೃತ್ತ ವಿಂಗ್ ಕಮಾಂಡರ್ ಈಶ್ವರ ಕಡೊಳ್ಳಿ ಅವರು ಪತ್ರಿಕಾಗೋಷ್ಟಿಯಲ್ಲಿದ್ದರು.
   

loading...