ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಇದಲ್ಲ ಎಂದ ಸ್ಟೋಕ್ಸ್

0
14

ಲಡನ್:- ದಕ್ಷಿಣ ಆಫ್ರಿಕಾ ವಿರುದ್ಧ ಗುರುವಾರ ನಡೆದಿದ್ದ ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯದಲ್ಲಿ ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್‌ ಹಿಡಿದದ್ದು ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಅಲ್ಲ ಎಂದು ಸ್ವತಃ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಹೇಳಿಕೊಂಡಿದ್ದಾರೆ.
ನಿನ್ನೆ ಪಂದ್ಯದಲ್ಲಿ ಸ್ಟೋಕ್ಸ್‌ 89 ರನ್‌ ಸಿಡಿಸಿ ಇಂಗ್ಲೆಂಡ್‌ 104 ರನ್‌ಗಳ ಗೆಲುವಿಗೆ ಕಾರಣರಾಗಿದ್ದರು. ಮೊದಲು ಬ್ಯಾಟಿಂಗ್‌ ಮಾಡಿದ್ದ್ ಇಂಗ್ಲೆಂಡ್‌ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 311 ರನ್‌ ಗಳಿಸಿತ್ತು. ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 39.5 ಓವರ್‌ಗಳಲ್ಲಿ 207 ರನ್‌ಗಳಿಗೆ ಸರ್ವಪತನವಾಗಿತ್ತು.

ಆದರೆ, ಈ ಪಂದ್ಯದಲ್ಲಿ ಬೆನ್‌ ಸ್ಟೋಕ್ಸ್‌ ಬೌಂಡರಿ ಲೈನ್‌ ಸಮೀಪ ಒಂದೇ ಕೈಯಲ್ಲಿ ಹಿಡಿದ ಕ್ಯಾಚ್‌ ಅತ್ಯಾಕರ್ಷಕವಾಗಿತ್ತು. ಆದಿಲ್‌ ರಶೀದ್‌ ಬೌಲಿಂಗ್‌ನಲ್ಲಿ ಆ್ಯಂಡಿಲೆ ಫೆಹ್ಲುಕ್ವಾವೊ ಅವರು ಹೊಡೆದ ಸ್ಲಾಗ್‌ ಸ್ವೀಪ್‌ ಶಾಟ್‌ ಇನ್ನೇನು ಬೌಂಡರಿ ತಲುಪಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬೌಂಡರಿ ಲೈನ್‌ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸ್ಟೋಕ್ಸ್‌ ಚೆಂಡಿನ ನಿಗಧಿತ ಸಮಯಕ್ಕೆ ಜಂಪ್‌ ಮಾಡಿ ಒಂದೇ ಕೈಯಲ್ಲಿ ಕ್ಯಾಚ್ ಹಿಡಿದರು. ಈ ಕ್ಯಾಚ್‌ ಬಗ್ಗೆ ಕ್ರಿಕೆಟ್‌ ದಿಗ್ಗಜರಿಂದ ಶ್ಲಾಘನೆಯ ಮಹಾಪೂರ ಹರಿದು ಬಂದಿತು.
ನಿಮ್ಮ ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಇದೇನಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬೆನ್‌ ಸ್ಟೋಕ್ಸ್‌, ” ನನ್ನ ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಆಸ್ಟ್ರೇಲಿಯಾ ವಿರುದ್ಧ ಹಿಡಿದಿದ್ದು” ಎಂದು ಹೇಳಿದರು.
2015ರಲ್ಲಿ ಟ್ರೆಂಟ್‌ ಬ್ರಿಡ್ಜ್‌ನಲ್ಲಿ ಆ್ಯಶಸ್‌ ಟ್ರೋಫಿ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಆ್ಯಡಂ ವೋಗ್ಸ್ ಅವರ ಬ್ಯಾಟ್‌ಗೆ ತಾಗಿ ವೇಗವಾಗಿ ಬಂದ ಚೆಂಡನ್ನು ಬೆನ್‌ ಸ್ಟೋಕ್ಸ್‌ ಒಂದೇ ಕೈಯಲ್ಲಿ ಹಿಡಿದ್ದರು. ಈ ಕ್ಯಾಚ್‌ ಸ್ಟೋಕ್ಸ್ ಅವರ ವೃತ್ತಿ ಜೀವನದ ಶ್ರೇಷ್ಠ ಕ್ಯಾಚ್‌ ಎಂದು ಅವರು ಹೇಳಿದ್ದಾರೆ.

loading...