೬ ದಿನದಲ್ಲಿ ೫೫ ಟನ್ ಮಾವು ಮಾರಾಟ !

0
41

೬ ದಿನದಲ್ಲಿ ೫೫ ಟನ್ ಮಾವು ಮಾರಾಟ !
ಮೇಳಕ್ಕೆ ನಿರಸ ಪ್ರತಿಕ್ರಿಯೆ | ಇನ್ನೂ ೪ ದಿನ ಮಾವು ಮೇಳ
ಮಾಲತೇಶ ಮಟಿಗೇರ
ಬೆಳಗಾವಿ: ಬೆಳಗಾವಿಯಲ್ಲಿ ಮೇ.೨೮ರಂದು ಆರಂಭವಾದ ಮಾವು ಮೇಳಕ್ಕೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಕಡಿಮೆ ಮಾವು ಮಾರಾಟವಾಗಿದೆ.
‘ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಯೋಗ್ಯ ಬೆಲೆಗೆ ತಲುಪಿಸುವ ಉದ್ದೇಶದಿಂದ ಪ್ರತಿ ವರ್ಷದಂತೆ ಈ ವರ್ಷವೂ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಸತತ ಮೂರನೇ ವರ್ಷದ ಮಾವು ಮೇಳವಾಗಿದೆ. ಇದೇ ಮೇ. ೨೮ ರಿಂದ ಜೂ.೮ ರವರೆಗೆ ನಗರದ ಕ್ಲಬ್ ರೋಡದಲ್ಲಿ ಇರುವ ತೋಟಗಾರಿಕೆ ಇಲಾಖೆ ಕಛೇರಿ ಆವರಣದಲ್ಲಿ ಮಾವಿನ ಮೇಳವನ್ನು ಆಯೋಜನೆ ಮಾಡಿದ್ದು, ಸಾರ್ವಜನಿಕರಿಂದ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
೫೫ ಟನ್ ಮಾರಾಟ: ಬೆಳಗಾವಿ ತೋಟಗಾರಿಕೆ (ಜಿಪಂ) ಇಲಾಖೆ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಮಾವು ಮೇಳದಲ್ಲಿ ರವಿವಾರಕ್ಕೆ ಸು.೫೫ ಟನ್ ಮಾವು ಮಾರಾಟವಾಗಿದೆ. ಮಾವು ಮಾರಾಟ ಮೂರು ವರ್ಷದಿಂದ ಆರಂಭಿಸಲಾಗಿದ್ದು, ಮೊದಲನೇ ವರ್ಷ ೬೪ ಟನ್, ಎರಡನೇ ವರ್ಷ ೧೧೪ ಟನ್ ಮಾರಾಟವಾಗಿತ್ತು. ಆದರೆ ಈ ವರ್ಷ ೬ ದಿನಗಳಲ್ಲಿ ೫೫ ಟನ್ ಮಾರಾಟವಾಗಿದೆ. ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಆಪುಸ್ ಹೆಚ್ಚು ಮಾರಾಟ : ಮಾವು ಮಾರಾಟದಲ್ಲಿ ೭ ತಳಿಯ ಹಣ್ಣುಗಳನ್ನು ಮಾರಾಟಕ್ಕೆ ಲಭ್ಯವಿರುತ್ತಿವೆ. ಮಾರಾಟ ಮಳಿಗೆಗಳಲ್ಲಿ ಪ್ರತಿಯೊಂದು ಹಣ್ಣುಗಳು ಡಜನ್‌ಗೆ ರೋಮ್ಯಾನಿಯಾ (೨೫೦), ಸಣ್ಣನೇಲ್ಲಿ (೨೫೦), ಮಲ್ಲಿಕಾ (೧೫೦-೧೮೦), ಸಿಂದೂರ ಶ್ಯಾ(೨೫೦), ರಸಪುರಿ (೧೦೦-೧೩೦), ಕೇಸರಿ(೨೫೦) , ಆಪುಸ್ (೧೫೦-೨೨೦) ಗೋವಾ ಮಾಂಕೂರ, ತೋತಾಪುರಿ (೧೦೦) ರೂ ಮಾರಾಟಕ್ಕೆ ಲಭ್ಯವಿರುತ್ತವೆ. ವಿವಿಧ ಹಣ್ಣುಗಳ ಮಾರಾಟದಲ್ಲಿ ಆಪುಸ್ ಹೆಚ್ಚು ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಮಾವುಗಳ ಪ್ರದರ್ಶನ: ಮಾವು ಮೇಳದಲ್ಲಿ ರೈತರಿಗೆ ಅನುಕುಲವಾಗಲಿ ಮಾವಿನ ಹಲವು ತಳಿಗಳ ಬಗ್ಗೆ ಜಾಗೃತಿ ಮೂಡಲಿ ಎಂಬ ಉದ್ದೆÃಶದಿಂದ ತೋಟಗಾರಿಕಾ ಇಲಾಖೆಯಿಂದ ಬಾಳೆಮಾವು, ಗೂಂಗ್, ಸುಂದರ ಶಾ, ಅಮ್ರಪಾಲಿ, ಸಿಂದು, ಚಂದ್ರಮಾವು, ವನರಾಜ, ಮಾಯಾ, ಹೈಬ್ರೀಡ್, ಆಪೂಸ್, ಟೊಮ್ಮ ಅಟ್ಕಿನ್ಸ್, ಲಾಂಗ್ರಾ, ರಸಪುರಿ, ಬೆನೆಶಾನ್, ಕಾದರ ಚೆರುಕುರಸಮು, ಲಿಲ್ಲಿ, ಕೇಸರ,ಮಾಯಾ, ಲಾಂಗ್ರಾ, ರಮಾನಿ, ಸಣ್ಣೆಲಿ,ಮಲ್ಲಿಕಾ, ಇಸ್ರೇಲ್ ತಳಿ, ದಿಲ್‌ಪಸಂದ, ರತ್ನಾ, ನಿರಂಜನ್, ಸುವರ್ಣ ರೆಖಾ, ಪಾಲ್ಮೇರ್, ಗೋವಾ ಮಂಕೂರ, ತೊತಾಪುರಿ, ಮಲ್ಲಿಕಾ, ನಿಲಗೋವಾ, ವೆಲೈಕೊಲಂಬನ್, ಚೆರುಕುರಸಮು, ಕಲಮಿ, ನಿಲಶಾನ್, ಪೈರಿ , ಗುಟ್ಲಿ, ಸನ್ನೇಲಿ, ಮಲಗೊಬಾ, ಆಪೂಸ್, ನಿಲಂ, ನಿಲುದ್ದಿನ್, ಪೈರಿ, ದಶೆರಿ, ಬೆನೆಶಾನ್ ತಳಿಯ ಮಾವುಗಳನ್ನು ರೈತರಿಗೆ ಪ್ರದರ್ಶನಕ್ಕೆ ಇಡಲಾಗಿದೆ.

ಸಹಾಯ ವಾಣಿ ಕೇಂದ್ರ ಪ್ರಾರಂಭ: ಮಾವು ಮೇಳ ಮಾರಾಟಕ್ಕೆ ಆಗಮಿಸಿದ ರೈತರಿಗೆ ಹಾಗೂ ಹೊರಗಿನಿಂದ ಬಂದ ರೈತರಿಗೆ ಮಾವುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಯಾವ ಹಣ್ಣುಗಳು ಹೆಚ್ಚು ಬೇಡಿಕೆ ಇದೆ. ಹೊಸ ತಳಿಗಳ ಬಗ್ಗೆ, ಸರಕಾರದ ಯೋಜನೆಗಳು, ಯಂತ್ರೊÃಪಕರಣಗಳ ಹಾಗೂ ಸರಕಾರದಿಂದ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರವನ್ನು ತೆರಯಲಾಗಿದೆ. ಇದರ ಜೊತೆಯಲ್ಲಿ ಮಾವಿನ ಸಸಿಗಳ ಮಾರಾಟವನ್ನು ಸಹ ಕೈಗೊಳ್ಳಲಾಗಿದೆ.
ಒಟ್ಟಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮಾವು ಮಾರಾಟಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇನ್ನೂ ನಾಲ್ಕು ದಿನಗಳಲ್ಲಿ ಎಷ್ಟೊÃ ಮಾವು ಮಾರಾಟವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
===========ಬಾಕ್ಸ್============
ಮೂರು ವರ್ಷದಿಂದ ಮಾವು ಮೇಳ ಪ್ರಾರಂಭಿಸಲಾಗಿದೆ. ಮೊದಲ ವರ್ಷ ೬೪ ಟನ್ ,ಎರಡನೇ ವರ್ಷ ೧೧೪ ಟನ್ , ಈ ಬಾರಿ ಆರು ದಿನದಲ್ಲಿ ೫೫ ಟನ್ ಮರಾಟವಾಗಿದೆ. ಇನ್ನೂ ನಾಲ್ಕು ದಿನಗಳ ಬಾಕಿ ಇದೆ. ಹೆಚ್ಚು ಆಪುಸ್ ಮಾವು ಮಾರಾಟವಾಗುತ್ತಿದೆ.
ರವಿಕುಮಾರ ಉಪಳೇ
ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ ಬೆಳಗಾವಿ

loading...