ಎಂ.ಎಂ. ಹೆಬ್ಬಳ್ಳಿಯವರಗೆ ಬಿಳ್ಕೊಡುಗೆ

0
22

ಯಲ್ಲಾಪುರ: ಹೆಬ್ಬಳ್ಳಿಯವರು ವೃತ್ತಿಯಿಂದ ಗ್ರಂಥಪಾಲಕರಾಗಿದ್ದರೂ ಪ್ರವೃತ್ತಿಯಿಂದ ಸಮಾಜಮುಖಿಯಾಗಿ ಬದುಕಿನ ವಿಚಾರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ತಮ್ಮ ಕ್ರಿಯಾಶೀಲತೆಯಿಂದ ಯಾವದೇ ಖಾಸಗಿ ಕಾಲೇಜಿಗಿಂತ ಕಡಿಮೆ ಇಲ್ಲದಂತೆ ಸರಕಾರಿ ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೆಳೆಯುವಂತ ವಾತಾವರಣ ನಿರ್ಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಎಂದು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಎಮ್‌ ಆರ್‌ ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯ್ಕೆ ಶ್ರೇಣಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದ ಎಂ.ಎಂಹೆಬ್ಬಳ್ಳಿಯವರ ಬಿಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.ಸರ್ಕಾರಿ ಕಾಲೇಜಿನ ಸಮಗ್ರ ಅಭಿವೃದ್ದಿಯಲ್ಲಿ ಅವರ ಕೊಡುಗೆ ಅಪಾರ ಹೀಗೆಯೇ ಮುಂದೆಯೂ ಯಲ್ಲಾಪುರದ ಅಭಿವೃದ್ದಿಗೆ ನಿಮ್ಮ ನೆರವು ದೊರೆಯಲಿ ಎಂದರು. ರಂಗಸಹ್ಯಾದ್ರಿ ಅಧ್ಯಕ್ಷ ಹಾಗೂ ಸಿಡಿಸಿ ನಿರ್ದೇಶಕ ಡಿ.ಎನ್‌ ಗಾಂವ್ಕರ್‌ ಮಾತನಾಡಿ ಕಾಲೇಜಿನ ವಿದ್ಯಾಥಿಗಳ ಬಗ್ಗೆ ಕಳಕಳಿ ಹೊಂದಿದ್ದ ಹೆಬ್ಬಳ್ಳಿಯವರು ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಿ ಪರಿಹಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರು. ಕಾಲೇಜಿನ ನ್ಯಾಕ ಮಾನ್ಯತೆ ಪಡೆಯುವಲ್ಲಿ ಅವರ ಶ್ರಮ ಅನನ್ಯವಾದದ್ದಾಗಿದೆ.ಇದೀಗ ಕಾಲೇಜಿನ ವಿದ್ಯಾರ್ಥಿಗಳಿಗೆ ರಕ್ಷಣಾತ್ಮಕ ವಿದ್ಯೆ ಕಲಿಸುವಂತಾಗಬೇಕು ಇಲ್ಲಿಯೇ ಈಜುಕೊಳ ನಿರ್ಮಿಸಿ ತರಭೇತಿ ನೀಡುವಂತಾದರೆ ಅನೇಕರ ಜೀವರಕ್ಷಣೆಗೆ ಸಹಕಾರಿಯಾಗುತ್ತದೆಎಂದು ಸಲಹೆನ್ನಿತ್ತರು.
ಸನ್ಮಾನ ಸ್ವೀಕರಿಸಿ ಎಂಎಂ ಹೆಬ್ಬಳ್ಳಿ ಮಾತನಾಡಿ ಜೀವನದಲ್ಲಿ ಸೋಲದಿದ್ದರೂ ಗೆಲುವಿಗೆ ಶ್ರಮಿಸಿದ್ದೇನೆ. ಸಮಸ್ಯೆಗಳು ಬಂದಾಗ ಅದನ್ನು ಪರಿಹರಿಸಿಕೊಳ್ಳುವ ಮಾರ್ಗದ ಅರಿವಿದ್ದಾಗ ಮಾತ್ರ ಮುಂದಿನ ಸಮಸ್ಯೆ ಎದುರಿಸಲು ಸಾಧ್ಯವಾಗುತ್ತದೆ.ಕೈತುಂಬ ಸರಕಾರದ ಸಂಬಳ ಪಡೆದು ಅದಕ್ಕೆ ತಕ್ಕಂತೆ ಕರ್ತವ್ಯದೊಂದಿಗೆ ಹೆಚ್ಚಿನ ಸೇವೆಯೂ ಸಲ್ಲಿಸಿದರೆ ಬದುಕು ಸಾರ್ಥಕವಾಗುತ್ತದೆ. ನಾನು ವಿದ್ಯಾರ್ಥಿ, ಉಪನ್ಯಾಸಕರು ಸೇರಿದಂತೆ ಅನೇಕರೊಂದಿಗೆ ವೈಚಾರಿಕ ಹಿನ್ನಲೆಯಲ್ಲಿ ಭಿನ್ನಾಭಿಪ್ರಾಯವಿರಬಹುದೇ ಹೊರತು ವೈರಿಗಳನ್ನು ಗಳಿಸಿಲ್ಲ ಎಂಬ ಹೆಮ್ಮೆ ನನಗಿದೆ.ನನಗೆ ಕರ್ಮಮತ್ತುಮಾತೃಭೂಮಿ ಕಾಲೇಜು ಆಗಿದೆ.ಅಷ್ಟೇ ಗೌರವವನ್ನು ನಾನು ಕಾಲೇಜಿನಿಂದ ಪಡೆದಿದ್ದೇನೆ ಎಂದರು.
ಪತ್ರಕರ್ತಹಾಗೂ ಕಾಲೇಜಿನ ಮಾಜಿವಿದ್ಯಾರ್ಥಿ ಜಗದೀಶ ನಾಯಕ ಮಾತನಾಡಿ ಹೆಬ್ಬಳ್ಳಿಯವರು 25ವರ್ಷ ಹಿಂದಿನಿಂದ ಈಗಿನವರೆಗೂ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ಉದ್ಯೋಗದಲ್ಲಿ ಮಾರ್ಗದರ್ಶಕರಾಗಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲಕು ಹಾಕಿದರು.
ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ ಎಂಎಂ ಹೆಬ್ಬಳ್ಳಿಯವರು ಕಾಲೇಜಿನ ಶಿಸ್ತಿನಲ್ಲಿ ಯಾವದೇ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಅವರ ಶಿಸ್ತಿನಕ್ರಮದಿಂದ ಗ್ರಾಮೀಣ ಭಾಗದ ಹಾಗೂ ಅನೇಕ ಪಾಲಕರು ತಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸಿ ನಿಶ್ಚಿಂತೆಯಿಂದಿರುವಂತೆ ಮಾಡಿದ್ದರು. ಪ್ರಾಂಶುಪಾಲೆ ಡಾ.ದಾಕ್ಷಾಯಣಿ ಹೆಗಡೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಪತ್ರಕರ್ತರಾದಶಂಕರ ಭಟ್‌ ತಾರೀಮಕ್ಕಿ, ಜಿ.ಎನ್‌ ಭಟ್ಟ, ಮೊದಲ ಬ್ಯಾಚ್‌ ವಿದ್ಯಾರ್ಥಿ ಪದ್ಮನಾಭ ಶಾನಭಾಗ, ಕಲಘಟಗಿ ಕಾಲೇಜು ಗ್ರಂಥಪಾಲಕಿ ಭಾರತಿ ದಂಡಿನ, ಉಪನ್ಯಾಸಕ ಸುಬ್ರಮಣ್ಯ, ವ್ಯವಸ್ಥಾಪಕ ನಾರಾಯಣ ಮೆಣಸುಮನೆ, ಮಾತನಾಡಿದರು. ಸಿಎಸ್‌ ಡಿ ಸದಸ್ಯ ಉಲ್ಲಾಸ ಶಾನಭಾಗ ಉಪಸ್ಥಿತರಿದ್ದರು. ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯೋದ್ಯಾಪಕಿ ಮುಕ್ತಾಶಂಕರ ಸ್ವರಚಿತಕವನ ವಾಚಿಸಿ ,ಪ್ರಾರ್ಥಿಸಿದರು. ಗ್ರಂಥಾಲಯ ಸಹಾಯಕ ಅದಿತ್ಯ ಹೆಗಡೆ ನಿರ್ವಹಿಸಿದರು. ಉಪನ್ಯಾಸಕ ಡಿ.ಎಸ್ಭಟ್‌ ಸ್ವಾಗತಿಸಿದರು. ಎನ್‌,ಎಸ್‌,ಎಸ್‌ ಸಂಚಾಲಕ ರಾಮಕೃಷ್ಣ ಗೌಡ ವಂದಿಸಿದರು.

loading...