ಮಣ್ಣಿನ ಗೋಡೆಯ ಶಾಲೆ – ಅಪಾಯದಲ್ಲಿ ವಿದ್ಯಾರ್ಥಿಗಳು

0
87

ಸಂದೇಶ ದೇಸಾಯಿ
ಜೋಯಿಡಾ: ಜೋಯಿಡಾ ತಾಲೂಕು ಸದ್ಯ ಶಿಕ್ಷಣದಲ್ಲಿ ಮುಂದಿದ್ದರು ಇಲ್ಲಿಯ ವ್ಯವಸ್ಥೆ ಮಾತ್ರ ಹಾಗೆ ಇದೆ.ಇದಕ್ಕೆ ಉದಾಹರಣೆ ಎಂದರೆ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ.
ಈ ಶಾಲೆ ನಿರ್ಮಿಸಿ 50 ವರ್ಷಗಳೇ ಕಳೆದು ಹೋಗಿದೆ. ಶಾಲೆ ಈಗ ಬೀಳುವ ಹಂತದಲ್ಲಿದ್ದರು ಅಧಿಕಾರಿಗಳು ಮಾತ್ರ ಇತ್ತ ತಲೆ ಹಾಕಿದಂತೆ ಕಾಣುತ್ತಿಲ್ಲ. ದಿನವೂ ಶಾಲೆಯ ಗೋಡೆಗಳಿಂದ ಮಣ್ಣು ಕೆಳ ಬೀಳುತ್ತಿದ್ದು ಇದು ಇಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಹೆದರಿಕೆ ಉಂಟು ಮಾಡಿದೆ.
ಕ್ರಮ ಕೈಗೊಳ್ಳುತ್ತಿಲ್ಲ ಜಿಲ್ಲಾಡಳಿತ –
ಜಿಲ್ಲೆಯಲ್ಲಿ ಮಣ್ಣಿನ ಗೋಡೆಯ ಶಾಲೆಗಳಿದ್ದರೆ ಅದನ್ನು ಕೆಡವಿ ಹೊಸ ಶಾಲೆ ನಿರ್ಮಿಸಬೇಕು ಎನ್ನುವ ಸರಕಾರದ ಆದೇಶವಿದ್ದರು ಸಹಿತ , ಜೋಯಿಡಾ ತಾಲೂಕಿನ ಯರಮುಖ ಶಾಲೆಗೆ 30 ವರ್ಷಗಳೇ ಕಳೆದು ಇಂದೋ ನಾಳೆ ಬೀಳುವ ಹಂತದಲ್ಲಿದ್ದರು ಸಹಿತ ಜಿಲ್ಲಾಡಳಿತ ಮತ್ತು ತಾಲೂಕಾ ಆಡಳಿತ ತಲೆ ಕೆಡಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ. ಶಾಲೆ ಮುರಿದು ಬಿದ್ದು ಅನಾಹುತವಾದರೆ ಯಾರು ಹೊಣೆ ? ಎಂಬ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ತಾಲೂಕಾ ಆಡಳಿತ ಉತ್ತರಿಸಬೇಕಿದೆ.
ಜಾಗದ ಮಾಲಿಕರಿಗೆ ನೀಡಿಲ್ಲ ಹಣ- ಯರಮುಖ ಶಾಲೆಯಲ್ಲಿ ಮೂರು ಕೊಠಡಿಗಳಿದ್ದು 8 ವರ್ಷಗಳ ಹಿಂದೆ ಒಂದು ಕೊಠಡಿ ಹೊಸತಾಗಿ ನಿರ್ಮಾಣ ಮಾಡಿದ್ದು ಇನ್ನುಳಿದ ಎರಡು ಕೊಠಡಿಗಳು ಹಾಗೆ ಉಳಿದಿದ್ದು ಸದ್ಯ ಜೋರಾಗಿ ಗಾಳಿ ಮಳೆ ಬಂದರೆ ಬೀಳುವ ಹಂತದಲ್ಲಿದೆ. ಹಿಂದೆ ಶಾಲೆಯ ಹೊಸ ಕೊಠಡಿ ಕಟ್ಟುವಾಗ 1 ಲಕ್ಷ ಹಣ ಜಾಗದ ಮಾಲಿಕರಾದ ನಾರಾಯಣ ದಬ್ಗಾರ ಮತ್ತು ಇಂದುಮತಿ ದೇಸಾಯಿ ಕೊಡುವುದಾಗಿ ಹೇಳಿ ಕೆಲವ 30 ಸಾವಿರ ಹಣ ನೀಡಿ ಉಳಿದ ಹಣ ನೀಡದೆ ಯಾಮಾರಿಸಿದ್ದರು.ಆದ ಕಾರಣದಿಂದ ಈಗ ಶಾಲಾ ಕಟ್ಟಡ ಕಟ್ಟುವುದಾದರೆ ಜಾಗದ ಮಾಲಿಕರಿಗೆ ಹಣ ನೀಡದೆ ಹೋದರೆ ಜಾಗದ ಮಾಲಿಕರು ಶಾಲೆ ಕಟ್ಟಲು ಬೀಡುತ್ತಿಲ್ಲ ಎನ್ನುತ್ತಿದ್ದಾರೆ. 50 ವರ್ಷ ಗಳಿಂದಲೂ ಬಿಡಿಗಾಸು ಕೇಳದೆ ಶಾಲೆ ನಡೆಸಲು ಬಿಟ್ಟಿದ್ದೇವೆ .ಈಗ ಹಣ ಪಾವತಿಸಲಿ ಇಲ್ಲವಾದರೆ ನಮ್ಮ ಜಾಗ ನಮಗೆ ಬಿಟ್ಟುಕೊಡಲಿ ಎನ್ನುತ್ತಾರೆ ಜಾಗಾದ ಮಾಲಿಕರು.
ಸಚಿವರೇ ಇತ್ತ ಗಮನಿಸಿ -ಜೋಯಿಡಾ ತಾಲೂಕಿನ ಅಭಿವೃದ್ಧಿಗೆ ಸಚಿವರಾದ ಆರ್‌.ವಿ.ದೇಶಪಾಂಡೆ ಅವರು ಶ್ರಮ ವಹಿಸಿದ್ದಾರೆ .ಹತ್ತಾರು ಹೊಸ ಶಾಲೆಗಳು ಆಗುವಂತೆ ಮಾಡಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲಿಯೇ ಈ ರೀತಿಯಾಗಿ ಮಣ್ಣಿನಗೋಡೆ ಶಾಲೆ ಇದ್ದು ಅದು ಬೀಳುವ ಹಂತದಲ್ಲಿ ಇದ್ದರು ಈ ಬಗ್ಗೆ ಸಚಿವರು ಗಮನಿಸಿಲ್ಲ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಇದು ಸಚಿವರ ಗಮನಕ್ಕೆ ಬಂದಿದ್ದರೆ ಶಾಲೆಆಗುತ್ತೇನೋ ಎನ್ನುವುದು ಕೆಲ ಜನರ ಮಾತು. ಇಲ್ಲಿನ ಶಿಕ್ಷಣ ಇಲಾಕೆ ಈ ಬಗ್ಗೆ ಸರ್ಕಾರಕ್ಕೆ ಮತ್ತು ಸಚಿವರಿಗೆ ಮಾಹಿತಿಯೇ ನೀಡಿಲ್ಲ ಎಂದೆನಿಸುತ್ತದೆ. ಸಚಿವರು ಕೂಡಲೇ ತಮ್ಮ ಕ್ಷೇತ್ರದ ಈ ಮಣ್ಣಿನ ಶಾಲೆ ಬಗ್ಗೆ ಲಕ್ಷ ವಹಿಸಿ ಅನಾಹುತ ಆಗುವ ಮೊದಲೇ ಶಾಲೆಗೆ ಹೊಸ ಕಟ್ಟಡ ನಿರ್ಮಿಸಿ ಕೊಡಲಿ ಎನ್ನುವುದು ಶಿಕ್ಷಣ ಪ್ರೇಮಿಗಳ ಮಾತು.

loading...