ಆಟಗಾರರನ್ನು ಶ್ಲಾಘಿಸಿದ ಬಾಂಗ್ಲಾ ನಾಯಕ ಮೊರ್ತಾಜಾ

0
9

ಲಂಡನ್‌:- ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಐಸಿಸಿ ವಿಶ್ವಕಪ್‌ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಜಯ ಸಾಧಿಸಿದ ಬಾಂಗ್ಲಾದೇಶ ತಂಡದ ಆಟಗಾರರನ್ನು ನಾಯಕ ಮಶ್ರಾಫೆ ಮೊರ್ತಜಾ ಶ್ಲಾಘಿಸಿದ್ದಾರೆ.

ಐರ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧದ ತ್ರಿಕೋನ ಸರಣಿ ಗೆಲುವು ಸಾಧಿಸಿದ್ದ ಆತ್ಮವಿಶ್ವಾಸ ನಮಗೆ ವಿಶ್ವಕಪ್‌ ಟೂರ್ನಿ ನೆರವಾಗಿದೆ. ಆದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಗೆಲ್ಲಲು ಕಾರಣ ಎಂದು ಪಂದ್ಯದ ಬಳಿಕ ಅವರು ಹೇಳಿದರು.
ಶಕೀಬ್‌ ಅಲ್ ಹಸನ್‌ (75 ರನ್‌ ) ಹಾಗೂ ಮುಷ್ತಿಪಿಕ್ಯೂರ್‌ ರಹೀಮ್‌ (78 ರನ್‌) ಅವರ ಅಮೋಘ ಜತೆಯಾಟ ಹಾಗೂ ಸೌಮ್ಯ ಸರ್ಕಾರ್‌(42) ಮತ್ತು ಮಹ್ಮುದುಲ್ಹಾ (46) ಅವರು ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಬಾಂಗ್ಲಾದೇಶ ಆರು ವಿಕೆಟ್‌ ಕಳೆದುಕೊಂಡು 330 ರನ್‌ ದಾಖಲಿಸಿತ್ತು. ಬಳಿಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವನ್ನು ಬಾಂಗ್ಲಾ ಬೌಲಿಂಗ್‌ ಪಡೆ 309/9 ಕ್ಕೆ ನಿಯಂತ್ರಿಸಿತು.
“ಟಾಸ್‌ ಬಳಿಕ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಆಯ್ಕೆ ಬಗ್ಗೆ ಗೊಂದಲ ಉಂಟಾಯಿತು. ಕಳೆದ ಪಂದ್ಯದ ಫಲಿತಾಂಶ ಗಮನಿಸಿದಾಗ ಮೊದಲು ಬ್ಯಾಟಿಂಗ್‌ ಮಾಡುವುದು ಒಳ್ಳೆಯದು ಅನಿಸಿತು. ಅದರಂತೆ ನಮ್ಮ ಬ್ಯಾಟಿಂಗ್‌ ವಿಭಾಗ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿತು. ಆರಂಭದಲ್ಲಿ ಸೌಮ್ಯ ಸರ್ಕಾರ್‌, ನಂತರ ರಹೀಮ್‌, ಶಕೀಬ್‌ ಇಟ್ಟಿದ್ದ ನಿರೀಕ್ಷೆಯನ್ನು ಉಳಿಸಿಕೊಂಡರು. ಪಿಚ್‌ ಬ್ಯಾಟಿಂಗ್‌ಗೆ ಸಹಕರಿಸುತ್ತದೆ ಎಮದು ಅರಿವಾಯಿತು. ಹಾಗಾಗಿ, ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಭಾಗದಲ್ಲಿ ಪಿಚ್‌ ಮಾಡಿ ವಿಕೆಟ್‌ ಪಡೆದೆವು” ಎಂದು ತಿಳಿಸಿದರು.

” ಪಂದ್ಯದಲ್ಲಿ ಬೌಲರ್‌ಗಳನ್ನು ಬದಲಾವಣೆ ಮಾಡಲಾಗುತ್ತಿತ್ತು. ಹಾಗಾಗಿ, ಪ್ರತಿ ಹಂತದಲ್ಲೂ ವಿಕೆಟ್‌ ಉರುಳುತಿತ್ತು. ಸ್ಪಿನ್ನರ್‌ಗಳು ಅತ್ಯುತ್ತಮ ನಿರ್ವಹಣೆ ತೋರಿದರು ಎಂದು ಮಶ್ರಾಫೆ ಹೇಳಿದರು.

loading...