ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿ

0
34

ನರೇಗಲ್ಲ : ರೋಣ ಮತಕ್ಷೆÃತ್ರದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಆದ್ಯತೆ ನೀಡಬೇಕು. ಯಾವುದೇ ಲಾಭಪೇಕ್ಷೆ ಇಲ್ಲದೆ ಗುಣಮಟ್ಟದ ಕಾಮಗಾರಿ ನಡೆಸಬೇಕು. ಕಡಿಮೆ ಪ್ರಮಾಣದ ಅನುದಾನದ ಕಾಮಗಾರಿಗಳನ್ನು ನಿರ್ಲಕ್ಷಿಸದೇ ಶೀಘ್ರಗತಿಯಲ್ಲಿ ಪೂರ್ಣಗೊಳಿಸಿದಬೇಕು. ಗುತ್ತಿಗೆದಾರರು ಸಾರ್ವಜನಿಕರ ವಿಶ್ವಾಸಗಳಿಸುವಂತಹ ಗುಣಮಟ್ಟ ಕಾಮಗಾರಿಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಜನರ ಹಿತಕ್ಕೆ ಧಕ್ಕೆಯಾಗುವಂತಹ ಕಾಮಗಾರಿ ಕೈಗೊಂಡರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದಿಂದ ಜಕ್ಕಲಿ-ಹೊಸಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ರವಿವಾರ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ೧.೫ ಲಕ್ಷ ರೂ.ಗಳ ಅನುದಾನದಲ್ಲಿ ೨.೧೦, ೪.೫೦೦ ಹಾಗೂ ೮.೮೦೦ರಲ್ಲಿ ಸೇತುವೆ ನಿರ್ಮಾಣ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ರೈತರ ಹಿತ ಕಾಪಾಡುತ್ತಿಲ್ಲ. ಕೇವಲ ಖುರ್ಚಿಗಾಗಿ ಅಧಿಕಾರ ನಡೆಸುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಮುಂಗಾರು ಕ್ಷಿÃಣಿಸಿದ್ದರಿಂದ ರೈತಾಪಿ ವರ್ಗ ಕಂಗಲಾಗಿದ್ದಾರೆ. ಅವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹೆಚ್ಚಿನ ರೀತಿಯಲ್ಲಿ ಒದಗಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಜಮೀನುಗಳಿಗೆ ಮಳೆಗಾಲದಲ್ಲಿ ರೈತರು ತಮ್ಮ ಜಮೀನುಗಳಿಗೆ ತೆರಳಬೇಕಾದ ಸಂದರ್ಭದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುವ ಪರಿಸ್ಥಿ ನಿರ್ಮಾಣವಾಗಿತು. ಆದರೆ, ಕೇಂದ್ರ ಸರ್ಕಾರದ ಅನುದಾನದಲ್ಲಿ ಸೇತುವೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರೈತರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ರಸ್ತೆ, ಸೇತುವೆ ಅಭಿವೃದ್ಧಿಗೆ ಅನುದಾನ ತರುವ ಕೆಲಸ ನನ್ನಿಂದ ನಡೆಯುತ್ತದೆ. ಆದರೆ, ಕಾಮಗಾರಿಯ ಗುಣಮಟ್ಟ ಪರೀಕ್ಷಿಸಲು ಗ್ರಾಮಸ್ಥರು ಮುಂದಾಗಬೇಕು. ಕಾಮಗಾರಿಯಲ್ಲಿ ಕಳಪೆಯಾದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದರು.

ರೋಣ ಮತಕ್ಷೆÃತ್ರವು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆ. ಕ್ಷೆÃತ್ರದ ಸಮಗ್ರ ಅಭಿವೃದ್ಧಿಯನ್ನು ಮಾಡಬೇಕು. ಎನ್ನುವ ದಿಸೆಯಲ್ಲಿ ಈಗಾಗಲೇ ಕಾರ್ಯ ಯೋಜನೆಯನ್ನು ರೂಪಿಸಿಕೊಳ್ಳಲಾಗಿದೆ. ಕ್ಷೆÃತ್ರದ ಜನರ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಸರ್ಕಾರದ ಲಭ್ಯ ಅನುದಾನವನ್ನು ಜೋಡಣೆ ಮಾಡಿಕೊಂಡು ಅಭಿವೃದ್ಧಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಕ್ಷೆÃತ್ರದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕೊಡಲು ಮೊದಲು ಆಧ್ಯತೆ ನೀಡಲಾಗುವುದು. ಕ್ಷೆÃತ್ರದ ಭಾಗದಲ್ಲಿನ ಹಲವು ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅನುದಾನದ ನೆರವಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಷೆÃತ್ರದ ಜನರ ಅನುಕೂಲಕ್ಕಾಗಿ ತರುವ ಪ್ರತಿಯೊಂದು ಯೋಜನೆಗಳನ್ನು ಇಲ್ಲಿನ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗ್ರಾ.ಪಂ ಅಧ್ಯಕ್ಷ ಕಳಕಪ್ಪ ಬಿಲ್ಲ ಮಾತನಾಡಿ, ಗ್ರಾಮದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಈಡೇರುತ್ತಿದ್ದು, ಗ್ರಾಮಕ್ಕೆ ಈ ಸೇತುವೆ ಅವಶ್ಯವಾಗಿತ್ತು. ಮಳೆ ಬಂದಾಗ ಅನೇಕ ಬಾರಿ ಗ್ರಾಮಸ್ಥರು ಹಳ್ಳ ತುಂಬಿ ಬಂದು ದಂಡೆ ಮೇಲೆ ಇರುವ ಸಂದರ್ಭವಿತ್ತು. ಈಗ ಈ ಸಮಸ್ಯೆ ಬಗೆಹರಿಯುತ್ತದೆ. ಅಬ್ಬಿಗೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಯಲ್ಲಿರುವ ಪ್ರತಿಯೊಂದು ಸೇತುವೆ ಕಾಮಗಾರಿ ಅವಶ್ಯವಾಗಿದೆ. ಗ್ರಾಮದಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಬ್ಬಿಗೇರಿಯನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಕನಸುವಾಗಿದೆ ಎಂದರು.

ತಾ.ಪಂ ಸದಸ್ಯೆ ಶಂಕುತಲಾ ನಿಡಗುಂದಿ, ಗ್ರಾ.ಪಂ ಉಪಾಧ್ಯಕ್ಷೆ ದೇವಕ್ಕ ಮಾರೆಪ್ಪನವರ, ಗ್ರಾ.ಪಂ ಸದಸ್ಯ ಸುರೇಶ ನಾಯ್ಕರ, ಸುರೇಶ ಶಿದ್ನೆÃಕೊಪ್ಪ, ಶರಣಪ್ಪ ಗುಜಮಾಗಡಿ, ಲಕ್ಷö್ಮಣ ಐಹೊಳ್ಳಿ, ಮುತ್ತಕ್ಕ ನಿಡಗುಂದಿ, ಯಲ್ಲಪ್ಪ ಹಿರೇಮನಿ, ಮಹಾದೇವಪ್ಪ ಕಂಬಳಿ, ಶಾರದಾ ಹಡಪದ, ದ್ರಾಕ್ಷಾಣಿವ್ವ ಗುಗ್ಗರಿ, ಸಕ್ರಮ್ಮ ನೀರಲೋಟಿ, ಲೀಲಾವತಿ ಹುಲ್ಲೂರ, ಹನಮವ್ವ ಜಂತ್ಲಿ, ಬಸವರಾಜ ಪಲ್ಲೆÃದ, ಬಾಬುಗೌಡ ಪಾಟೀಲ, ರವಿ ಯತ್ನಟ್ಟಿ, ಅಪ್ಪಣ್ಣ ಪಾಟೀಲ, ಭರಮಪ್ಪ ಹನಮನಾಳ, ಮೇಲಗಿರಗೌಡ ಚನ್ನಪ್ಪಗೌಡ್ರ, ವಂಕಣ್ಣ ಹಜಾರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

loading...