ಬೈಲಪಾರ ಶಾಲೆಯಲ್ಲಿ ಸ್ವಚ್ಚತೆಯಿಲ್ಲದ ಶೌಚಾಲಯ, ವಿದ್ಯಾರ್ಥಿಗಳಿಗೆ ತೊಂದರೆ

0
85

 

ಜೋಯಿಡಾ: ಜೋಯಿಡಾ ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೈಲಪಾರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತೆ ಇಲ್ಲದೇ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ.

ಶಾಲೆ ಪ್ರಾರಂಭವಾಗಿ ಐದಾರು ದಿನಗಳು ಕಳೆದರು ಇಲ್ಲಿ ಸ್ವಚ್ಚತೆ ಮಾತ್ರ ಇಲ್ಲವಾಗಿದೆ.
ಶೌಚಾಲಯ ಗಬ್ಬು ನಾರುತ್ತಿದೆ:- ಬೈಲಪಾರ ಶಾಲೆಯ ಶೌಚಾಲಯವನ್ನು ನೋಡಿದರೆ ಶೌಚಾಲಯವನ್ನು ಬಳಸದೆ ಎಷ್ಟು ವರ್ಷಗಳು ಆದಂತೆ ಕಾಣುತ್ತದೆ. ಶೌಚಾಲಯ ಕೆಟ್ಟ ವಾಸನೆ ಬರುತ್ತಿದ್ದು, ಮಕ್ಕಳು ಸಂದಿ ಗುಂದಿಯಲ್ಲಿ ಶೌಚ ಮಾಡಿತ್ತಿದ್ದಾರೆ. ಶಾಲೆ ಪ್ರಾರಂಭದಲ್ಲಿಯೇ ಈ ರೀತಿಯಾದರೆ ಮುಂದೆ ಹೇಗೆ ಎನ್ನುವುದು ಜನರ ಮತ್ತು ಪಾಲಕರ ಪ್ರಶ್ನೆಯಾಗಿದೆ. ಗಂಡು ಮಕ್ಕಳು ಹೇಗೂ ಶೌಚ ಮಾಡುತ್ತಾರೆ ,ಆದರೆ ಹೆಣ್ಣು ಮಕ್ಕಳ ಪರಿಸ್ಥಿತಿ ಏನು ? ಎನ್ನುವುದು ಜನರ ಪ್ರಶ್ನೆಯಾಗಿದೆ.

ಬಿರುಕು ಬಿಟ್ಟಿದೆ ಶೌಚಾಲಯ:- ಬೈಲಪಾರ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಬಿರುಕು ಬಿಟ್ಟಿದ್ದು ಇದರಿಂದ ಮಳೆಗಾಲದಲ್ಲಿ ಮಕ್ಕಳಿಗೆ ತೊಂದರೆ ಅನುಭವಿಸುವಂತಾಗಿದೆ. ಈ ಶಾಲೆಗೆ ಹೊಸ ಶೌಚಾಲಯದ ಅಗತ್ಯವಿದ್ದು , ಇದನ್ನು ಗಮನಿಸಿಯು ಕೂಡಾ ಯಾವುದೇ ಕ್ರಮವನ್ನು ಶಾಲಾ ಮುಖ್ಯ ಶಿಕ್ಷಕರು ಕೈಗೊಳ್ಳುತ್ತಿಲ್ಲ ಎನ್ನುವುದು ಪಾಲಕರ ವಾದ.

loading...