ಗಿಡ-ಮರ ಬೆಳೆಸಿ ಪರಿಸರ ಉಳಿಸಿ: ಶಾಸಕ ಹಿಟ್ನಾಳ

0
207

 

ಕೊಪ್ಪಳ: ಪ್ರತಿಯೋಬ್ಬರು ಗಿಡಮರಗಳನ್ನು ಬೆಳೆಸುವುದರ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಬರ ನೀವಾರಿಸಲು ಶ್ರಮಿಸಿ ಎಂದು ಶಾಸಕ ಹಾಗೂ ಸಂಸದಿಯ ಕಾರ್ಯದರ್ಶಿ ಕೆ. ರಾಘವೆಂದ್ರ ಹಿಟ್ನಾಳ ಹೇಳಿದರು. ಅವರು ವಿಶ್ವ ಪರಿಸರ ದಿನ ಹಾಗೂ ವನಮೋಹತ್ಸವ ಕಾರ್ಯಕ್ರಮ ಅಂಗವಾಗಿ ಅರಣ್ಯ ಇಲಾಖೆಯಿಂದ ೨ನೇ ಸುತ್ತಿನ ಸಸಿ ನೆಡುವ ಕಾರ್ಯಕ್ರಮವನ್ನು ಜಿಲ್ಲಾಡಳಿತ ಭವನದ ಮುಂದೆ ಮುಖ್ಯ ರಸ್ತೆಯ ಹತ್ತಿರ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ದಿನಮಾನಗಳಲ್ಲಿ ಪರಿಸರ ಹಾಳಾಗುತ್ತಾ ಸಾಗಿದೆ. ಗೀಡ ಮರಗಳು ಮಾತ್ರ ವಿವಿಧ ರೀತಿಯ ಹೆಸರಿನಲ್ಲಿ ದರೆಗೆ ಉರುಳುತ್ತವೆ. ಇದರಿಂದ ಪರಿಸರ ಹಾಳಾಗುವುದರ ಜೋತೆಗೆ ಮಲೆಯ ಪ್ರಮಾನ ಕಡಿಮೆಯಾಗುತ್ತಾ ಸಾಗಿದೆ. ಇದರಿಂದ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಬರಗಾಲ ಆವರಿಸುತ್ತಾ ಸಾಗಿದೆ. ಆದ್ದರಿಂದ ಬರಗಾಲ ನಿವಾರಿಸಲು ಪ್ರತಿಯೋಬ್ಬರು ಗಿಡ ಮರಗಳನ್ನು ನೆಡಲು ಮುಂದಾಗಬೇಕು. ಇದಕ್ಕೆ ಅರನ್ಯ ಇಲಾಖೆ ಕೂಡ ಬದ್ದವಾಗಿದೆ. ಇದರ ಸಹಾಯ ಪಡೆದು ಗೀಡ ಮರಗಳನ್ನು ಬೆಳೆಸಲು ಮುಂದಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಂಜೀವ್ ವಿ. ಕುಲಕರ್ಣಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಮತ್ತು ಕೊಪ್ಪಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶ್‌ಪಾಲ ಕ್ಷಿÃರಸಾಗರ ಅವರು ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.

loading...