ವಿಶ್ವ ಪರಿಸರ ದಿನಾಚರಣೆಯ

0
34

 

ಹಳಿಯಾಳ: ಜಯಕರ್ನಾಟಕ ಸಂಘಟನೆಯವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಬ್‌ಜೈಲ್ ಆವರಣದಲ್ಲಿ ಸಾಂಕೇತಿಕವಾಗಿ ವೃಕ್ಷಾರೋಪಣ ಮಾಡಿದರು.
ನೇರಳೆ, ಪೇರಲ, ಬದಾಮ, ನೆಲ್ಲಿಕಾಯಿ, ಹಲಸು ಮೊದಲಾದ ಹಣ್ಣಿನ ಗಿಡಗಳನ್ನು ನೆಡಲಾಯಿತು. ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸಿದರೆ ನೆರಳು ಮಾತ್ರವಲ್ಲದೇ ಮನುಷ್ಯ ಹಾಗೂ ಪಶು-ಪಕ್ಷಿಗಳಿಗೆ ರುಚಿಕರವಾದ ಹಣ್ಣುಗಳನ್ನು ನೀಡುತ್ತವೆ. ಹೀಗಾಗಿ ಪರಿಸರ ಸಂರಕ್ಷಣೆಗಾಗಿ ಮರಗಳನ್ನು ನೆಟ್ಟು ಪೋಷಿಸೋಣ ಎಂದು ಪ್ರತಿಜ್ಞೆ ಮಾಡಲಾಯಿತು.

ತಹಶೀಲ್ದಾರ ವಿದ್ಯಾಧರ ಗುಳಗುಳಿ, ಪಿಡಬ್ಲೂಡಿ ಸಹಾಯಕ ಇಂಜಿನೀಯರ್ ಸುದರ್ಶನ ಹೊನ್ನಾವರ, ಜಯಕರ್ನಾಟಕ ಸಂಘಟನೆಯ ಘಟ್ಟದ ಮೇಲಿನ ತಾಲೂಕುಗಳ ಅಧ್ಯಕ್ಷ ವಿಲಾಸ ಕಣಗಲಿ ಹಾಗೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

loading...