ಗಿಡ ಬೆಳೆಸುವುದರಿಂದ ಭೂಮಿ ತಾಯಿಯ ರಕ್ಷಣೆ ಸಾಧ್ಯ: ನಾಯಕ

0
42

 

ಕಾರವಾರ: ಇತ್ತಿÃಚಿನ ದಿನಗಳಲ್ಲಿ ಉಂಟಾಗಿರುವ ನೀರಿನ ಅಭಾವಕ್ಕೆ ಪರಿಸರದ ನಾಶವೇ ಕಾರಣವಾಗಿದೆ. ನೀರಿನ ಕೊರತೆ ನೀಗಿಸಲು, ಪರಿಸರದ ಸೌಂದರ್ಯ ಹೆಚ್ಚಿಸಲು, ಸೂರ್ಯನಿಂದ ರಕ್ಷಣೆ ಪಡೆಯಲು ಹಾಗೂ ವಾಯು ಮಾಲಿನ್ಯ ತಡೆಯಲು ವನಮಹೋತ್ಸವ ಒಂದೇ ದಾರಿ ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಚ್.ನಾಯ್ಕ ಹೇಳಿದರು.
ಅವರು ಆಝಾದ್ ಯುಥ್ ಕ್ಲಬ್ ಕಾರವಾರ, ಪ್ರೆÃಮಾಶ್ರಮ ಚಾರಿಟೇಬಲ್ ಟ್ರಸ್ಟ್ ಆಮದಳ್ಳಿ ಮತ್ತು ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಕಾರವಾರದವರು ಸಂಯುಕ್ತವಾಗಿ ‘ವಿಶ್ವ ಪರಿಸರ ದಿನಾಚರಣೆ’ಯ ನಿಮಿತ್ತ ದಿವೇಕರ ವಾಣಿಜ್ಯ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡ ವನಮಹೋತ್ಸವ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ನಗರ ಪ್ರದೇಶಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವ ಜವಾಬ್ದಾರಿ ನಮ್ಮದಾಗಬೇಕು. ವಿದ್ಯಾರ್ಥಿಗಳು ಸಹ ಗಿಡ ಬೆಳೆಸುವಲ್ಲಿ ಆಸಕ್ತಿ ವಹಿಸಬೇಕು. ಗಿಡಗಳನ್ನು ಹೆಚ್ಚು ಹೆಚ್ಚು ಬೆಳೆಸುವುದರಿಂದ ಮಾತ್ರ ನಾವು ಭೂಮಿ ತಾಯಿಯನ್ನು ರಕ್ಷಿಸಲು ಸಾಧ್ಯ ಎಂದು ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಎಮ್.ನಾಯ್ಕ ಮಾತನಾಡಿ ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕಾಗಿದೆ. ಗಿಡಗಳನ್ನು ನೆಟ್ಟು ಪೋಷಿಸುವ ಅಗತ್ಯತೆ ಹೆಚ್ಚು ಇರುತ್ತದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ತಮ್ಮ ಸ್ವಯಂ ಪ್ರೆÃರಣೆಯಿಂದ ಗಿಡಗಳನ್ನು ನೆಟ್ಟು ಪರಿಸರದ ಉಳಿವಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ನಜೀರ್ ಅಹಮದ್ ಯು.ಶೇಖ್ ಮಾತನಾಡಿ ಅಭಿವೃದ್ದಿಯ ಕಾರಣದಿಂದ ಹೆಚ್ಚು ಹೆಚ್ಚು ಮರಗಳು ನಾಶವಾಗಿರುವುದು ವಿಷಾದದ ಸಂಗತಿಯಾಗಿದೆ. ನಶಿಸಿಹೋಗಿರುವ ಮರಗಳನ್ನು ಪುನಃ ನೆಡುವುದರ ಮೂಲಕ ನಾವು ಪರಿಸರವನ್ನು ರಕ್ಷಿಸಬೇಕಾಗಿದೆ ಎಂದರು. ಅತಿಥಿಗಳಾಗಿ ಯುಥ್ ರೆಡ್ ಕ್ರಾಸ್‌ನ ಪ್ರೊÃಗ್ರಾಂ ಆಫೀಸರ್ ಸುರೇಶ ಗುಡಿಮನೆ ಉಪಸ್ಥಿತರಿದ್ದರು.

loading...