ಹಿಂದು ರುದ್ರಭೂಮಿ ಅಭಿವೃದ್ಧಿ ಮಾಡಲು ಅನುಮತಿ ನೀಡುವಂತೆ ಮನವಿ

0
27

 

ದಾಂಡೇಲಿ: ನಗರದ ಕುಳಗಿ ರಸ್ತೆಯಲ್ಲಿ ಕಳೆದ ೬೦ ವರ್ಷಗಳಿಂದ ಉಪಯೋಗಿಸುತ್ತಾ ಬರುತ್ತಿರುವ ಹಿಂದು ರುದ್ರಭೂಮಿಯು ಸರಿಯಾದ ಮೂಲಸೌರ‍್ಯಗಳಿಲ್ಲದೆ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಸ್ಥಳೀಯ ಕೋಗಿಲೆಬನ ಹಾಗೂ ದಾಂಡೇಲಿ ಸುತ್ತಮುತ್ತಲ ಹಿಂದು ಬಾಂಧವರು ಶವ ಸಂಸ್ಕಾರಕ್ಕಾಗಿ ಈ ರುದ್ರಭೂಮಿಯನ್ನು ಬಳಕೆ ಮಾಡುತ್ತಿದ್ದು, ಪ್ರಸಕ್ತ ಕೆಲ ದಿನಗಳಿಂದ ಅಲ್ಲಿ ಹಾಕಲಾಗಿದ್ದ ಶೆಡ್ಡಿನ ಮೇಲ್ಚಾವಣಿ ಹಾಗೂ ವಿವಿಧ ಪರಿಕರಗಳನ್ನು ಕೆಲ ಕಿಡಿಗೇಡಿಗಳು ಹಾನಿ ಮಾಡಿರುತ್ತಾರೆ ಮತ್ತು ಶೆಡ್ಡಿನ ಸಾಕಷ್ಟು ವಸ್ತುಗಳು ಕಳ್ಳತನವಾಗಿರುತ್ತದೆ. ಸಧ್ಯಕ್ಕೆ ಶವ ಸಂಸ್ಕಾರ ಮಾಡಲು ತೀವ್ರ ತೊಂದರೆಯಾಗುತ್ತಿದೆ.
ಮಳೆಗಾಲ ಸಮೀಪಿಸುತ್ತಿರುವುದರಿಂದ ಸರಿಯಾದ ಶೆಡ್ ಇಲ್ಲದೆ ಶವ ಸಂಸ್ಕಾರ ಮಾಡಲು ಕಷ್ಟ ಸಾಧ್ಯವಿದೆ. ಈ ನಿಟ್ಟಿನಲ್ಲಿ ಈ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಲು ಗೆಳೆಯರ ಬಳಗ ಮುಂದೆ ಬಂದಿದ್ದು, ಇದಕ್ಕೆ ಅವಕಾಶ ನೀಡಬೇಕೆಂದು ವಿನಂತಿಸಿ ಇದೇ ಗೆಳೆಯರ ಬಳಗ ದಾಂಡೇಲಿ ತಹಶೀಲ್ದಾರರಾದ ಶೈಲೇಶ ಪರಮಾನಂದ ಅವರಿಗೆ ಮನವಿ ಮಾಡಿದೆ. ಈ ರುದ್ರಭೂಮಿ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಇಲಾಖೆಗೆ ಹೇಳಿದರೂ, ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗದಿರುವುದರಿಂದ ರುದ್ರಭೂಮಿಯನ್ನು ಅಭಿವೃದ್ಧಿಗೊಳಿಸಲು ಅಣಿಯಾಗಿದ್ದೆÃವೆ ಎಂದು ಇದೇ ಸಂದರ್ಭದಲ್ಲಿ ನೇತೃತ್ವ ವಹಿಸಿಕೊಂಡ ಗೆಳೆಯರ ಬಳಗದ ಪ್ರಕಾಶ ಜಾನು ಬೇಟಕರ ಅವರು ತಹಶೀಲ್ದಾರರಾಗಿ ಮನವಿ ನೀಡಿ ಹೇಳಿದರು.

ರಮೇಶ ನಾಯ್ಕ, ನಂದೀಶ ಮುಂಗವರವಾಡಿ, ಮೋಹನ ಹಲವಾಯಿ, ದಶರಥ ಬಂಡಿವಡ್ಡರ, ವಿಷ್ಣು ವಾಜ್ವೆ, ಬುಧವಂತ ಗೌಡ ಪಾಟೀಲ ಹಾಗೂ ಪ್ರಕಾಶ ಜಾನು ಬೇಟಕರ, ಕಿರಣ್ ರಜಾಪೂತ್, ವಿನಯ್ ರಘುವೀರ ಗುಣೆ, ರವಿ ಪಾವಸ್ಕಾರ, ಪ್ರಕಾಶ ಸಪ್ರೆ, ವಕೀಲರಾದ ಎಚ್.ಎಸ್.ಕುಲಕರ್ಣಿ, ವಿಕರಂ ಸೋಗಿ, ಸುಧಾಕರ ರೆಡ್ಡಿ, ಮಹೇಶ ಸಾವಂತ, ಸತೀಶ ವಿದಾತ, ಮಹೇಶ ನಾಗಪ್ಪ, ಅವಿನಾಶ ಗೋಡಕೆ ಇದ್ದರು.

loading...