ತಹಶೀಲ್ದಾರರಾಗಿ ಅಧಿಕಾರಿ ಸ್ವಿÃಕರಿಸಿದ ಶೈಲೇಶ್

0
15

 

ದಾಂಡೇಲಿ: ದಾಂಡೇಲಿ ತಾಲೂಕಿನ ತಹಶೀಲ್ದಾರರಾಗಿ ಶೈಲೇಶ್ ಪರಮಾನಂದರವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿಂದೆ ಲೋಕಸಭಾ ಚುನಾವಣೆಯ ನಿಮಿತ್ತ ಇವರನ್ನು ಬೆಳಗಾವಿಗೆ ವರ್ಗಾಯಿಸಲಾಗಿತ್ತು. ಚುನಾವಣಾ ಸಂದರ್ಭದಲ್ಲಿ ದಾಂಡೇಲಿ ತಹಶೀಲ್ದಾರರಾಗಿದ್ದ ಚಾಮರಾಜ ಪಾಟೀಲ ಅವರು ಲಿಂಗಸೂರಿಗೆ ವರ್ಗಾವಣೆಗೊಂಡಿದ್ದಾರೆ. ತಹಶೀಲ್ದಾರ್ ಕಾರ್ಯಾಲಯದ ಕಂದಾಯ ಅಧಿಕಾರಿ ಮಂಜುನಾಥ ಮೇತ್ರಿ, ಸಿಬ್ಬಂದಿಗಳಾದ ಗೌಡಪ್ಪ ಬನಕದಿನ್ನಿ, ದಯಾನಂದ ಚಿಟ್ಟಿ, ರವಿ ಕಮ್ಮಾರ್, ಸಾವಿತ್ರಿ ಹಳಿಯಾಳ, ಅರ್ಜುನ ಕೊಟೂಳ್ಕರ್, ಪ್ರಾನ್ಸಿಸ್ ಇನಾಜ್ ಜಳಕೆ, ರಾಮಣ್ಣ ಮೊದಲಾದವರು ತಹಶೀಲ್ದಾರರಾಗಿ ಆಗಮಿಸಿದ ಶೈಲೇಶ ಪರಮಾನಂದರವರನ್ನು ಬರಮಾಡಿಕೊಂಡರು. ವರ್ಗಾವಣೆಗೊಂಡ ಚಾಮರಾಜ ಪಾಟೀಲರಿಗೆ ಬೀಳ್ಕೊಟ್ಟರು.

loading...