ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಾಲ್ಮೀಕಿ ಸಂಘಟನೆಗಳಿಂದ ಜಿಲ್ಲಾಧಿಕಾರಿಗೆ‌ ಮನವಿ

0
228

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಬೆಳಗಾವಿ: ಬೇರಡ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ಮೀಸಲಾತಿ ಹೆಚ್ಚಳ, ಬುಡಕಟ್ಟ ಜನಾಂಗದಲ್ಲದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದೆಂದು ಸೇರಿದಂತೆ ವಿವಿಧ ಬೇಡಿಕೆ ಗಳಿಗೆ ಆಗ್ರಹಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕಿ ಸೊಸಿಯಲ್ ಪೌಂಡೇಶನ್, ರಾಜ್ಯ ಮಹಿಳಾ ಘಟಕ, ರಾಜ್ಯ ಯುವ ಘಟಕ ,ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರ ನೌಕರರ ಸಂಘ, ವಾಲ್ಮಿÃಕಿ ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಿದರು.
ರಾಜ್ಯ ಮೈತ್ರಿ ಸರ್ಕಾರವು ಪರಿಶಿಷ್ಟ ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕು ಎಂಬ ಸಂವಿಧಾನ ಆಶಯಗಳನ್ನು ಜಾರಿಗೊಳಿಸದೆ ಒಂದಾದರ ಮೇಲೊಂದರಂತೆ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿರುವ ಕೆಲವು ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಸಲು ಇತ್ತಿಚೇಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.ಇದರಿಂದ ರಾಜ್ಯ ವಾಲ್ಮೀಕಿ ನಾಯಿ ಸಮಾಜಕ್ಕೆ ಅನ್ಯಾಯವಾಗಲಿದೆ. ಆದ್ದರಿಂದ ತಕ್ಷಣ ಸಿಎಂ ಕುಮಾರಸ್ವಾಮಿಯವರು ಬುಡಕಟ್ಟು ಸಮುದಾಯವಲ್ಲದ ಜನರನ್ನು ಸೇರಿಸಿರುವುದನ್ನು ಹಿಂಪಡೆಯಬೇಕು ಹಾಗೂ ನಮ್ಮ ಬೇಡಿಕೆಗಳಿಗೆ ಮನವಿಯನ್ನು ಕುಲಂಕುಷವಾಗಿ ಪರಿಶೀಲಿಸಿ ಇಡೇರಿಸಬೇಕು ಇಲ್ಲದಿದ್ದರಿ ಸುವರ್ಣ ಸೌಧದ ಎದುರು ಸತ್ಯಾಗ್ರಹ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮಿÃಕಿ ನಾಯಿಕ ಸೋಸಿಯಲ್ ಪೌಂಡೇಶನ್ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ವಾಲ್ಮೀಕ ಸಂಘಟನೆ ರೇಣುಕಾ ಕುಂಡೇದ, ಅಶೋಕ ಘಸ್ತಿ, ಗಂಗವ್ವ ಬುಡ್ರಿ, ಸಿದ್ದಲಿಂಗ ಸಿದ್ದಯ್ಯನವರ, ಸರ್ಕಾರಿ ನೌಕರರ ಸಂಘದ ಸಿದರಾಯಿ ಶಿಗಿಹಳ್ಳಿ ಸೇರಿದಂತೆ ಇತರರು ಇದ್ದರು.

loading...