ಧೋನಿ ಇಂಗ್ಲೆಂಡ್‌ಗೆ ತೆರಳಿರುವುದು ಕ್ರಿಕೆಟ್‌ ಆಡಲು ಯುದ್ಧ ಮಾಡಲಿಕ್ಕಲ್ಲ : ಇಮ್ರಾನ್‌ ಖಾನ್‌

0
8

ನವದೆಹಲಿ:- ಐಸಿಸಿ ವಿಶ್ವಕಪ್‌ ಟೂರ್ನಿಯ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೇನೆಯ ‘ಕಠಾರಿ ಮುದ್ರೆ’ ಹೊಂದಿರುವ ಕೈಗವಸುಗಳ ಮೂಲಕ ವಿಕೆಟ್‌ ಕೀಪಿಂಗ್‌ ಮಾಡುತ್ತಿದ್ದ ಮಹೆಂದ್ರ ಸಿಂಗ್‌ ಧೋನಿ ಅವರಿಗೆ ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಅವರು ತಿರುಗೇಟು ನೀಡಿದ್ದಾರೆ

” ಎಂ ಎಸ್‌ ಧೋನಿ ಇಂಗ್ಲೆಂಡ್‌ಗೆ ತೆರಳಿರುವುದು ಕ್ರಿಕೆಟ್‌ ಆಡಲಿಕ್ಕೆ ಹೊರತು ಮಹಾಭಾರತ ಯುದ್ಧ ಮಾಡಲಿಕ್ಕಲ್ಲ. ಭಾರತೀಯ ಮಾಧ್ಯಮಗಳಲ್ಲಿ ಎಂತಹ ವಿಡಂಬನಾತ್ಮಕ ಚರ್ಚೆ, ಭಾರತೀಯ ಮಾಧ್ಯಮದ ಒಂದು ವಿಭಾಗವು ಯುದ್ಧದ ಬಗ್ಗೆ ತುಂಬಾ ಗೀಳನ್ನು ಹೊಂದಿದೆ. ಹಾಗಾಗಿ, ಅವರನ್ನು ಸಿರಿಯಾ, ಅಫ್ಘಾನಿಸ್ತಾನ ಹಾಗೂ ರವಾಂಡ್‌ಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು. ಮೂರ್ಖರು.!” ಎಂದು ಇಮ್ರಾನ್‌ ಖಾನ್‌ ಟ್ವಿಟ್‌ ಮಾಡಿದ್ದಾರೆ.
ಐಸಿಸಿ ವಿಶ್ವಕಪ್‌ ಮೊದಲನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡದ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ ಅವರು ವಿನೂತನ ಮಾದರಿಯಲ್ಲಿ ಭಾರತೀಯ ಸೇನೆಗೆ ಗೌರವ ಸಲ್ಲಿಸಿದ್ದರು. ಸೇನೆಯ ‘ಕಠಾರಿ ಮುದ್ರೆ’ ಇರುವ ಕೈಗವಸುಗಳ ಮೂಲಕ ವಿಕೆಟ್‌ ಕೀಪಿಂಗ್‌ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿತ್ತು.
40 ನೇ ಓವರ್‌ನಲ್ಲಿ ಯಜುವೇಂದ್ರ ಚಾಹಲ್‌ ಬೌಲಿಂಗ್‌ ಮಾಡುವ ವೇಳೆ ಆ್ಯಂಡಿಲೆ ಫೆಹ್ಲುಕ್ವಾಯೊ ಅವರನ್ನು ಸ್ಟಂಪ್‌ ಮಾಡುವ ಸಂದರ್ಭದಲ್ಲಿ ಧೋನಿ ಅವರು “ಬಲಿದಾನ್‌ ಬ್ಯಾಡ್ಜ್‌” ಗುರುತು ಇರುವ ಕೈಗವಸುಗಳನ್ನು ಹಾಕಿರುವುದನ್ನು ಟಿಲಿವಿಷನ್‌ ರಿಪ್ಲೇ ನಲ್ಲಿ ತೋರಿಸಲಾಗಿತ್ತು.
ಇದನ್ನು ಗಮನಿಸಿದ ಐಸಿಸಿ ” ಧೋನಿ ವಿಕೆಟ್‌ ಕೀಪಿಂಗ್‌ ಗ್ಲೌಸ್‌ಗೆ ಅಂಟಿಸಿಕೊಂಡಿರುವ ಸೇನೆಯ ಚಿಹ್ನೆಯನ್ನು ತೆಗೆಯುವಂತೆ ಬಿಸಿಸಿಐ ಸೂಚಿಸಿತು
ಐಸಿಸಿ ನಿಯಮದ ಪ್ರಕಾರ ” ಅಂತಾರಾಷ್ಟ್ರೀಯ ಪಂದ್ಯದ ಸಂದರ್ಭದಲ್ಲಿ ತಾನು ಬಳಸುವ ಉಪಕರಣ ಹಾಗೂ ಧರಿಸುವ ಸಮವಸ್ತ್ರಗಳಲ್ಲಿ ಯಾವುದೇ ಬಗೆಯ ರಾಜಕೀಯ, ಧಾರ್ಮಿಕ ಅಥವಾ ಜನಾಂಗೀಯ ಚಟುವಟಿಕೆಗಳ ಸಂಬಂಧ ಸಂದೇಶ ಸಾರುವ ಚಿಹ್ನೆಗಳನ್ನು ಪ್ರದರ್ಶಿಸಲು ಅನುಮತಿ ಇಲ್ಲ.

loading...